ಹಾಸನ

ಅಲ್ಲಮಪ್ರಭು ವಚನ ಮೌಂಟ್ ಎವರೆಸ್ಟ್ ಇದ್ದಂತೆ: ಡಾ. ಚಂದ್ರಶೇಖರ್

Published On :

ಮಂಡ್ಯ: ಅಲ್ಲಮಪ್ರಭು ವಚನಗಳು ವಿಶ್ವ ವಿದ್ಯಾಲಯದ ಪಠ್ಯಗಳಲ್ಲಿ ಇಲ್ಲದಿರುವುದಕ್ಕೆ ಮಾಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಚಂದ್ರಶೇಖರ್ ವಿಷಾದ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ವತಿಯಿಂದ ಕನ್ನಡ ಕಾವ್ಯಾಸ್ವಾದನ ಉಪನ್ಯಾಸ ಮಾಲೆಯಲ್ಲಿ ಅಲ್ಲಮಪ್ರಭು ವಚನ ಚಳವಳಿ ಕುರಿತು ಮಾತನಾಡಿದ ಅವರು, ಅಲ್ಲಮಪ್ರಭು ಇಲ್ಲದ ಕನ್ನಡ ಸಾಹಿತ್ಯವನ್ನು ಊಹಿಸಿಕೊಳ್ಳುವುದು ಕಷ್ಟ. ಅವರ ವಚನಗಳು ಮೌಂಟ್ ಎವರೆಸ್ಟ್ ಇದ್ದ ಹಾಗೆ. ಆದರೆ, ಅವು ವಿಶ್ವವಿದ್ಯಾಲಯದ ಪಠ್ಯಗಳಲ್ಲಿಲ್ಲ ಎನ್ನುವುದು ವಿಷಾದನೀಯ ಎಂದರು.
ಭಕ್ತ ಮತ್ತು ದೇವರ ನಡುವೆ ಇದ್ದ ಪುರೋಹಿತಶಾಹಿ ವ್ಯವಸ್ಥೆಗೆ ಅಲ್ಲಮಪ್ರಭು ಅವರ ವಚನಗಳು ಅಡ್ಡಗೋಡೆಗಳಾಗಿವೆ. ತತ್ವಜ್ಞಾನಿ ಮತ್ತು ಕವಿ ಒಬ್ಬರೇ ಆಗಿರಲು ಸಾಧ್ಯವಿಲ್ಲ. ಆದರೆ, ತತ್ವ ಮತ್ತು ಕಾವ್ಯ ಒಂದಾಗಿರುವುದನ್ನು ಅಲ್ಲಮರ ವಚನಗಳಲ್ಲಿ ಕಾಣಬಹುದಾಗಿದೆ ಎಂದರು.
ಮಾನವ ನಿರ್ಮಿತ ಅಂಕುಶಗಳಿಗೆ ತಲೆ ಬಾಗದೇ ಜೀವನ ನಡೆಸಬೇಕು. ಆಧುನಿಕ ಸಮಾಜದಲ್ಲಿ ನಮಗೆ ಗೊತ್ತಿಲ್ಲದಂತೆಯೇ ಗುಲಾಮರಾಗಿರುತ್ತೆವೆ. ಇದರಿಂದ ಹೊರ ಬರಬೇಕು. ಅಂಕುಶ ಮೆಟ್ಟಿ ನಿಂತು, ನಿರಂಕುಶಮತಿಗಳಾಗಬೇಕು ಎಂದು ಹೇಳಿದರು. ನಿವೃತ್ತ ಪ್ರಾಂಶುಪಾಲ ಡಾ.ಎಸ್.ಶಂಕರೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.