ಹಾಸನ

'ಹೈನುಗಾರಿಕೆಯಿಂದ ಬದುಕು ಹಸನು'

Published On :

ಆಲೂರು: ಹೈನುಗಾರಿಕೆ ಉದ್ದಿಮೆಯಿಂದ ಕುಟುಂಬ ಆರ್ಥಿಕ ಸ್ಥಿತಿ ಅಭಿವೃದ್ಧಿಯಾಗಲಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾಜೈನ್ ತಿಳಿಸಿದರು.ಕಸಬಾ ಮರಸುಹೊಸಹಳ್ಳಿ ಗ್ರಾಮದಲ್ಲಿ ಹಾಲಿನ ಡೇರಿ ಕಟ್ಟಡ ಕಾಮಗಾರಿಗಾಗಿ ರು.50,000 ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು, ಹೈನುಗಾರಿಕೆಯಲ್ಲಿ ದೊರ ಕುವ ಹಾಲನ್ನು ಮನೆಗೆ ಬಳಸಿ ಕೊಂಡು ಉಳಿದ ಹಾಲನ್ನು ಡೇರಿಗೆ ಕೊಡಬೇಕು. ಕೇವಲ ವಾಣಿಜ್ಯ ಉದ್ದಿಮೆ ಮಾಡಿಕೊಳ್ಳದೆ ಆರೋಗ್ಯ ದಲ್ಲೂ ಗಮನ ಹರಿಸಬೇಕು. ಪ್ರತಿಯೊಬ್ಬರ ಮನೆಯಲ್ಲೂ ಹಸುಗಳನ್ನು ಸಾಕುವುದರಿಂದ ಹಾಲು ಕುಡಿಯಲು, ಮಾರಾಟ ಮಾಡಲು ಉಪಯೋಗ ವಾದರೆ, ಸಗಣಿ ಕೃಷಿ ಬಳಕೆಗೆ ಪೂರಕವಾದ ಗೊಬ್ಬರವಾಗುತ್ತದೆ ಎಂದರು.ಗೋವುಗಳ ಮಧ್ಯೆ ಮನುಷ್ಯರ ಸಂಬಂಧವಿದ್ದರೆ ಆರೋಗ್ಯವಂತರಾಗಿ ಬದುಕಬಹುದು. ಗೋವಿನ ಸಗಣಿ ತುಳಿಯುವುದರಿಂದ ದೇಹಕ್ಕೆ ಹೊಕ್ಕುವ ಕೆಟ್ಟ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಗಂಜಲ ಉಪಯೋಗಿಸು ವುದರಿಂದ ಕಿಡ್ನಿ ವೈಫಲ್ಯವನ್ನು ತಡೆಯಬಹುದಾಗಿದೆ. ನೀರಿಗೆ ಗಂಜಲ ಬೆರೆಸಿ ಸ್ನಾನ ಮಾಡಿದರೆ ಚರ್ಮರೋಗದಿಂದ ಮುಕ್ತರಾಗಬಹುದು. ಪ್ರತಿದಿನ ಗೋವುಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಶಾಲೆಗಳಿಗೆ ಅನುದಾನ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡಲಾಗುವುದು. ಅನುದಾನ ಸದ್ಬಳಕೆಯಾಗುವಂತೆ ಜಾಗ್ರತೆ ವಹಿಸಲಾಗುವುದು ಎಂದರು.ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಆರ್.ಕೃಷ್ಣೇಗೌಡ ಮಾತನಾಡಿ, ಕಟ್ಟಣ ನಿರ್ಮಾಣಕ್ಕೆ ಕೆಎಂಎಫ್ ನಿಂದ ರು.50,000 ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯಿಂದ ರು. 50,000 ಜತೆಗೆ ಗ್ರಾಮಸ್ಥರ ಸಹಕಾರದಿಂದ ಬಾಕಿ ಮೊತ್ತ ಭರಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.ಒಕ್ಕೂಟದ ನಿರ್ದೇಶಕರಾದ ಮಂಜೇಗೌಡ, ಸುಬ್ಬೇಗೌಡ, ಎ.ಎಚ್.ಯೋಗೇಶ್, ಲಕ್ಷ್ಮಮ್ಮ, ರಂಗಮ್ಮ, ಜವರಯ್ಯ, ಕಾರ್ಯದರ್ಶಿ ಎ.ಎಸ್. ನಟರಾಜ್, ಯೋಜನೆ ಕೃಷಿ ಅಧಿಕಾರಿ ಶಶಿಕುಮಾರ್, ಪ್ರಬಂಧಕರಾದ ಭಾರತಿ, ಸೇವಾ ಪ್ರತಿನಿಧಿ ನಾಗಮಣಿ,ಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.