ಹಾಸನ

ಮಹಿಳಾ ದಿನಾಚರಣೆ ಅಂಗವಾಗಿ ರಂಗೋಲಿ ಸ್ಪರ್ಧೆ

Published On :

ಹೊಳೆನರಸೀಪುರ: ಪಟ್ಟಣದ ಶ್ರೀ ಏಕಾಂತ ರಾಮೇಶ್ವರ ದೇವಾಲಯದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆಯ ಪ್ರಯುಕ್ತ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ರಂಗೋಲಿ ಸ್ಪರ್ಧೆಯಲ್ಲಿ 10ಕ್ಕೂ ಹೆಚ್ಚು ಜನ ಭಾಗವಹಿಸಿ, ವಿವಿಧ ರೀತಿಯ ರಂಗು ರಂಗಿನ ರಂಗೋಲಿ ಬಿಡಿಸಿದರು. ನಂತರ ಮಹಿಳೆಯರಿಗಾಗಿ ಭಕ್ತಿಗೀತೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ವಕೀಲ ಎಚ್.ಎಸ್. ಅರುಣ್ ಕುಮಾರ್ ನೆರವೇರಿಸಿದರು.
ಅನಿವಾರ್ಯತೆ ಇದೆ:  ಪಾಶ್ಚಿಮಾತ್ಯ ಸಂಸ್ಕತಿಯಿಂದಾಗಿ ನಮ್ಮ ಜಾನಪದದ ಅಮೂಲ್ಯ ಸಾಹಿತ್ಯಗಳು ಕಣ್ಮರೆಯಾಗುವುದನ್ನು ತಪ್ಪಿಸಬೇಕು ಎಂದು ಅರುಣ್ ಕುಮಾರ್ ಕರೆ ನೀಡಿದರು.
ಸ್ತ್ರೀ ಶಕ್ತಿ ಸಾಧ್ಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ಯಾಮಲಾ ಭಗವಾನ್, ಇಂದು ಮಹಿಳೆಯರು  ಸಾಮಾಜಿಕವಾಗಿ, ಔದ್ಯೋಗಿಕವಾಗಿ ಮತ್ತು ಸಾಂಘಿಕವಾಗಿ ಸದೃಢವಾದಲ್ಲಿ  ಶಕ್ತಿಯುತವಾಗಲು ಸಾಧ್ಯ ಎಂದರು.
ಕೋರಿಕೆ: ಪರಿಷತ್‌ನ ಅಧ್ಯಕ್ಷ ಬಾ.ರಾ. ಸುಬ್ಬರಾಯ ಮಾತನಾಡಿ, ಪರಿಷತ್ತು ಪುನಾರಚನೆಯಾದ ನಂತರ ಮೊದಲ ಕಾರ್ಯಕ್ರಮ ಇದಾಗಿದ್ದು, ಯಥಾ ಪ್ರಕಾರ ಸ್ಪಂದಿಸುವಂತೆ ಕೋರಿದರು. ಸತ್ಯನಾರಾಯಣ ಬಾಪು ಮಾತನಾಡಿದರು.
ದೇವಾಲಯದ ಅಧ್ಯಕ್ಷ ರಾಮಚಂದ್ರಶೆಟ್ಟರು, ರೋಟರಿ ಕಾರ್ಯದರ್ಶಿ ಶಿವಕುಮಾರ್, ಶಿಕ್ಷಕಿ ನೀಲಮ್ಮ ಇದ್ದರು. ರಂಗೋಲಿ ಸ್ಪರ್ಧಾ ಕಾರ್ಯಕ್ರಮವನ್ನು ಕಾರ್ಯದರ್ಶಿ ಲಕ್ಷ್ಮಿನಾಗರಾಜ್ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ನಿರೂಪಿಸಿದರು. ತೀರ್ಪುಗಾರರಾಗಿ ಸುಬ್ರಹ್ಮಣ್ಯ, ಶಿವಕುಮಾರಾಚಾರ್, ನಾಗೇಶ್ ಭಾಗವಹಿಸಿದ್ದರು.
ಬಹುಮಾನ ವಿಜೇತರು: ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ದಿವ್ಯಾ ಮಂಜುನಾಥ್, ದ್ವಿತೀಯ ನಾಗರತ್ನಮ್ಮ, ತೃತೀಯ ಶಾಂತಲಾ, ವಿಶೇಷ ಬಹುಮಾನ ಸೀತಾಲಕ್ಷ್ಮಿ, ಶಾಂತಲಾ ಪುತ್ತೂರಾಯ ವಿದ್ಯಾ ಸುಬ್ರಹ್ಮಣ್ಯ, ವಾಣಿ, ಸುಶೀಲಮ್ಮ ಪಡೆದುಕೊಂಡರು. ದೇವರನಾಮ ಸ್ಪರ್ಧೆಯಲ್ಲಿ ಪ್ರಥಮ ಶೃತಿ ರಾಘವನ್, ದ್ವಿತೀಯ ಪಾರ್ವತಮ್ಮ, ತೃತೀಯ ಸುಶೀಲಮ್ಮ ವಿಶೇಷ ಬಹುಮಾನ ಕೇಶವರಾವ್, ಉಷಾ.ಆರ್.ರಾವ್, ವಾಣಿ ವಿಜಯಕುಮಾರ್ ಪಡೆದುಕೊಂಡರು. ಸಮಾಧಾನಕರ ಬಹುಮಾನವನ್ನು ಶಾಂತಲಾ, ಪಾರ್ವತಮ್ಮ, ಮಂಜುಳಾ ರಮೇಶ್, ಮಂಜುಳ ಶಂಕರ್, ರಜನಿ ರಾಮಸ್ವಾಮಿ, ರಮಾಕಟ್ಟಿ, ಸುಧಾಮಣಿ, ವಾಸುಕಿ ಮಧು, ಪಂಚರತ್ನಮ್ಮ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.