ಹಾಸನ

'ನಿರುದ್ಯೋಗಿ ಯುವಜನರಿಗೆ ಹೈನುಗಾರಿಕೆ ಲಾಭದಾಯಕ'

Published On :

ಹಾಸನ: ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ನಿರುದ್ಯೋಗ ವಿದ್ಯಾವಂತ ಯುವಕ ಯುವತಿಯರಿಗೆ ಹೈನುಗಾರಿಕೆ ಒಂದು ಲಾಭದಾಯಕ ಉದ್ಯಮವಾಗಿದೆ ಎಂದು  ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಡಾ. ಕಾಂತರಾಜ ಕೆ.ಜೆ., ಡಾ. ಕೃಷ್ಣಾರೆಡ್ಡಿ, ಜಿ.ಎಸ್. ಮತ್ತು ಡಾ.ಎಸ್. ಚನ್ನಕೇಶವ ತಿಳಿಸಿದ್ದಾರೆ.
ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ರೈತರ ಜೀವನಕ್ಕೊಂದು ದಾರಿ ತೋರಿಸುವಲ್ಲಿ ನಿರಂತರ ಆದಾಯ ನೀಡಬಲ್ಲ ಹೈನುಗಾರಿಕೆ ಉದ್ಯಮವು ಬಹು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ. ಉತ್ತಮ ಪೋಷಣೆ ಮಾಡಿದ ಮಿಶ್ರತಳಿ ರಾಸುಗಳು 14-16 ತಿಂಗಳಿಗೆ ಪ್ರಥಮ ಬಾರಿಗೆ ಬೆದೆಗೆ ಬರುತ್ತವೆ. ಈ ಸಮಯದಲ್ಲಿ ಕೃತಕ ಗರ್ಭಧಾರಣೆ ಮಾಡಿಸಿದಲ್ಲಿ 24-26 ತಿಂಗಳುಗಳಲ್ಲಿ ಪ್ರಥಮ ಕರು ಪಡೆಯಬಹುದು. ನಾಟಿ ಹಸುಗಳು ತಮ್ಮ ಪ್ರಥಮ ಕರುವನ್ನು 50-60 ತಿಂಗಳುಗಳಲ್ಲಿ ಕೊಡುತ್ತವೆ. ರಾಸುಗಳಲ್ಲಿ ಬೆದೆಯ ಚಕ್ರ 18-21 ದಿನಗಳು ಮತ್ತು ಬೆದೆಯ ಕಾಲ 24 ಗಂಟೆಗಳು. ಬೆದೆಗೆ ಬಂದ 12 ರಿಂದ 18 ಘಂಟೆಯೊಗಳಗೇ ಕೃತಕ ಗರ್ಭಧಾರಣೆ ಮಾಡಿಸಬೇಕು. ಕೃತಕ ಗರ್ಭಧಾರಣೆ ಮಾಡಿಸಿದ 2-3 ತಿಂಗಳಲ್ಲಿ ಹಸು ಗರ್ಭಧರಿಸಿದ ಬಗ್ಗೆ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಮಾಡಿಸಿ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಗರ್ಭ ಧರಿಸಿಲ್ಲವೆಂದಾದರೆ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಮಾಡಿಸಬೇಕು ಎಂದು ಹೇಳಿದ್ದಾರೆ.
ಹೈನುಗಾರಿಕೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದ ಅವರು, ಕೊಟ್ಟಿಗೆಯಲ್ಲಾಗಲೀ ಅಥವಾ ರಾಸುಗಳ ಮೈಮೇಲಾಗಲೀ ಉಣ್ಣೆ ಸೇರದಂತೆ ಕಾಲಕಾಲಕ್ಕೆ ಪಶುವೈದ್ಯಕೀಯ ಸಲಹೆ ಮೇರೆಗೆ ಔಷಧಿ ಸಿಂಪಡಿಸಬೇಕು. ಮುಂಜಾಗ್ರತೆಯಾಗಿ ರೋಗಗಳ ವಿರುದ್ಧ ಲಸಿಕೆಗಳನ್ನು ಹಾಕಿಸಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.