ಒಳ್ಳೆಯ ಕೆಲಸ ಮಾಡುವ ಕಡೆ ಮನಸು ಹರಿಸಬೇಕು
ಚನ್ನರಾಯಪಟ್ಟಣ: ಮನುಷ್ಯ ಕೆಟ್ಟ ಕೆಲಸವನ್ನು ಮಾಡುವುದುಬಿಟ್ಟು ಒಳ್ಳೆಯ ಕೆಲಸ ಮಾಡುವ ಕಡೆಗೆ ಮನಸ್ಸು ಮಾಡಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಂಜುನಾಥಪುರದಲ್ಲಿ ಮಂಗಳವಾರ ನಡೆದ ಶ್ರೀಕ್ಷೇತ್ರ ಪುಣ್ಯಧಾಮ, ಧರ್ಮಜ್ಯೋತಿ ಶ್ರೀಶನೇಶ್ವರ ಮತ್ತು ಮುನೇಶ್ವರ ಟ್ರಸ್ಟ್ ವತಿಯಿಂದ ನಡೆದ 16ನೇ ವರ್ಷದ ಕೆಂಡೋತ್ಸವ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಮನುಷ್ಯನು ಬೇರೆಯವರಿಗೆ ಸ್ವಾವಲಂಬಿಯಾಗಿ ಬದುಕಬಾರದು. ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು. ಬೇರೆಯವರಿಗೆ ಕೆಟ್ಟದನ್ನು ಬಯಸದೆ ಒಳ್ಳೆಯ ಸನ್ಮಾರ್ಗದಲ್ಲಿ ನಡೆಯಬೇಕು.
ನಿಸರ್ಗಕ್ಕೆ ಕೇಡು ಬೇಡ: ಇಂತಹ ಧಾರ್ಮಿಕ ಕೇಂದ್ರಗಳು ಹಾಗೂ ಕ್ಷೇತ್ರಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಬೇಕು. ದಯದಿಂದ ಭಕ್ತಿ ಬರಬೇಕು ಬೇರೆಯವರಿಗೆ ಉಪಕಾರಿಯಾಗಬೇಕು.
ಭಗವಂತನು ಮನುಷ್ಯನಿಗೆ ಜನ್ಮ ನೀಡಿದ್ದಾನೆ. ಅದರಂತೆ ಆಹಾರ, ನೀರು, ಗಾಳಿ, ಪರಿಸರ ಇವುಗಳನ್ನೂ ನೀಡಿದ್ದು ಮನುಷ್ಯನು ಅವುಗಳಿಗೆ ಕೆಡಕನ್ನು ಉಂಟುಮಾಡುತ್ತಿರುವುದು ಬುದ್ಧಿವಂತಿಕೆಯ ವಿಚಾರವಲ್ಲ ಎಂದರು.
ಸಮಂಜಸವಲ್ಲ: ಗುರುಹಿರಿಯರನ್ನು, ತಂದೆ- ತಾಯಿಯರನ್ನು ಪೂಜಿಸುವುದರಿಂದ ನಿಮ್ಮ ಜನ್ಮ ಸಾರ್ಥ್ಥಕವಾಗುತ್ತದೆ.
ತಂದೆ ತಾಯಿಯರು ಬದುಕಿರುವಾಗ ಅವರ ಸೇವೆ ಮಾಡದೆ ಅವರು ಮರಣ ಹೊಂದಿದ ಮೇಲೆ ಆಡಂಬರದ ಕಾರ್ಯ ಮಾಡುತ್ತಾ. ಇದು ಸಮಂಜಸವಲ್ಲ ಎಂದರು.
ಭಕ್ತರೇ ಸಹಕಾರಿ: ಧರ್ಮಾಧಿಕಾರಿ ಶ್ರೀಧರ ಸ್ವಾಮೀಜಿ ಮಾತನಾಡಿ, ಗುರು- ಗುರಿ ಇಲ್ಲದ ಮನುಷ್ಯ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಭಕ್ತ ಸಾಗರವೇ ನನಗೆ ಗುರು ಮತ್ತು ಗುರಿ. ಇಂತಹ ಧಾರ್ಮಿಕ ಕೇಂದ್ರ ಮತ್ತು ಮಠ- ಮಾನ್ಯಗಳು ಬೆಳೆಯಲು ಅವರೇ ಸಹಕಾರಿ ಎಂದರು.
ತೃಪ್ತಿಕರ: ಮನುಷ್ಯನು ನೆಮ್ಮದಿಗಾಗಿ ಇಂತಹ ಧಾರ್ಮಿಕ ಕೇಂದ್ರಗಳಿಗೆ ಬಂದು, ಅವನಲ್ಲಿರುವಂತಹ ಕಷ್ಟ ಕಾರ್ಪಣ್ಯಗಳನ್ನು ದೇವರಲ್ಲಿ ಪ್ರಾರ್ಥಿಸಿ ಕಷ್ಟ ಇಡೇರಿದ ಮೇಲೆ ಅವರ ಮನಸ್ಸಿಗೆ ಆಗುವ ಸಂತೋಷವೇ ನನಗೆ ತೃಪ್ತಿಕರವಾಗಿದೆ ಎಂದು ಹೇಳಿದರು.
ಚುಂಚನಕಟ್ಟೆಯ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಕಬ್ಬಳಿ ಕ್ಷೇತ್ರದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶಾಸಕ ಸಿ. ಎನ್. ಬಾಲಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್. ಎನ್. ಲೊಕೇಶ್, ಪರಿಸರ ಪ್ರೇಮಿ ಸಿ. ಎನ್. ಅಶೋಕ್, ಟಿ. ನಂಜಪ್ಪ, ಪಟೇಲ್ ರಾಜಪ್ಪ, ಮಂಜಪ್ಪ, ಇಂಜಿನಿಯರ್ ಲಕ್ಷ್ಮಣ್, ದೇವರಾಜೇಗೌಡ ಇದ್ದರು.
ಶಿವಾನಂದ್ ನಿರೂಪಿಸಿದರು. ಹೆಚ್. ಎನ್. ಪರಮೇಶಾಚಾರ್ ಸ್ವಾಗತಿಸಿದರು. ಪವಿತ್ರ ಪ್ರಾರ್ಥಿಸಿದರು. ರವೀಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

