ದಲಿತರು ಕಾಂಗ್ರೆಸ್ಸನ್ನು ಬೆಂಬಲಿಸುತ್ತಾರೆ
ಬೇಲೂರು: ಈ ಬಾರಿ ದಲಿತ ಮುಖಂಡರೊಬ್ಬರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸದಿಂದ ಪರಿಶಿಷ್ಟ ವರ್ಗ, ಜನಾಂಗದವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಆಶೀರ್ವದಿಸಲಿದ್ದಾರೆ ಎಂದು ಶಾಸಕ ವೈ.ಎನ್. ರುದ್ರೇಶ್ಗೌಡ ತಿಳಿಸಿದರು.
ಬೇಲೂರಿನ ಮೂಡಿಗೆರೆ ರಸ್ತೆಯಲ್ಲಿರುವ ಶಾಸಕರ ಮನೆಯಲ್ಲಿ ಲೋಕಸಭೆ ಚುನಾವಣಾ ಪೂರ್ವ ಬಾವಿ ಸಭೆ ನಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಜನಾಂಗದ ವ್ಯಕ್ತಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕು ಎಂಬುದು ರಾಜ್ಯದ ದಲಿತ ಜನಾಂಗದ ಬಹುವರ್ಷದ ಕನಸು. ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ವರ್ಗದವರು ಮುಖ್ಯಮಂತ್ರಿ ಸ್ಥಾನ ಅನುಭವಿಸಿದ್ದಾರೆ. ಆದರೆ ದಲಿತ ವರ್ಗದವರು ಮುಖ್ಯಮಂತ್ರಿ ಸ್ಥಾನದಿಂದ ವಂಚಿತವಾಗಿದ್ದರು. ಆದರೆ ಈ ಬಾರಿ ಅವರಿಗೆ ಅವಕಾಶ ಲಭ್ಯವಾಗುವ ಸೂಚನೆ ಇದ್ದು, ಈ ನಿಟ್ಟನಲ್ಲಿ ರಾಜ್ಯದ ದಲಿತ ಜನಾಂಗದ ಆಶೀರ್ವಾದ ಕಾಂಗ್ರೆಸ್ ಮೇಲಿದೆ ಎಂದರು.
ಸಾಕಷ್ಟು ಕಾಮಗಾರಿ ನಡೆದಿವೆ: ತಮ್ಮ ಶಾಸಕಾವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳಿಂದ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಾಲೂಕಿನಲ್ಲಿ ಹೆಚ್ಚಿನ ಮತ ಬೀಳಲಿದೆ. ನನ್ನ ಅವಧಿಯಲ್ಲಿ ಎಲ್ಲಾ ಗ್ರಾಮೀಣ ಭಾಗಗಳಿಗೆ ರು. 40 ಕೋಟಿ ರಸ್ತೆ ಕಾಮಗಾರಿ ಹಾಗೂ ನೂರಾರು ಕೋಟಿ ರು. ಮೊತ್ತದಲ್ಲಿ ಇತರೆ ಅಭಿವೃದ್ಧಿ ಕೆಲಸಗಳಾಗಿವೆ. ಅಲ್ಲದೇ, ಈ ಹಿಂದಿನ ಶಾಸಕರು ನಿರ್ಲಕ್ಷಿಸಿದ್ದ ವಿಷ್ಣುಸಮುದ್ರ ಕೆರೆ ಅಭಿವೃದ್ಧಿಗೆ ಪ್ರತಿ ವರ್ಷ ರು. 2 ಕೋಟಿ ಅನುದಾನ ನೀಡುವಂತೆ ಸರ್ಕಾರದ ಗಮನ ಸಳೆದಿದ್ದು, ಅದು ಬಜೆಟ್ನಲ್ಲಿ ಅನುಮೋದನೆಗೊಂಡಿದೆ. ಚನ್ನಕೇಶವಸ್ವಾಮಿ ಜಾತ್ರೆ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಗೊಂಡಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ಬದಲಾವಣೆ: ಮಾಜಿ ಸಂಸದ ಎಚ್.ಕೆ. ಜವರೇಗೌಡ ಮಾತನಾಡಿ, ಈ ಬಾರಿ ಜಿಲ್ಲೆಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯಾಗಲಿದ್ದು, ಪ್ರಜ್ಞಾವಂತ ಮತದಾರ ಅದನ್ನು ಸಾಬೀತು ಮಾಡಲಿದ್ದಾನೆ. ರಾಜಕಾರಣದಲ್ಲಿ ತಾವೂ ಸೇರಿದಂತೆ ಯಾರೂ ಅನಿವಾರ್ಯವಲ್ಲ ಎಂಬುದನ್ನು ಈ ಹಿಂದೆ ನಡೆದ ಬಹುತೇಕ ಚುನಾವಣೆಯಲ್ಲಿ ಕಂಡಿದ್ದೇವೆ ಎಂದರು.
ಗೌಡರ ಲೆಟರ್ ಹೆಡ್ ಕಥೆ: ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿ, ಮಾಜಿ ಪ್ರಧಾನಿ ಎಚ್ ಡಿ.ದೇವೇಗೌಡರ 10 ವರ್ಷದ ಎಂಪಿ ಅವಧಿಯಲ್ಲಿ 60 ಕೋಟಿಗೂ ಹೆಚ್ಚು ಅನುದಾನ ಕೇಂದ್ರ ಸರ್ಕಾರದಿಂದ ಬಂದಿದ್ದು ಅದರಲ್ಲಿ ತಾಲೂಕಿಗೆ ಕೇವಲ 60 ಲಕ್ಷ ಮಾತ್ರ ಖರ್ಚಾಗಿದೆ. ಎಂದು ದೂರಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಟಿ. ದಾಮೋದರ್ ಮಾತನಾಡಿ, ತಾಲೂಕಿನ ಕಾಂಗ್ರೆಸ್ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದರು. ಪುರಸಭೆ ಸದಸ್ಯ ಬಿ.ಎಲ್. ಧರ್ಮೇಗೌಡ ಮಾತನಾಡಿ, ಬಿಜೆಪಿಯವರು ಕುರುಬ ಜನಾಂಗದ ಮತವನ್ನು ಒಡೆಯಲು ವಿಜಯಶಂಕರ್ ಅವರನ್ನು ಕಣಕ್ಕಿಳಸಿದ್ದಾರೆ. ಆದರೆ, ಅದು ಅಸಾಧ್ಯ ಎಂದರು.
ಈಸಂದರ್ಭದಲ್ಲಿ ಜಿಲ್ಲಾ ಮಹಿಳಾಧ್ಯಕ್ಷೆ ಚಂದ್ರಕಲಾ, ಜಿಪಂ ಮಾಜಿ ಸದಸ್ಯ ವೈ.ಎನ್. ಕೃಷ್ಣೇಗೌಡ, ಎಂ.ಆರ್. ವೆಂಕಟೇಶ್, ಜುಬೇರ್ ಆಹಮದ್, ಅಕ್ರಂಪಾಷ, ಸಲೀಂಪಾಷ, ಪುನೀತ್, ನಿಶಾಂತ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

