ಹಾಸನ

'ವಿದ್ಯಾರ್ಥಿಗಳಲ್ಲಿ ಉತ್ತಮ ಗುಣ ಬೆಳೆಸಬೇಕು'

Published On :

ಹಾಸನ:  ಶಿಕ್ಷಕನಾದವನು ಸಮಾಜ ಮುಖಿಯಂತಹ ಕೆಲಸ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ನಡತೆ ಹಾಗೂ ಒಳ್ಳೆಯ ಗುಣಗಳನ್ನು ಬೆಳೆಸಬೇಕು ಎಂದು ಪತ್ರಕರ್ತ ಎಚ್.ಬಿ. ಮದನಗೌಡ ತಿಳಿಸಿದರು.
ನಗರದ ಸಾಲಗಾಮೆ ರಸ್ತೆ, ಜಯನಗರ ಬಡಾವಣೆ ಬಳಿ ಇರುವ ಮಹಾವೀರ ಶಿಕ್ಷಾ ಸ್ನಾತಕ್ ವಿದ್ಯಾಲಯದ 25ನೇ ವಾರ್ಷಿಕೋತ್ಸವ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕನು ತನ್ನ ವೃತ್ತಿಯಲ್ಲಿ ಒಳ್ಳೆಯ ಚಿಂತನೆ ಮೂಡುವ ಮೂಲಕ ವಿದ್ಯಾರ್ಥಿಗಳಲ್ಲಿ ಅನುಸರಿಸಲು ಮುಂದಾಗಬೇಕು. ಇಂದಿನ ಶಿಕ್ಷಕರ ಸಣ್ಣ ತಪ್ಪು ಮುಂದೆ ಸಮಾಜ ಘಾತುಕ ಕೆಲಸಗಳಿಗೆ ಎಡೆ ಮಾಡಿಕೊಡಬಾರದು ಎಂದರು.
ಕಿವಿಮಾತು: ಪ್ರಸ್ತುತ ಆಧುನಿಕ ದಿನಗಳಲ್ಲಿ ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಕಿರಿದಾಗಿ ಕಲಿಸಿ, ಹಿರಿದಾಗಿ ಬೆಳೆಯಲು ವಾತಾವರಣ ನಿರ್ಮಿಸಬೇಕು ಎಂದು ಕಿವಿಮಾತು ಹೇಳಿದರು. ಉತ್ತಮ ಆದರ್ಶ ಗುಣಗಳನ್ನು ಶಿಕ್ಷಕರು ಬೆಳೆಸಿಕೊಂಡು ಸಮಾಜದಲ್ಲಿ ಸೇವೆ ಸಲ್ಲಿಸಬೇಕು. ವಿಧ್ಯೆ ಕಲಿಕೆಗೆ ಬಡತನ ಎಂಬುದು ಮಾನದಂಡವಲ್ಲ. ನಿರಂತರ ಆಸಕ್ತಿ ಇದ್ದರೇ ಮುಂದಿನ ಜೀವನಕ್ಕೆ ಹಲವಾರು ಒಳ್ಳೆಯ ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಸಿ. ವಿಶ್ವನಾಥ್ ಇತರರು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಕಾವ್ಯ ಹಾಗೂ ತಂಡದವರು ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.