ಹಾಸನ

'ದೇಶ ದುರ್ಬಲಗೊಳಿಸುವಲ್ಲಿ ಕಾಂಗ್ರೆಸ್ ಪಾತ್ರ ಹಿರಿದು'

Published On :

ಅರಕಲಗೂಡು: ಕಾಂಗ್ರೆಸ್ ಮುಕ್ತ ಭಾರತವಾಗಬೇಕೆಂಬುದು ಇಂದಿನ ಜನರ ಅಭಿಪ್ರಾಯವಾಗಿದ್ದು, ಇದು ದೇಶದಲ್ಲಿ ಎದ್ದಿರುವ ಬಿಜೆಪಿ ಅಲೆಗೆ ಹಿಡಿದ ಕನ್ನಡಿಯಾಗಿದೆ ಎಂದು ಬಿ.ಜೆ.ಪಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ತಿಳಿಸಿದ್ದಾರೆ.
ಇಲ್ಲಿನ ಚನ್ನಬಸವೇಶ್ವರ ಸಮುದಾಯಭವನದಲ್ಲಿ ಹಾಸನ ಜಿಲ್ಲಾ ಚುನಾವಣಾ ಸಮಿತಿ ಆಯೋಜಿಸಿದ್ದ ಚುನಾವಣಾ ನಿರ್ವಹಣಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಬಿ.ಜಿ.ಪಿ ಎರಡೂ ಪಕ್ಷಗಳು ಬಿನ್ನವಾದ ಸಂಸ್ಕೃತಿ ಅನುಸರಿಸುತ್ತಾ ಬಂದಿವೆ.
ಸ್ವಾತಂತ್ರ್ಯಾನಂತರ 65 ವರ್ಷಗಳಲ್ಲಿ ಹಲವು ಸಂಕಷ್ಟಗಳಿಗೆ ತಳ್ಳಿರುವ ಕಾಂಗ್ರೆಸ್ ದೇಶದ ಅಭಿವೃದ್ಧಿಯಲ್ಲಿ ಹಿನ್ನೆಡೆ ಸಾಧಿಸಿದೆ ಎಂದರು. 30 ವರ್ಷಗಳಲ್ಲೇ ದೇಶದ ಜನರ ಹಕ್ಕುಗಳನ್ನು ಹತ್ತಿಕ್ಕಿದ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿಯನ್ನು ಹೇರಿ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ್ದನ್ನು ಮರೆಯಬಾರದು ಎಂದ ಅವರು ಕಾಂಗ್ರೆಸ್ ಜಾತಿ ಮತ್ತು ಭ್ರಷ್ಟ ವ್ಯವಸ್ಥೆಯನ್ನು ಪೋಷಿಸುತ್ತಾ ಬಂದಿದೆ ಎಂದು ಆರೋಪಿಸಿದರು.
ಗೌಡರ ಬಗ್ಗೆ ಗೌರವವಿದೆ:   ಎಂಬುದನ್ನು ದೇವೇಗೌಡರು ಅರಿಯಬೇಕು. ದೇವೇಗೌಡರು ಈ ನೆಲದ ಸಂಸ್ಕೃತಿಗೆ ಒತ್ತು ನೀಡುವವರು. ದೈವ ಭಕ್ತರು. ದೇಶದ ಬಗೆಗಿನ ಕಾಳಜಿಯಿಂದ ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದವರು. ಅವರ ಬಗೆಗೆ ಗೌರವವಿದೆ. ಆದರೆ ರಾಷ್ಟ್ರರಕ್ಷಣೆಗಾಗಿ ಬಿಜೆಪಿಯನ್ನು ಬೆಂಬಲಿಸುವುದೇ ಸೂಕ್ತ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ರಚನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು: ಹಾಸನ ಜಿಲ್ಲಾ ಸಂಘಟನಾ ಉಸ್ತುವಾರಿ ಮೇದಪ್ಪ ಮಾತನಾಡಿ, ಪ್ರಸಕ್ತ ದೇಶದಲ್ಲಿ ಬಿಜೆಪಿ ಅಲೆ ಇದ್ದು,ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾಗಿ ಕಾರ್ಯಕರ್ತರು ದುಡಿಯಬೇಕಿದೆ ಎಂದರು.ಮಾಜಿ ವಿಧಾನ ಪರಿಷತ್ ಸದಸ್ಯ ತೋಂಟದಾರ್ಯ ಮಾತನಾಡಿ ದೇಶವನ್ನು ವಿಭಜನೆ ಮಾಡಿದ ಕಾಂಗ್ರೆಸ್ ಇಂದು ಜಾತಿ-ಧರ್ಮಗಳ ವಿಭಜನೆಗೆ ಮುಂದಾಗಿದೆ.
ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮುಂದುವರೆದರೆ ದೇಶಕ್ಕೆ ಉಳಿಗಾಲವಿಲ್ಲ. ಪ್ರಸಕ್ತ ಮೋದಿ ಒಬ್ಬ ಆಶಾಕಿರಣವಾಗಿದ್ದು, ಪಕ್ಷದ ಕಾರ್ಯಕರ್ತರು ರಚನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.