ಹಾಸನ

ನಾನು ಧರ್ಮ ವಿರೋಧಿಯಲ್ಲ

Published On :

ಹುಣಸೂರು: ದೇವರು-ಧರ್ಮ, ನಂಬಿಕೆ ಹಾಗೂ ಆಚರಣೆಯ ವಿರೋಧಿ ನಾನಲ್ಲ, ಆದರೆ ದೇವರು, ಧರ್ಮದ ಹೆಸರಿನಲ್ಲಿ ಕೆಲವರು ನಾನಾ ಅನಾಚಾರದ ಮೂಲಕ ಮಾರುಕಟ್ಟೆಯ ಸರಕು ಮಾಡಿಕೊಂಡು ಹಗಲು ದರೋಡೆ ನಡೆಸುತ್ತಿರುವವರ ವಿರೋಧಿ ಎಂದು ಪವಾಡ ಬಯಲುಗಾರ ಹುಲಿಕಲ್ ನಟರಾಜ್ ಹೇಳಿದರು.
ಪಟ್ಟಣದ ಟ್ಯಾಲೆಂಟ್ ವಿದ್ಯಾ ಸಂಸ್ಥೆ ಅವರಣದಲ್ಲಿ ನಡೆದ ಜಾದು-ಮಂತ್ರ ಹಾಗೂ ಪವಾಡ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆಯುತ್ತಿದ್ದೇನೆ.
ನನ್ನ ರಕ್ಷಣೆ ನನ್ನ ಕೈಯಲ್ಲಿದೆ, ಮೌಢ್ಯತೆ ಹಾಗೂ ದೇವರ ಹೆಸರಿನಲ್ಲಿ ನಡೆಯುವ ವ್ಯಾಪಾರೀಕರಣ ವಿರೋಧಿ ಆಗಿರುವುದರಿಂದ ಯಾವಾಗ ಬೇಕಾದರೂ ನನಗೆ ಅಪಾಯ ತಪ್ಪಿದಲ್ಲ. ಆದರೂ ಸಹ ನಾನು ಭಯ ಬಿದ್ದು ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ. ಅನಾಚಾರ ಎಸಗುವ ವ್ಯಕ್ತಿಗಳು ಎಷ್ಟೇ ಬಲಿಷ್ಟವಾಗಿರಲಿ ಅವರ ಮುಖವಾಡ ಬಯಲು ಮಾಡುತ್ತೇನೆ ಎಂದರು.
ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಎಂದು ಪ್ರಾಯೋಗಿಕವಾಗಿ ವಿವಿಧ ಮಾದರಿ ವಂಚನೆ- ಮೋಸಗಳು ನಡೆಯುವ ಜಾದು ಮತ್ತು ಪವಾಡ ಬಯಲು ತೋರಿಸುವ ಮೂಲಕ ಆಂಗೈಯಲ್ಲಿ ಆರೋಗ್ಯದ ಬಗ್ಗೆ ಎಲ್ಲರ ಗಮನ ಸೆಳೆದರು.
ಸಾಂಸ್ಕೃತಿಕ ಜಾತ್ರೆಗೆ ಬನ್ನಿ: ಟ್ಯಾಲೆಂಟ್ ವಿದ್ಯಾಸಂಸ್ಥೆ ಮುಖ್ಯಸ್ಥ ನವೀನ್ ರೈ ಮಾತನಾಡಿ, ವಿದ್ಯಾಸಂಸ್ಥೆಯ ಅವರಣದಲ್ಲಿ ನಿರ್ಮಿಸಿರುವ ಮಿನಿ ರಂಗಾಯಣ ವೇದಿಕೆಯಲ್ಲಿ ಮಕ್ಕಳಿಗೆ ಬೇಸಿಗೆ ಮೇಳನ್ನು ನಡೆಸುತ್ತಿದ್ದು, ಮೇ 14ರಂದು ಚಮ್ಮಾರನ ಹೆಂಡ್ತಿ ಎಂಬ ನಾಟಕವನ್ನು ರಂಗಾಯಣ ಕಲಾವಿದರು, ಮೇ 15ಕ್ಕೆ ಮೈಮ್ ರಮೇಶ್ ತಂಡದಿಂದ ಬುಗುರಿ ನಾಟಕ ಪ್ರದರ್ಶನವಾಗಲಿದೆ.
ಮೇ 16ಕ್ಕೆ ಬೇಸಿಗೆ ಶಿಬಿರದ ಮಕ್ಕಳಿಂದ ಅಳಿಲು ರಾಮಾಯಣ, ಮೇ 17ಕ್ಕೆ ಎ. ಅನುಷ್ ಶೆಟ್ಟಿ ತಂಡ ಸ್ವತಃ ರಚಿಸಿದ ಕನ್ನಡದ ಗೀತೆಗಳು ಮತ್ತು ಮ್ಯೂಸಿಕಲ್ ಬ್ಯಾಂಡ್ ಷೋ ಹಾಗೂ ಮೇ 18ರಂದು ಮಕ್ಕಳಿಂದ ಕೂಹು... ಕೂಹು.. ಎಂಬ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಟ್ಯಾಲೆಂಟ್ ವಿದ್ಯಾಸಂಸ್ಥೆ ಅಧ್ಯಕ್ಷ ನಾರಾಯಣ ರೈ, ನಿರ್ದೇಶಕ ಕೃಷ್ಣಮೂರ್ತಿ, ಮಂಜುನಾಥ್, ಆರ್. ಆನಂದ್, ರವಿ, ಕಾಲೇಜಿನ ಪ್ರಾಂಶುಪಾಲ ರವಿ ದೀಪಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.