ಪರಸ್ಪರ 'ಹಲೋ' ಹೇಳಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್!
ಅರಸೀಕೆರೆ: ರಾಜಕಾರಣದಲ್ಲಿ ಬದ್ಧ ಶತ್ರುಗಳಂತೆ ನಡೆದುಕೊಳ್ಳುವ ರಾಜಕಾರಣಿಗಳು ಧಾರ್ಮಿಕ ಸಮಾರಂಭವೊಂದರಲ್ಲಿ ಪರಸ್ಪರ ಹಸ್ತಲಾಘವ ನೀಡಿ ಆಲಂಗಿಸಿ ಕೊಳ್ಳುವ ಮೂಲಕ ನೆರೆದಿದ್ದ ಜನರಿಗೆ ಆಶ್ಚರ್ಯ ಉಂಟು ಮಾಡಿದ ಪ್ರಸಂಗ ನಡೆಯಿತು.
ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ 9ನೇ ವರ್ಷದ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಹಾಗೂ ಧರ್ಮ ಜಾಗೃತಿ ಸಮ್ಮೇಳನ ಸಮಾರಂಭದ ವೇದಿಕೆಯಲ್ಲಿ ಮೂರು ಪಕ್ಷದ ರಾಜಕಾರಣಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಲ್ಲದೇ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡಿದ್ದು ನೆರೆದಿದ್ದ ಜನರನ್ನು ನಿಬ್ಬೆರಗಾಗಿಸುವಂತೆ ಮಾಡಿತು.
ಇರುಸು ಮುರುಸು?: ಆ ಪಕ್ಷ ಈ ಪಕ್ಷ ಎಂದು ಕಾರ್ಯಕರ್ತರು ಕಿತ್ತಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ನ್ಯಾಯಾಲಯಕ್ಕೆ ಹೋಗಿರುವ ಪ್ರಕರಣಗಳು ಕಣ್ಮುಂದೆ ಇರುವಾಗ ವಿರೋಧಿ ಪಕ್ಷದವರು ಅಭಿವೃದ್ಧಿ ಕಾರ್ಯಗಳನ್ನು ಮಾಡದಂತೆ ತಡೆ ಹಾಕಿರುವ ಪ್ರಕರಣಗಳು ಹಸಿರಾಗಿರುವಾಗಲೇ ತಮ್ಮ ನಾಯಕರು ಎನಿಸಿಕೊಂಡವರು ವಿಶ್ವಾಸಪೂರ್ವಕವಾಗಿ ಇರುವುದು ಕೆಲವರಿಗೆ ಇರುಸು ಮುರುಸು ಉಂಟು ಮಾಡಿರಲಿಕ್ಕೂ ಸಾಕು.
ಧನ್ಯ ಮಿಲನ!: ಮೊದಲಿಗೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು, ಶ್ರೀಗಳಿಂದ ಆಶೀರ್ವಾದ ಪಡೆದು, ಅಲ್ಲೇ ಇದ್ದ ಕೆ.ಎಂ. ಶಿವಲಿಂಗೇಗೌಡ ಅವರೊಂದಿಗೆ ಹಸ್ತಲಾಘವ ಮಾಡಿ ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕುಳಿತು ಪರಸ್ಪರ ಉಭಯ ಕುಶಲೋಪರಿ ಮಾಡುತ್ತಿರುವಾಗಲೇ ವೇದಿಕೆಗೆ ಆಗಮಿಸಿದ ಬಿಜೆಪಿ ನಾಯಕರು ಮಾಜಿ ಸಚಿವರು ಹಾಗೂ ಹಾಸನ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಬಂದು ಶ್ರೀಗಳಿಗೆ ಫಲಪುಷ್ಪಗಳನ್ನು ಸಮರ್ಪಿಸಿದರು. ನಂತರ, ಕೆ.ಎಂ. ಶಿವಲಿಂಗೇಗೌಡರಿಗೆ ಹಸ್ತಲಾಘವ ನೀಡಿ, ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರನ್ನು ಅಲಂಗಿಸಿಕೊಂಡರು.
ವಿಶೇಷ: ಈ ಮೂವರು ಪರಸ್ಪರ ಸುಧೀರ್ಘವಾಗಿ ಮಾತುಕತೆ ನಡೆಸುತ್ತಿದ್ದದ್ದು, ಜನರಿಗೆ ಆಶ್ಚರ್ಯ ಉಂಟು ಮಾಡಿತ್ತು. ಬಹಿರಂಗ ವೇದಿಕೆಗಳಲ್ಲಿ ಪರಸ್ಪರ ಕೆಸರು ಎರಚಾಡುವ ನಾಯಕರು ಅನ್ಯೋನ್ಯವಾಗಿ ಸಹೋದರರಂತೆ ಕಂಡಿದ್ದು ವಿಶೇಷವಾಗಿತ್ತು.
ಈ ದೃಶ್ಯವನ್ನು ಕಂಡ ಕುಪ್ಪೂರು ಶ್ರೀಗಳು ಇಂತಹ ಸಮಾನತೆಯ ಭಾವನೆಗಳು ಯಾವುದೇ ರಾಜಕೀಯ ಪಕ್ಷಭೇಧ ಭಾವನೆಗಳಿಲ್ಲದೆ ಆಚರಿಸಿಕೊಂಡುವ ಬಂದಿರುವ ಸಾಧನೆ ರಂಭಾಪುರಿ ಶ್ರೀಪೀಠಕ್ಕೆ ಸಲ್ಲುತ್ತದೆ ಎಂದು ಸಮರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

