ವೃತ್ತಿಪರ ಶಿಕ್ಷಣಕ್ಕೆ ಸೀಮಿತವಾಗಬಾರದು
ಹಾಸನ: ವೃತ್ತಿಪರ ಶಿಕ್ಷಣವೊಂದಕ್ಕೇ ವಿದ್ಯಾರ್ಥಿಗಳು ಸೀಮಿತವಾಗದೆ ಕಲಾವಿಭಾಗದ ಕೋರ್ಸ್ಗಳಲ್ಲಿಯೂ ತಮ್ಮನ್ನು ತೊಡಗಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ನಿವೃತ್ತ ಕಾರ್ಯದರ್ಶಿ ಐ.ಎಂ. ವಿಠ್ಠಲ ಮೂರ್ತಿ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಮೂರನೇ ವರ್ಷದ ಕಲಾ ಉತ್ಸವವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ವೃತ್ತಿಪರ ಕೋರ್ಸ್ಗಳಂತೆ ಕಲಾ ವಿಭಾಗಕ್ಕೂ ಪ್ರಾಮುಖ್ಯತೆ ಇದ್ದು, ಕಲಾ ವಿಭಾಗದಲ್ಲಿ ಪದವಿ ಪಡೆದವರನ್ನು ಕಡೆಗಣಿಸುವಂತಿಲ್ಲ. ನಾನು ಕೂಡ ಕಲಾ ವಿಭಾಗದಲ್ಲಿ ಪದವಿಯನ್ನು ಪಡೆದು ಸರ್ಕಾರದ ಉನ್ನತ ಸ್ಥಾನ ಏರಿದ್ದೆ. ಆದ್ದರಿಂದ, ಕಲಾ ವಿದ್ಯಾರ್ಥಿ ಎಂದಾಕ್ಷಣ ಕಡೆಗಣಿಸುವುದು ಬೇಡ ಎಂದು ಹೇಳಿದರು.
ಜ್ಞಾನ ಹೆಚ್ಚಿಸಿಕೊಳ್ಳಿ: ಇತ್ತೀಚೆಗೆ, ಗ್ರಾಮೀಣ ಪ್ರದೇಶದಿಂದ ಬಂದಂತಹ ವಿದ್ಯಾರ್ಥಿಗಳು ವಿಶೇಷ ಜ್ಞಾನ ಹೊಂದಿರುತ್ತಾರೆ ಎಂದ ಅವರು, ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮರ್ಪಕವಾಗಿ ಬಳಸಿ, ಕಲೆಗೆ ಹೆಚ್ಚಿ ಮಹತ್ವ ನೀಡಬೇಕು. ರಾಜ್ಯದ ಪ್ರತಿಭಾವಂತ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡು ಕಲೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಕಲಾ ಉತ್ಸವದ ಮೆರವಣಿಗೆ ನಡೆಲಾಯಿತು. ಮೆರವಣಿಗೆಯಲ್ಲಿ ಎತ್ತಿಗಾಡಿ ಪ್ರದರ್ಶನ ಸೇರಿದಂತೆ ಹಿಂದಿನ ಕಲಾ ಪ್ರಕಾರಗಳನ್ನು ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಐ.ಎಂ. ಮೋಹನ್, ಸ್ನಾತಕೋತ್ತರ ವಿಭಾಗದ ಸಂಯೋಜಕ ಡಿ.ಜಿ. ಕೃಷ್ಣೇಗೌಡ, ಸಾಂಸ್ಕೃತಿಕ ವೇದಿಕೆಯ ಚನ್ನಬಸಪ್ಪ, ಉಪನ್ಯಾಸಕ ಎಚ್.ಡಿ. ಆನಂದ್, ಟಿ.ಪಿ. ಪುಟ್ಟರಾಜ್, ಸೋಮಶೇಖರ್, ಚಂದ್ರೇಗೌಡ, ಹಂಪನಹಳ್ಳಿ ತಿಮ್ಮೇಗೌಡ, ರಾಜಪ್ಪ, ಶಿವಣ್ಣ, ರಂಗಸ್ವಾಮಿ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

