ಕಂಗಲಾದ ಮಾವು ಬೆಳೆಗಾರರು
ಕನ್ನಡಪ್ರಭ ವಾರ್ತೆ , ಹಾಸನ , ಮೇ 4
ಹಣ್ಣುಗಳ ರಾಜ ಮಾವಿನಹಣ್ಣು ಈ ಬಾರಿ ಇಳುವರಿ ಕಡಿಮೆ ಆಗಿದೆ. ಇದರಿಂದ ಜಿಲ್ಲೆಯ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.
ಕಳದೆ ಬಾರಿ ಸಕಾಲದಲ್ಲಿ ಮಳೆ ಆಗಿದ್ದರಿಂದ ಮಾವಿಗೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ. ಆದರೆ ಈ ಬಾರಿ ಯುಗಾದಿಯ ನಂತರ ಮಳೆಯಾಗಿದ್ದರಿಂದ ಮಾವು ಅಂದುಕೊಂಡಂತೆ ಬೆಳೆ ಬಂದಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಎಂದೇ ಹೆಸರಾಗಿರುವ ಮಾವು ಕಣ್ಮರೆಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎಲ್ಲಾ ಕಡೆಗಳಲ್ಲೂ ಮಾವು ಸಮೃದ್ಧಿಯಾಗಿ ಹೂವು ಬಿಟ್ಟಿತ್ತು. ಆದರೆ ಮೊದಲ ಮಳೆಯಿಂದ ಮಾವಿಗೆ ಹಾನಿ ಉಂಟಾಗಿ ಹೂವು ಕಚ್ಚುವ ಮುನ್ನವೇ ಕಮರಿ ಹೋಗಿದೆ. ಆದರೆ ಪ್ರತಿವರ್ಷ ರೇವತಿ ಮಳೆಯಾದರೆ ಮಾವಿಗೆ ಯಾವುದೇ ಆಪಾಯವಿಲ್ಲ ಎಂದು ರೃತರು ನಿರಾಳರಾಗುತ್ತಿದ್ದರು. ಆದರೆ ಈ ಬಾರಿ ಮಾವು ಬೆಳೆಗಾರರಿಗೆ ಮಾತ್ರ ಹುಳಿಯಾಗಿ ಪರಿಣಮಿಸಿದೆ. ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಮೊದಲ ಮಳೆಯು ಆನೆಕಲ್ಲು ಮಳೆ ಬಿದ್ದ ಪರಿಣಾಮ ಮಾವಿನ ಫಸಲು ನಾಶವಾಗಿತ್ತು. ಆದರೆ, ಕಳೆದ ಬಾರಿ ಮೊದಲ ಮಳೆಯು ಸರಿಯಾದ ಸಮಯಕ್ಕೆ ಮಳೆಯಾದ್ದರಿಂದ ಮಾವಿಗೆ ಯಾವುದೇ ಆಪಾಯ ಉಂಟಾಗಿರಲಿಲ್ಲ. ಆದರೆ, ಈ ಬಾರಿ ಮಳೆಯ ಸರಿಯಾಗಿ ಆಗಿದ್ದರು ಸಹ ಮಾವು ಬೆಳೆಯ ಪ್ರಮಾಣವು ಕಡಿಮೆಯಾಗಿರುವುರಿಂದ ಮಾವಿನಹಣ್ಣಿನ ಪ್ರಿಯರಿಗೆ ಕೊಂಚ ನಿರಾಸೆ ಉಂಟಾಗಿದೆ.
ಹೊರಜಿಲ್ಲೆಗಳಿಗೆ ರಫ್ತು: ಜಿಲ್ಲೆಯ ಹಾಸನ ತಾಲೂಕಿನ ಶಾಂತ್ರಿ ಗ್ರಾಮ, ಕಟ್ಟಾಯ ಹೋಬಳಿ, ಮೊಸಳೆಹೊಸಳ್ಳಿ, ಆಲೂರು, ಚನ್ನರಾಯಪಟ್ಟಣ, ಅರಸೀಕೆರೆ, ಹೊಳೆನರಸೀಪುರ ಸೇರಿದಂತೆ ನಾನಾ ಕಡೆಗಳಲ್ಲಿ ಮಾವನ್ನು ಬೆಳೆಯಲಾಗುತ್ತದೆ. ಹಾಸನದ ಮಾವಿಗೆ ಮಾರಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಮಾವಿನ ಪ್ರಮಾಣ ಇಳಿಮುಖದಿಂದ ಬೆಲೆಯು ಸಹ ಈ ಬಾರಿ ಏರಿಕೆಯಾಗಿದೆ. ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಮಾವನ್ನು ಮಾರಾಟವಾಗುತ್ತಿತ್ತು.
ಕೆಮಿಕಲ್ ಪ್ರಯೋಗ: ಅಷ್ಟೋ ಇಷ್ಟು ಮರದಲ್ಲಿ ಗಟ್ಟಿಯಾಗಿ ಉಳಿದಿರುವಂತಹ ಮಾವಿನ ಕಾಯಿಗಳನ್ನು ಸಣ್ಣದರಲ್ಲೇ ಕಿತ್ತು, ಅದಕ್ಕೆ ಕೆಮಿಕಲಲ್ಗಳನ್ನು ಬಳಸಿ ಹಣ್ಣಾಗಿ ಮಾಡಲಾಗುತ್ತಿದೆ. ಇದನ್ನು ತಿನ್ನುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ.
ರಾಸಾಯನಿಕ ವಸ್ತುಗಳನ್ನು ಬಳಸಿ ಕಾಯಿಯನ್ನು ಹಣ್ಣು ಮಾಡಿ ಮಾರಾಟ ಮಾಡುತ್ತಿರುವ ಮಾವಿನ ಕಡೆ ಜನರು ಹೆಚ್ಚಿನ ಒಲವು ತೋರಿದ್ದಾರೆ. ಮಾವಿನ ಬಣ್ಣ ಜನರು ಆಕರ್ಷಣೆ ಮಾಡುವುದರಿಂದ ಇದರಲ್ಲಿ ಜನರು ಮುಗಿಬಿದ್ದಿದಾರೆ.
ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಮಾವಿನಹಳ್ಳಿನ ಇಳುವರಿ ಈ ಬಾರಿ ತೀರಾ ಕಡಿಮೆಯಾಗಿದೆ. ಇದರಿಂದ ಮಾವಿನಲ್ಲಿ ಯಾವುದೇ ಆದಾಯ ಕಾಣುತ್ತಿಲ್ಲ. ಹೂವು ಮರದಲ್ಲಿ ಕಚ್ಚುವ ಮುನ್ನವೇ ಉದುರಿ ಹೋಗಿದೆ ಇದರಿಂದ ಮಾವಿನಹಣ್ಣು ಕಡಿಮೆಯಾಗಿದೆ. ಈಗಾಗಿ ಮಾವಿನಿಂದ ಯಾವುದೇ ಆದಾಯ ಕಾಣದೆ ಕಂಗಾಲಾಗಿದ್ದೇವೆ.
- ರಾಜಪ್ಪ, ಮಾವು ಬೆಳೆಗಾರ
ಮಾರುಕಟ್ಟೆಯಲ್ಲಿ ಮಾವಿನಹಣ್ಣು ಹೆಚ್ಚಾಗಿ ಕಾಣದ ಕಾರಣ ಈ ಬಾರೀ ಮಾವಿನಹಣ್ಣು ತಿನ್ನುವವರಿಗೆ ಕೊಂಚ ನಿರಾಸೆ ಉಂಟಾಗಿದೆ. ಈಗ ಮಾರುಕಟ್ಟೆ ಬಂದಿರುವ ಹಣ್ಣುಗಳ ಬೆಲೆ ಸ್ವಲ್ಪ ಹೆಚ್ಚಾಗಿದೆ. ಆದರೆ ಬೆಲೆಯನ್ನು ಲೆಕ್ಕಿಸದೆ ಮಾವಿನಹಣ್ಣನ್ನು ತಿನ್ನುತ್ತಿದ್ದೇವೆ.
- ಕುಮಾರ್, ಮಾವು ಪ್ರಿಯ
ಮಾವಿನ ದರ ಹೆಚ್ಚು
ವಿಪರ್ಯಾಸ ಅಂದ್ರೆ ಇಲ್ಲೇ ಮಾವಿನಹಣ್ಣಿನ ಇಳುವರಿ ಕಡಿಮೆಯಾಗಿರುವುದರಿಂದ ಮಾವನ್ನು ಹೊರಜಿಲ್ಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹಾಸನದ ಮಾವಿಗೆ ಮಾರಕಟ್ಟೆಯಲ್ಲಿ ಉತ್ತಮವಾದ ಬೇಡಿಕೆ ಇದೆ. ಆದರೆ ಮಾವು ಅಂದುಕೊಂಡ ರೀತಿಯಲ್ಲಿ ಇಳುವರಿ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಮಾವಿನ ದರ ಹೆಚ್ಚಾಗಿದೆ. ಬೇಸಿಗೆ ಕಳೆದು ಮಳೆಗಾಲ ಹತ್ತರವಾಗುತ್ತಿದ್ದರೂ ಮಾವಿನಹಣ್ಣು ಮಾರುಕಟ್ಟೆಯಲ್ಲಿ ಸರಿಯಾಗಿ ಬಂದಿಲ್ಲ.
ಇದರಿಂದ ಮಾವು ಪ್ರಿಯರಿಗೆ ಈ ಬಾರಿ ಕೊಂಚ ನಿರಾಸೆ ಉಂಟಾಗಿದೆ. ರಸಪುರಿ, ಬಾದಾಮಿ, ಗಿಣಿ ಮಾವಿನಹಳ್ಳಿ ಇಲ್ಲಿ ಹೆಚ್ಚಿನ ಬೇಡಿಕೆ ಇದೆ. ಇತರೆ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಿಂದಾಗಿ ಮಾವು ಈ ಬಾರಿ ಕೈಕೊಟ್ಟರೆ ಹಾಸನದಲ್ಲಿ ಮಾತ್ರ ಮಾವಿನ ಹೂವು ಕಚ್ಚುವ ಮುನ್ನವೇ ಕಮರಿ ಹೋಗಿದೆ. ಇದರಿಂದ ಮಾವು ಇಳುವರಿ ಕಡಿಮೆಯಾಗಿದೆ ಎನ್ನಲಾಗಿದೆ.
-ಪಿ. ರವಿಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

