ಹಾಸನ

ಸಿಡಿಲಿಗೆ ಪ್ಲೇನಿಂಗ್ ಮಿಷನ್ ಭಸ್ಮ ಮಲಗಿದ್ದ ಇಬ್ಬರಿಗೆ ಗಾಯ

Published On :

ಅರಕಲಗೂಡು: ಶ್ರುಕ್ರವಾರ ರಾತ್ರಿ ಅರಕಲಗೂಡು ತಾಲೂಕಿನ ವಿವಿದೆಢೆ ಗುಡುಗು ಸಹಿತ ಮಳೆಯಾಗಿದೆ.ಈ ವೇಳೆ ಗುಡುಗಿನ ಆರ್ಭಟ ಜನರನ್ನು ತಲ್ಲಣಗೊಳಿಸಿದೆ. ಬಾರೀ ಶಬ್ದದೊಂದಿಗಿನ ಗುಡುಗು ಮತ್ತು ಸಿಡಿಲಿನಿಂದ ಜನರು ಆತಂಕಗೊಂಡರು. ರಾತ್ರಿ ಸುಮಾರು 11.30ರ ವೇಳೆಯಲ್ಲಿ ಸಿಡಿಲು ಬಡಿದ ಪರಿಣಾಮ ಪಟ್ಟಣದ ಹೊಳೆನರಸೀಪುರ ರಸ್ತೆಯ ಹೊರವಲಯದಲ್ಲಿರುವ ಕೆಲ್ಲೂರು ಗ್ರಾಮದ ಬಳಿ ಇರುವ ಶ್ರೀ ನಂಜುಂಡೇಶ್ವರ ಪ್ಲೇನಿಂಗ್ ಮಿಷನ್ ಸಂಪೂರ್ಣವಾಗಿ ಭಸ್ಮವಾಗಿ ಹೋಗಿದೆ.
ರಾತ್ರಿ ಮಳೆ ಆರಂಭಗೊಂಡ ನಂತರ ಕೆಲಸ ಮುಗಿಸಿ ಮಿಲ್‌ನ ಮಾಲೀಕ ಆನಂದ  ಮನೆಗೆ ತೆರಳಿದ್ದರು. ರಾತ್ರಿ ಬಡಿದ ಸಿಡಿಲು ನೇರ ಮಿಲ್‌ಗೆ ಬಡಿದು ಮಿಲ್‌ನಲ್ಲಿದ್ದ ಸೌದೆಗೆ ಬೆಂಕಿ ತಾಗಿದೆ. ನಂತರ ಒಳಗೇ ಬೆಂಕಿ ಇತರೆಡೆಗೂ ಹಬ್ಬಿ ಮಿಲ್‌ನಲ್ಲಿದ್ದ ಸುಮಾರು 400 ಘನ ಅಡಿಯಷ್ಟು ಮರದ ಪದಾರ್ಥ ಭಸ್ಮಗೊಂಡಿದೆ.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಬಸವರಾಜು, ಶಾಸಕ ಎ. ಮಂಜು ಬೇಟಿ ನೀಡಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ರು. 15 ಲಕ್ಷದಷ್ಟು ಭಸ್ಮ: ಮಿಲ್‌ನಲ್ಲಿ ಬೆಲೆಬಾಳುವ ಮರಗಳು ಇತ್ತೆಂದು ಮಿಲ್ ಮಾಲೀಕ ಆನಂದ್ ತಿಳಿಸಿದ್ದಾರೆ. ಸುಮಾರು ರು. 15 ಲಕ್ಷದಷ್ಟು ಹಾನಿ ಸಂಭವಿಸಿರಬಹುದೆಂದು ಅಂದಾಜು ಮಾಡಲಾಗಿದೆ. ಈ ವೇಳೆ ಬೆಂಕಿ ಬೃಹದಾಕಾರವಾಗಿ ಕಾಣಿಸಿಕೊಂಡು, ಮನೆಯ ಛಾವಡಿಗಳು  ಸಂಪೂರ್ಣ ಭಸ್ಮವಾಗಿದೆ.
ಇಬ್ಬರಿಗೆ ಗಾಯ: ತಾಲೂಕಿನ ಬಿದರೂರು ಗ್ರಾಮದಲ್ಲಿ ಮನೆಯಲ್ಲಿ ಇದ್ದ ಇಬ್ಬರಿಗೆ ಸಿಡಿಲು ಬಡಿದಿದೆ.ರಾತ್ರಿ 9.30ರಲ್ಲಿ ಈ ಘಟನೆ ಸಂಭವಿಸಿದ್ದು, ಲೋಕೇಶ್ ಮತ್ತು ಭಾರತಿ ಎಂಬುವವರಿಗೆ ತೀವ್ರ ಗಾಯಗಳಾಗಿವೆ. ಲೋಕೇಶ್ ಎಡಪಾರ್ಶ್ವಕ್ಕೆ ಸಿಡಿಲಿನ ಶಾಖ ಬಡಿದಿದೆ. ತೀವ್ರ ಗಾಯಗೊಂಡ ಅವರನ್ನು ಹಾಸನದ ಆಸ್ಪತ್ರೆಗೆ ಸೇರಿಸಲಾಗಿದೆ. ಭಾರತಿಗೆ ಕೊಣನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.