ಜಿಎಸ್ಎಸ್ ಸಾಂಸ್ಕೃತಿಕವಾಗಿ ಬದುಕಿರುತ್ತಾರೆ: ಯತೀಶ್ವರ್
ರಾಮನಾಥಪುರ: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು ಭೌತಿಕವಾಗಿ ಇಲ್ಲದಿರುವುದು ಸತ್ಯವಾದರೂ, ಸಾಂಸ್ಕೃತಿಕವಾಗಿ ಅವರು ಯಾವಾಗಲೂ ನಮ್ಮೊಂದಿಗೆ ಬದುಕಿರುತ್ತಾರೆಂಬುದು ಅಷ್ಟೇ ಸತ್ಯ ಎಂದು ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಸಿ.ಚ. ಯತೀಶ್ವರ್ ಹೇಳಿದ್ದಾರೆ.
ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನ ಕೂಟ ಹಾಗೂ ಸಾಂಸ್ಕತಿಕ ವೇದಿಕೆಯ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರಿಗೆ ನುಡಿ-ಗೀತ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರ ಶಿಷ್ಯರಾದ ಅವರು ಕನ್ನಡ-ನಾಡು-ನುಡಿಗೆ ಸಲ್ಲಿಸಿದ ಸಾಹಿತ್ಯ ಸೇವೆ ಅಪಾರವಾದುದು. ಯಾವುದೇ ಪ್ರಚಾರಕ್ಕೂ ಆಶಿಸದೇ, ಸದ್ದುಗದ್ದಲಗಳ ಆಚೆ ನಿಂತು ಕಾವ್ಯ ಕೃಷಿ: ಸಾಹಿತ್ಯದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದರು ಎಂದು ಹೇಳಿದರು.
ಮನಗಳಲ್ಲಿ ತುಂಬಿದ್ದಾರೆ: ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಜೆ. ಶೈಲಜಾಕುಮಾರಿ ಮಾತನಾಡಿ, ಜಿ.ಎಸ್.ಎಸ್ ಅವರು ಸದ್ಗುಣಗಳ ಸಾಕಾರ ಮೂರ್ತಿಯಾಗಿದ್ದರು. ಅವರು ರಚಿಸಿದ ಕಾವ್ಯ ಅತ್ಯಂತ ಮಧುರವಾದುದು. ಪ್ರತಿಯೊಬ್ಬ ಕನ್ನಡಿಗನೂ ಅವರ ಕಾವ್ಯವನ್ನು ನಿರಂತರವಾಗಿ ಆಸ್ವಾದಿಸುತ್ತಾ ಬಂದಿದ್ದಾರೆ. ನಾನು ಬಿಡುವಿನ ವೇಳೆಯಲ್ಲಿ ಇರುವಾಗಲೆಲ್ಲ ಜಿಎಸ್ಎಸ್ ಅವರ ಕವಿತೆಗಳನ್ನು ನನ್ನ ಕಂಠಸಿರಿಯಲ್ಲಿ ಹಾಡಿಕೊಳ್ಳುತ್ತಿರುತ್ತೇನೆ. ಹಾಗೆಯೇ ಇಂದಿನ ಕಾರ್ಯಕ್ರಮದಲ್ಲಿ ವಿದ್ವಾನ್ ವಿ.ಎನ್.ಎಸ್. ಮುರಳಿಯವರು ತಮ್ಮ ಸುಮಧುರ ಗಾಯನದ ಮೂಲಕ ಜಿಎಸ್ಎಸ್ ಅವರನ್ನು ನಮ್ಮ ಮನಗಳಲ್ಲಿ ತುಂಬಿದ್ದಾರೆ ಎಂದು ನುಡಿದರು.
ಗಾಯನದ ಶ್ರದ್ಧಾಂಜಲಿ: ಕಾಲೇಜಿನ ಹಳೆಯ ವಿದ್ಯಾರ್ಥಿನಿ ಶಶಿರೇಖಾ ಹಾಗೂ ಅವರ ಪತಿ ಬಿ.ಎಸ್.ಎಸ್ ಮುರಳಿ ಮತ್ತು ತಂಡದವರು ಜಿ.ಎಸ್.ಎಸ್ ಅವರ ಕವನಗಳನ್ನು ಭಾವಪೂರ್ಣವಾಗಿ ಹಾಡುವುದರ ಮೂಲಕ ಕವಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಅವರೊಂದಿಗೆ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ಗಾಯನದಲ್ಲಿ ಭಾಗವಹಿಸಿದ್ದು ಅತ್ಯಂತ ವಿಶೇಷವಾಗಿತ್ತು.ಬೋಧಕ ಹಾಗೂ ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

