ಹಾಸನ

ರವಿಪೂಜಾರಿಯ ನಾಲ್ವರು ಸಹಚರರ ಬಂಧನ

Published On :

ಹಾಸನ: ಮಂಗಳೂರು ಉದ್ಯಮಿಯನ್ನು ಕೊಲೆ ಮಾಡಲು ಸಂಚು ಹೂಡಿದ್ದ ಸುಪಾರಿ ಕಿಲ್ಲರ್ ರವಿ ಪೂಜಾರಿ ಅವರ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ವರು ಸುಫಾರಿ ಕಿಲ್ಲರ್‌ಗಳನ್ನು ಹಾಸನ ನಗರಕ್ಕೆ ಭಾರಿ ಬಿಗಿ ಭದ್ರತೆಯೊಂದಿಗೆ ಕರೆದುಕೊಂಡು ಬಂದು ಉನ್ನತಮಟ್ಟದ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಮಂಗಳೂರು, ಬೆಂಗಳೂರು ಕಡೆಯವರಾದ ಗಣೇಶ್, ಕಮಲ್, ದತ್ತ ಮತ್ತು ಮುಖೇಶ್ ಎಂಬುವರೇ ಬಂಧಿತ ಸುಪಾರಿ ಕಿಲ್ಲರ್‌ಗಳು.
ಮಂಗಳೂರಿನ ಬಜ್ಪೇನಲ್ಲಿ ಪೊಲೀಸರು ಬೀಸಿದ ಬಲೆಗೆ ಬಿದ್ದ ಸುಫಾರಿ ಕಿಲ್ಲರ್‌ಗಳನ್ನು ಮಂಗಳೂರಿನಲ್ಲಿ ವಿಚಾರಣೆ ಒಳಪಡಿಸುವುದು ಮತ್ತು ಅಗತ್ಯ ಮಾಹಿತಿಯನ್ನು ಸಂಗ್ರಹಿಸುವುದು ಕಷ್ಟಕರ ಎಂದು ತಿಳಿದ ಪೊಲೀಸರು ಹಾಸನಕ್ಕೆ ಕರೆ ತಂದು ತೀವ್ರ ರೀತಿಯಲ್ಲಿ ವಿಚಾರಣೆ ಮಾಡುತ್ತಿದ್ದಾರೆ. ವಿಚಾರಣೆಯು ಹಾಸನ, ಮಂಗಳೂರು ಪೊಲೀಸ್ ಉನ್ನತಾಧಿಕಾರಿಗಳ ನೇತೃತ್ವದಲ್ಲಿ ಭಾರಿ ಗೌಪ್ಯವಾಗಿ ತನಿಖೆ ನಡೆಸಲಾಗುತ್ತಿದೆ.
ಪೊಲೀಸರು ಹೇಳೋದೇನು?: ರವಿ ಪೂಜಾರಿ ಸೂಚನೆ, ನಿರ್ದೇಶನ ಮತ್ತು ತಾಕೀತಿನಂತೆ ಬಂಧಿತ ಸೂಫಾರಿ ಕಿಲ್ಲರ್‌ಗಳು, ಮಂಗಳೂರು ಬಿಲ್ಡರ್ ಲೋಕನಾಥ್ ಶೆಟ್ಟಿ ಅವರನ್ನು ಹಣಕ್ಕಾಗಿ ಕೊಲೆ ಮಾಡಲು ಸಂಚು ಹೂಡಿದ್ದರು. ಈ ವಿಷಯ ಹೇಗೋ ಪೊಲೀಸರಿಗೆ ತಿಳಿದ್ದರಿಂದ ಮಂಗಳೂರು ಏರ್‌ಪೋರ್ಟ್, ರಾಷ್ಟ್ರೀಯ ಹೆದ್ದಾರಿ ಮತ್ತಿತರ ಕಡೆ ತೀವ್ರ ನಿಗಾ ವಹಿಸಿದ್ದರು. ಈ ಸಂದರ್ಭದಲ್ಲಿ ಬಜ್ಪೇ ಬಳಿ ಇರುವ ಮನೆಯೊಂದರಲ್ಲಿ ಇದ್ದಾಗ ಕಿಲ್ಲರ್‌ಗಳನ್ನು ಬಂಧಿಸಲಾಗಿದೆ.
ತಪ್ಪಿದ ಅನಾಹುತ: ಸುಫಾರಿ ಕಿಲ್ಲರ್‌ಗಳು ಉದ್ಯಮಿಯನ್ನು ಶೂಟೌಟ್ ಮಾಡಲು ನಿರ್ಧರಿಸಿದ್ದರು ಎನ್ನಲಾಗಿದ್ದು, ಶೂಟೌಟ್ ಎಲ್ಲಿ, ಹೇಗೆ  ಮಾಡಬೇಕು ಎಂಬಿತ್ಯಾದಿ ಬಗ್ಗೆ ಪಕ್ಕಾ ಯೋಜನೆ ರೂಪಿಸಿದ್ದರು.
ಪೊಲೀಸರು ಬಂಧಿಸುವುದು ಒಂದು ದಿನ ತಡವಾಗಿದ್ದರೂ ಉದ್ಯಮಿ ಪ್ರಾಣಕ್ಕೆ ಸಂಚಕಾರ ಬರುತ್ತಿತ್ತು ಎಂಬ ಭಯಾನಕ ಸಂಗತಿ ವಿಚಾರ ವೇಳೆ ಹೊರಬಿದ್ದಿದೆ ಎಂದು ತಿಳಿದಿದೆ.
ಉದ್ಯಮಿ ಲೋಕನಾಥ ಶೆಟ್ಟಿ ಅವರು ಕಾರಿನಲ್ಲಿ ಹೋಗುವ ಮತ್ತು ಬರುವ ಮಾರ್ಗ ಮತ್ತು ಯಾವಾಗ ಎಲ್ಲಿಗೆ ಭೇಟಿ ನೀಡುತ್ತಾರೆ ಎಂಬ ಬಗ್ಗೆ ಬಂಧಿತ ಕಿಲ್ಲರ್‌ಗಳ ಬಳಿ ಮಾಹಿತಿ ಲಭ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.