ಹಾಸನ

ದಾಖಲೆಗಳೊಂದಿಗೆ ದೂರು ನೀಡಿ: ದೂರುದಾರರಿಗೆ ಕಿವಿಮಾತು

Published On :

ಬಾಗೇಪಲ್ಲಿ: ಲೋಕಾಯುಕ್ತರಿಗೆ ದೂರು ಕೊಡುವಾಗ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಸೂಕ್ತ ದಾಖಲೆಗಳು ಇಲ್ಲದಿದ್ದರೆ ಸುಮ್ಮನೆ ದೂರು ನೀಡಬೇಡಿ ಎಂದು ಲೋಕಾಯುಕ್ತ ಡಿವೈಎಸ್ಪಿ ಬೋಪಯ್ಯ ನಿರ್ದಿಷ್ಟವಾಗಿ ದೂರು ಮತ್ತು ದಾಖಲೆಗಳನ್ನು ಕೊಡದ ದೂರುದಾರರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವ ಸಮಯದಲ್ಲಿ ತಾಲೂಕಿನ ಗೂಳೂರು ಲಕ್ಷ್ಮೀ, ಪೋರ್ಜರಿ ಮಾಡಿ ಗ್ರಾ.ಪಂ.ನವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ನಿವೇಶನವನ್ನು ಬೇರೆಯವರ ಹೆಸರಿಗೆ ಖಾತೆಗೆ ಮಾಡಿಸಿಕೊಂಡಿರುವ ಬಗ್ಗೆ ಮನವಿ ಮಾಡಿದರು. ಆಗ ನಕಲಿ ದಾಖಲೆ ಮಾಡಿರುವ ಬಗ್ಗೆ ದಾಖಲೆಯನ್ನು ನೀಡಿ ಎಂದು ಕೇಳಿದರು. ಅದಕ್ಕೆ ಲಕ್ಷ್ಮೀ ತಮ್ಮ ಬಳಿ ಆ ದಾಖಲೆಗಳು ಇಲ್ಲ ಎಂದು ತಿಳಿಸುತ್ತಿದ್ದಂತೆ, ನಿಮ್ಮ ಬಳಿ ದಾಖಲೆಗಳು ಇಲ್ಲ ಎಂದರೆ ಹೇಗೆ ದೂರು ನೀಡುತ್ತೀರಿ ಎಂದು ಪ್ರಶ್ನಿಸಿದರು.
ತಾಲ್ಲೂಕಿನ ಘಂಟಂವಾರಿಪಲ್ಲಿ ಗ್ರಾ.ಪಂ.ವ್ಯಾಪ್ತಿಯ ಎನ್.ಹೆಚ್.7ರ ಪಕ್ಕದಲ್ಲಿರುವ  ಸರ್ವೆ ನಂ 15ಣ1ರಲ್ಲಿ ಗ್ರಾ.ಪಂ. ಕಾರ್ಯದರ್ಶಿ ಸೇರಿದಂತೆ ಹಲವರು ನಕಲಿ ದಾಖಲೆ ಸೃಷ್ಟಿಸಿದ್ದಾರೆ.
ನನ್ನ ಹೆಸರಿನ ಖಾತೆಯಲ್ಲಿರುವ ಖಾಲಿ ನಿವೇಶನವನ್ನು ಯಾವುದೇ ರೀತಿಯ ಮಾಹಿತಿಯನ್ನು ನೀಡದೇ ಆಕ್ರಮವಾಗಿ ಗ್ರಾ.ಪಂ.ಕಚೇರಿ ಕಟ್ಟಡಕ್ಕೆ ಬಳಸಿಕೊಳ್ಳಲಾಗಿದೆ. ರಾ.ಹೆ.7ರ ಅಗಲೀಕರಣದ ಸಮಯದಲ್ಲಿ ಕಟ್ಟಡದ ಅರ್ಧ ಭಾಗವನ್ನು ಕೆಡವಿ ಗ್ರಾ.ಪಂ. ಕಾರ್ಯದರ್ಶಿ ಗೋಪಾಲ್ ಹೆದ್ದಾರಿ ಪ್ರಾಧಿಕಾರದಿಂದ ತಾವೇ ಪರಿಹಾರವನ್ನು ಪಡೆಯುವ ಮೂಲಕ ಸರ್ಕಾರಕ್ಕೂ ಹಾಗೂ ನನಗೂ ವಂಚನೆ ಮಾಡಿದ್ದಾರೆ ಎಂದು ಅನ್ಯಾಯಕ್ಕೆ ಒಳಗಾಗಿರುವ ಜಿ.ಎಸ್. ನರಸಿಂಹರೆಡ್ಡಿ  ದೂರಿದರು.
ಕಳೆದ 3 ವರ್ಷಗಳಿಂದ ನ್ಯಾಯ ದೊರಕಿಸಿ ಕೊಡುವಂತೆ ಗ್ರಾ.ಪಂ ಕಚೇರಿಗೆ ಅಲೆಯುತ್ತಿದ್ದರೂ ಇದುವರೆಗೂ ಗ್ರಾ.ಪಂ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ನ್ಯಾಯ ದೊರಕಿಸಿಕೊಟ್ಟಿಲ್ಲ. ಇದರಿಂದ ನೀವಾದರೂ ನ್ಯಾಯ ದೊರಕಿಸಿ ಕೊಡಿ ಎಂದು ಲೋಕಾಯುಕ್ತರಲ್ಲಿ ಮನವಿ ಮಾಡಿದರು. ಈ ಸಂಬಂಧ ಗ್ರಾ.ಪಂ.ಅಧಿಕಾರಿಗಳು ಒಂದು ತಿಂಗಳ ಕಾಲಾವಕಾಶ ನೀಡುವಂತೆ ಕೋರಿದ ಮನವಿಗೆ ಲೋಕಾಯುಕ್ತರು, ಒಂದು ತಿಂಗಳ ಅವಧಿಯಲ್ಲಿ ಈ ಸಮಸ್ಯೆಗೆ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ನಡುವೆ ಸಾರ್ವಜನಿಕರಿಂದ ಲೋಕಾಯುಕ್ತ ಪೊಲೀಸರು ಕುಂದು ಕೊರೆತೆಗಳ ಸಭೆಗಳಲ್ಲಿ ಸಾರ್ವಜನಿಕರಿಂದ ಹಲವಾರು ಅರ್ಜಿಗಳನ್ನು ಸ್ವೀಕರಿಸಿದರೂ ಸಹ ಒಂದು ಅರ್ಜಿಗೂ ಪರಿಹಾರ ಸಿಗಲಿಲ್ಲ. ಹೀಗಿರುವಾಗ ದೂರು ನೀಡುವುದರಿಂದ ಪ್ರಯೋಜನವಾದರೂ ಏನು ಎಂಬ ಪ್ರಶ್ನೆ ಸಭೆಯಲ್ಲಿ ಕೇಳಿ ಬಂತು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ. ಶ್ರೀನಿವಾಸ್, ಎಇಇಗಳಾದ ಪಿ.ವಿ. ನಾಗಪ್ಪ, ಜೆ. ಕೃಷ್ಣಮೂರ್ತಿ,ಬಾಲಾಜಿ, ಆರಕ್ಷಕ ಉಪ ನಿರೀಕ್ಷಕ ವಿ.ಮುನಿರೆಡ್ಡಿ, ಆಡಳಿತ ವೈದ್ಯಾಧಿಕಾರಿ ಡಾ. ಮಂಜೇನಾಯಕ್, ಪುರಸಭೆ ಮುಖ್ಯಾಧಿಕಾರಿ ಆರ್.ಶ್ರೀಕಾಂತ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.