ಹಾಸನ

'ಉತ್ತಮ ಸಮಾಜ ನಿರ್ಮಾಣದ ಕನಸು ಕಟ್ಟಿಕೊಳ್ಳಿ'

Published On :

ಹಾಸನ: ಮನುಷ್ಯನ ಮನಸ್ಸು ಚಂಚಲ ಹಾಗೂ ಒಬ್ಬರಿಗಿಂತ ಮತ್ತೊಬ್ಬರ ಮನಸ್ಸು ವಿಭಿನ್ನವಾಗಿದ್ದು, ಉತ್ತಮ ಸಮಾಜ ನಿರ್ಮಾಣದ ಕನಸು  ಕಟ್ಟಿಕೊಳ್ಳಬೇಕು ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಶಿವಲೀಲಾ ಹೇಳಿದರು.
ನಗರದ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸ್ಥಾನ ಸಭಾಂಗಣದಲ್ಲಿ ನಡೆದ ಮಹಿಳಾ ದಿನಚರಣೆ ಕಾರ್ಯಕ್ರಮ ಹಾಗೂ ಸ್ವಾಸ್ಥ್ಯ ಸಮಾಜದ ಹರಿಕಾರಳಾಗಿ ಮಹಿಳೆ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯನ ಮನಸ್ಸು ವಿಭಿನ್ನವಾಗಿದ್ದು, ಉತ್ತಮ ಸಮಾಜ ನಿರ್ಮಾಣದ ಕನಸ್ಸು ಕಟ್ಟಿಕೊಂಡಿರುವುದು ಒಂದು ಕಡೆ, ಮತ್ತೊಂದು ಕಡೆ ಸಮಾಜ ಹೊಡೆಯುವ ಕೆಲಸ ನಡೆಯುತ್ತಿದೆ ಎಂದರು.
ಸಲಹೆ: ಸಮಾಜದಲ್ಲಿ ಮೌಲ್ಯಗಳು ಕುಸಿಯದಂತೆ ಕಾಪಾಡುವಲ್ಲಿ ಮಹಿಳೆಯ ಪಾತ್ರವು ಮುಖ್ಯವಾಗಿದೆ. ಸಮಾಜದಲ್ಲಿ ಮಕ್ಕಳು ಕೇವಲ ಮನೋರಂಜನೆಗೆ ಸೀಮಿತಗೊಂಡು, ದುಷ್ಕೃತ್ಯಗಳಿಗೆ ಒಳಗಾಗುತ್ತಿದ್ದಾರೆ. ಹೆಣ್ಣಿಗೆ ಹೆಚ್ಚಿನ ಶೈಕ್ಷಣಿಕ ಶಿಕ್ಷಣದ ಅವಶ್ಯಕತೆ ಇದೆ. ನಮ್ಮನ್ನು ನಾವು ಗಟ್ಟಿಗೊಳಿಸಿ, ಜೀವನದ ಶೈಲಿಯನ್ನು ಶುದ್ಧ ಮಾಡಿಕೊಳ್ಳದ ಹೊರತು ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು. ಒಂದು ಕುಟುಂಬದ ಸದಸ್ಯರು ಎಲ್ಲಾ ಅನ್ಯೋನ್ಯತೆಯಿಂದ ಇದ್ದರೆ ಇಲ್ಲಿನ ಸುತ್ತಮುತ್ತಲಿನ ವಾತಾವರಣ ಕೂಡ ಅಷ್ಟೇ ತಿಳಿಯಾಗಿರುತ್ತದೆ ಎಂದು ಕಿವಿಮಾತು ಹೇಳಿದರು.
ಬಹುಮಾನ ವಿತರಣೆ: ಜೀವನದಲ್ಲಿ ಲಭ್ಯವಾಗುವ ಒಳ್ಳೆಯ ಅವಕಾಶವನ್ನು ಉಪಯೋಗಿಸಿಕೊಳ್ಳುವುದರ ಮೂಲಕ ಸಮಾಜ ಮುಖಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಸಮಸ್ಯೆ ಎಂಬುದು ಅಂದು ಹಾಗೂ ಇಂದು ಕೂಡ ಕಾಣುತ್ತಿದ್ದೇವೆ. ಮೌಲ್ಯ ಎಂಬುದು ಮಾರ್ಗದರ್ಶನ ಹಾಗೂ ಪ್ರೇರಣೆ ಮೂಲಕ ಪಡೆದುಕೊಳ್ಳಬಹುದು ಎಂದರು. ಇದೇ ವೇಳೆ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬ್ರಹ್ಮಕುಮಾರಿ ಜಿಲ್ಲಾ ಸಂಚಾಲಕರಾದ ಮೀನಾ, ಕ್ರೀಡಾಪಟು ಸಂಧ್ಯಾ ಕಿಣಿ, ವಕೀಲೆ ದ ಇಂದಿರಾ ಕುಮಾರಸ್ವಾಮಿ, ಭವಾನಿ ಮಹಿಳಾ ಸಮಾಜದ ಪಾರ್ವತಮ್ಮ, ಸಂತ ಜೋಸೆಫರ ಪದವಿ ಪೂರ್ವ ಕಾಲೇಜ್ ಪ್ರತಿಮಾ ಪೈ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.