ಬಿಜೆಪಿಗೆ 18 ಸ್ಥಾನ: ಬಿಎಸ್ವೈ
ಅರಸೀಕೆರೆ: ಮೇ 16ರಂದು ಪ್ರಕಟಗೊಳ್ಳಲಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಬಿಜೆಪಿ ಪರವಾಗಿ ಬರಲಿದೆ. ರಾಜ್ಯದಲ್ಲಿ 16ರಿಂದ 18 ಲೋಕಸಭಾ ಸ್ಥಾನಗಳನ್ನು ಪಕ್ಷ ಗಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಧಾರ್ಮಿಕ ಸಮಾರಂಭದಲ್ಲಿಪಾಲ್ಗೊಳ್ಳಲು ಶನಿವಾರ ಆಗಮಿಸಿದ್ದ ಅವರು ಹಾರನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ.
ತಾವು ಮಂತ್ರಿಯಾಗಬೇಕೆಂಬ ಇಚ್ಛೆಯನ್ನು ಹೊಂದಿಲ್ಲ. ಮಂತ್ರಿಯಾಗುವುದಕ್ಕಿಂತ ಅವರ ನೇತೃತ್ವದಲ್ಲಿನ ಸರ್ಕಾರದಲ್ಲಿ ಸಂಸತ್ ಸದಸ್ಯನಾಗಿ ಕೆಲಸ ಮಾಡುವುದೇ ಹೆಮ್ಮೆಯ ಸಂಗತಿ ಎಂದು ಭಾವಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೈತರ ಬಗ್ಗೆ ಕಾಳಜಿ: ತೀವ್ರ ಬರಗಾಲ, ಮಳೆಯ ಅಭಾವದಿಂದ ತಾಲ್ಲೂಕಿನಾದ್ಯಂತ ಸುಮಾರು 8 ಲಕ್ಷಕ್ಕೂ ಅಧಿಕ ತೆಂಗಿನ ಮರಗಳು ನಾಶವಾಗಿವೆ. ಸರ್ಕಾರ ಇಂತಹ ಬೆಳೆ ಕಳೆದುಕೊಂಡ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ ಅವರು, ತಮ್ಮನ್ನು ನಂಬಿ ಕೆಜೆಪಿಯಿಂದ ಬಿಜೆಪಿಗೆ ಬಂದ ಮುಖಂಡರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಿದ್ದೇನೆ.
ಮುಂಬರುವ ದಿನಗಳಲ್ಲಿ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಲಾಗುವುದು. ಮಾದಿಹಳ್ಳಿ, ಹೊನವಳ್ಳಿ ಏತ ನೀರಾವರಿ ಯೋಜನೆ ಯಡಿಯೂರಪ್ಪನವರ ಹೋರಾಟದ ಫಲವಾಗಿ ರೂಪಗೊಂಡಿದೆ ಎಂದು ನೆನಪಿಸಿಕೊಂಡರು.
ಕ್ಷಮೆ ಯಾಚಿಸಬೇಕು: ಪತ್ರಕರ್ತರಿಗೆ ಬೆದರಿಕೆ ಹಾಕಿದ ಸಚಿವ ಅಭಯಚಂದ್ರ ಜೈನ್ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಟುವಾಗಿ ಟೀಕಿಸಿದರು.
ಪತ್ರಕರ್ತರಿಗೆ ಧಮಕಿ ಹಾಕುವುದು ಪ್ರಜಾತಂತ್ರ ವ್ಯವಸ್ಥೆ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಕಗ್ಗೊಲೆಯಾಗಿದೆ. ಸಚಿವರ ಇಂತಹ ವರ್ತನೆ ಅಕ್ಷಮ್ಯ. ಸಚಿವ ಜೈನ್ ಕೂಡಲೇ ಮಾಧ್ಯಮ ಮಿತ್ರರ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದರು.
ರಾಜಕಾರಣಿಗಳಿಗೆ ಇಂತಹ ಪರಿಸ್ಥಿತಿಗಳು ನಿರ್ಮಾಣವಾಗಿರುವುದು ಸಹಜ. ಆದರೆ ಇಂತಹ ವರ್ಥನೆ ಯಾವುದೇ ವ್ಯಕ್ತಿಗೂ ಶೋಭೆ ತರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಈಶ್ವರಹಳ್ಳಿ ಲಕ್ಷ್ಮಣ್, ಜಿಲ್ಲಾ ವಕ್ತಾರ ಎನ್.ಡಿ.ಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಜೀಗೆರೆ ಬಸವರಾಜು, ತಾ.ಪಂ.ಸದಸ್ಯರಾದ ಬಿ.ಆರ್.ಜಯಣ್ಣ, ದಿನೇಶ್, ಹಾರನಹಳ್ಳಿ ಸಿದ್ದಪ್ಪ, ವಿಜಯ್ ವಿಕ್ರಂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

