ವೈಜ್ಞಾನಿಕ ದೃಷ್ಟಿಕೋನ ಅಗತ್ಯ
ಹೊಳೆನರಸೀಪುರ: ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಮಾಜ ಶಾಸ್ತ್ರದ ಅಧ್ಯಯನದಲ್ಲಿದೆ ಎಂದು ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ದೇವರಯ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಪಡುವಲಹಿಪ್ಪೆಯ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಸ್ಪಂದನ ಸಮಾಜಶಾಸ್ತ್ರ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರುಯ
ಸಮಾಜದಲ್ಲಿ ಹಲವಾರು ಸಮಸ್ಯೆಗಳು ನಿತ್ಯ ಕಂಡು ಬರುತ್ತಿವೆ. ಈ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಹುಡುಕುವ ವೈಜ್ಞಾನಿಕ ಪ್ರಯತ್ನವನ್ನು ಯಾವುದೇ ವಿಜ್ಞಾನಗಳು ಮಾಡಿಲ್ಲ.
ಆದರೆ ಬಹುತೇಕ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವ ವೈಜ್ಞಾನಿಕ ಪ್ರಯತ್ನ ಸಮಾಜಶಾಸ್ತ್ರದಲ್ಲಿ ಕಾಣಬಹುದಾಗಿದೆ ಎಂದರು.
ಬಡತನ, ನಿರುದ್ಯೋಗ, ಭಿಕ್ಷಾಟನೆ, ಆತ್ಮಹತ್ಯೆ, ಭಯೋತ್ಪಾದನೆ, ಕೋಮು ಗಲಭೆಗಳು, ನಕ್ಸಲಿಸಂ ಮುಂತಾದ ಅದೆಷ್ಟೊ ಪಿಡುಗುಗಳಿಗೆ ಪರಿಹಾರವನ್ನು ಸಮಾಜಶಾಸ್ತ್ರಜ್ಞರು ಕಂಡು ಹಿಡಿದಿದ್ದಾರೆ.
ಇಲ್ಲಿ ಕಾನೂನುಗಳು, ಶಾಸನಗಳು ನೀಡಲಾಗದ ಪರಿಹಾರವನ್ನು ಸಮಾಜಶಾಸ್ತ್ರ ನೀಡುತ್ತದೆ. ಸಮಾಜಶಾಸ್ತ್ರವನ್ನು ಪದವಿ ಮತ್ತು ಸ್ನಾತಕೋತ್ತರ ಅಧ್ಯಯನದ ಹಂತದಲ್ಲಿ ಅಧ್ಯಯನ ಮಾಡುವುದರಿಂದ ಉತ್ತಮ ವೃತ್ತಿ ಅವಕಾಶಗಳು ದೊರಕುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ.ಜಿ.ಡಿ. ನಾರಾಯಣ್ ಮಾತನಾಡಿ, ಸ್ಪಂದನ ಸಮಾಜಶಾಸ್ತ್ರ ವೇದಿಕೆ ಅಡಿಯಲ್ಲಿ ವಿಶೇಷ ಉಪನ್ಯಾಸ, ವಿದ್ಯಾರ್ಥಿಗಳನ್ನು ವೃದ್ಧಾಶ್ರಮಗಳಿಗೆ, ಬಂಧೀಖಾನೆಗಳಿಗೆ ಮಾತ್ರವಲ್ಲ, ಸ್ತ್ರೀ ಶಕ್ತಿ ಸಂಘ ಗಳಿಗೆ, ಬಾಲ ವಿಕಾಸ ಮಂದಿರಗಳಿಗೆ, ಕೌಟುಂಬಿಕ ಸಲಹಾ ಕೇಂದ್ರಗಳಿಗೆ ಮತ್ತು ಕೊಳಗೇರಿಗಳಿಗೆ ಕರೆದೊಯ್ದು ಪ್ರತ್ಯಕ್ಷ ಅಧ್ಯಯನ ಮಾಡಿಸುವುದು ಹಾಗೂ ನಿತ್ಯ ಪತ್ರಿಕೆಗಳಲ್ಲಿ ಕಂಡುಬರುವ ಸಾಮಾಜಿಕ ಹಾಗೂ ರಾಜಕೀಯ ವಿಷಯಗಳಿಗೆ ಪ್ರತಿಕ್ರಿಯೆಯನ್ನು ಲಿಖಿತ ರೂಪದಲ್ಲಿ ನೀಡುವ ಗೋಡೆ ಪತ್ರಿಕೆ ಪ್ರಾರಂಭಿಸುವುದು ಈ ವೇದಿಕೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ದೇವರಯ್ಯ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಸಮಾಜಕಾರ್ಯ ಸ್ನಾತಕೋತ್ತರ ಅಧ್ಯಯನ ವಿಭಾಗ ಸಂಯೋಜಕ ಕೆ.ವಿ.ಪಾರ್ಥೇಶ್, ಸಮಾಜಶಾಸ್ತ್ರ ವಿಭಾಗ ಉಪನ್ಯಾಸಕ ಪ್ರವೀಣ್ಕುಮಾರ್, ಯೋಗೇಶ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಪಿ.ಯೋಗೇಶ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು. ರೇಷ್ಠಾ ಪ್ರಾರ್ಥಿಸಿದರು. ಸ್ಫೂರ್ತಿ ಸ್ವಾಗತಿಸಿದರು. ಚೇತನ್ ವಂದಿಸಿದರು. ದಿವ್ಯಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

