ಹಾಸನ

'ಚುನಾವಣೆ ಬಂದಾಗಲಷ್ಟೇ ಜನರನ್ನು ಓಲೈಸುವ ಜಾಯಮಾನ ನಮ್ಮದಲ್ಲ'

Published On :

ಆಲೂರು: ಕುಟುಂಬ ರಾಜಕಾರಣ ಹಾಗೂ ಅವಕಾಶವಾದಿ ರಾಜಕಾರಣಿ ದೇವೇಗೌಡರನ್ನು ಸೋಲಿಸಲು ಕಾರ್ಯಕರ್ತರು ಒಗ್ಗೂಡಿ ಭಿನ್ನಾಭಿಪ್ರಾಯ ಬದಿಗೊತ್ತಿ ತಮ್ಮನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಕಾರ್ಯ ಪ್ರವೃತ್ತರಾಗಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಮನವಿ ಮಾಡಿದರು.
 ಅವರು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ  ಮಾತನಾಡಿದರು. ದೇಶದೆಲ್ಲೆಡೆ ಕಾಂಗ್ರೆಸ್ ಅಲೆ ಇದೆ. ರಾಹುಲ್‌ಗಾಂಧಿಯವರ ಯುವ ನಾಯಕತ್ವದಲ್ಲಿ ಯುವಕರೆಲ್ಲ ಸಂಘಟಿತರಾಗಿದ್ದು, ದೇವೇಗೌಡರು ಪ್ರಧಾನಿಗಳಾಗಿದ್ದ ಅವಧಿಯಲ್ಲಿ ಮಾಡಿದ ಕಾರ್ಯ ಶೂನ್ಯ ಕೇವಲ ಚುನಾವಣೆ ಬಂದಾಗ ಜನರ ಬಳಿ ಬಂದು ಕಣ್ಣೀರಿಟ್ಟು  ನಾಟಕವಾಡಿ ಗೆದ್ದ ನಂತರ ಜನತೆಯ ಕೈಗೆ ಸಿಗದೆ ತಮ್ಮ ಮಕ್ಕಳಿಗೆ ಎಂಪಿ ಅನುದಾನವನ್ನು ಅವರ ಸಹಚರರ ಅಭಿವೃದ್ಧಿಗೆ ಹಂಚಲು ಬಿಟ್ಟು ಕಣ್ಮರೆಯಾಗುವ ಇವರು ಕೊನೆಯ ಚುನಾವಣೆ ಎಂದು ಕಣ್ಣೀರಿಡುತ್ತಿದ್ದಾರೆ.
 ಕ್ಷೇತ್ರದಾದ್ಯಂತ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಸಹ ಸ್ಪಂದಿಸದೆ ಚುನಾವಣೆಯ ಸಂದರ್ಭದಲ್ಲಿ ಬಂದು ನಾಟಕವಾಡಿ ಜನರನ್ನು ಓಲೈಸುವ ಕೆಲಸ ಮಾಡುವ ಜಾಯಮಾನ ನಮ್ಮದಲ್ಲ ದೇವೇಗೌಡ ಹಾಗು ಅವರ ಕುಟುಂಬದ ನಾಟಕ ಜನರಿಗೆ ತಿಳಿದಿದೆ ಎಂದರು.
 ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ತೃತೀಯ ರಂಗದ ನೇತೃತ್ವದಲ್ಲಿ ಮತ್ತೊಮ್ಮೆ ಪ್ರಧಾನಿಯಾಗುವ ಹಗಲುಗನಸು ಕಾಣುತ್ತಿರುವ ದೇವೇಗೌಡರಿಗೆ ಈ ಬಾರಿ ಸೋಲು ನಿಶ್ಚಿತ ಚುನಾವಣೆಯಲ್ಲಿ ಜನಪರ ಹೋರಾಟಗಾರ ಮರಿ ಸಿಂಹ ಎ.ಮಂಜು ಗೆಲುವು ನಿಶ್ಚಿತ ಎಂದು ಹೇಳಿದರು.
 ಮೋದಿ ಅಲೆ ಇಲ್ಲಿ ನಡೆಯುವುದಿಲ್ಲ. ಗುಜರಾತ್‌ನಲ್ಲಿ ಮೋದಿಯ ಸಾಧನೆ ಏನೆಂದು ಇಡೀ ದೇಶಕ್ಕೆ ತಿಳಿದಿದೆ ಭ್ರಷ್ಟಾಚಾರ ವಿರೋಧಿ ಪಕ್ಷವೆಂದು ಬೊಬ್ಬಿಡುವ ಇವರ ಪಕ್ಷದ ಮುಖ್ಯ ಮಂತ್ರಿ ಜೈಲಿಗೆ ಹೋಗಿ ಬಂದಿದ್ದು ಎಲ್ಲರಿಗೂ ತಿಳಿದ ವಿಚಾರ ಯಾವುದೇ ಪಕ್ಷದ ಮಾತುಗಳಿಗೆ ಮರುಳಾಗದೆ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.
 ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಶಿವರಾಂ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹಾಗೂ ಆಲೂರು ಕಟ್ಟಾಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್.ರಂಗನಾಥ್ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.