ಹಾಸನ

ಅರ್ಧಕ್ಕೆ ನಿಂತ ಒಳಚರಂಡಿ ಕಾಮಗಾರಿ

Published On :

ಕನ್ನಡಪ್ರಭ ವಾರ್ತೆ, ಅರಸೀಕೆರೆ, ಮೇ 5
ಪಟ್ಟಣದ ಹೃದಯ ಭಾಗವಾದ ಹಾಸನ ವೃತ್ತದ ಎಡಬದಿಯ ಒಳಚರಂಡಿ ದುರಸ್ತಿ ಕಾಮಗಾರಿ ಅರ್ಧದಲ್ಲೇ ಕೈಬಿಟ್ಟಿರುವುದರಿಂದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಚರಂಡಿಯಿಂದ ದುರ್ನಾತ ಹೊರಹೊಮ್ಮುತ್ತಿದ್ದು ಇದರಿಂದ ಸಾರ್ವಜನಿಕರು ಮೂಗು ಮುಚ್ಚಿ ತಿರುಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಅವ್ಯವಸ್ಥೆ ಸರಿಪಡಿಸಬೇಕೆಂದು ಪಟ್ಟಣದ ನಾಗರಿಕರು ಪುರಸಭೆಯನ್ನು ಒತ್ತಾಯಿಸಿದ್ದಾರೆ.
ಇತ್ತೀಚಿಗೆ ಮಳೆ ಬಂದ ಸಂದರ್ಭದಲ್ಲಿ ಚರಂಡಿಯಲ್ಲಿ ಕಸಕಡ್ಡಿ ತುಂಬಿದ್ದರಿಂದ ನೀರು ಹೋಗದೆ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಪುರಸಭೆ ಚರಂಡಿಯಲ್ಲಿ ತುಂಬಿದ್ದ ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿತು.
  ಆದರೂ, ಇನ್ನೊಂದು ಬದಿಯ ಚರಂಡಿಯ ಮೇಲ್ಭಾಗದಲ್ಲಿದ್ದ ಹಾಸುಗಲ್ಲುಗಳನ್ನು ತೆಗೆದು ಮುಚ್ಚದೇ ಹಾಗೆಯೇ ಬಿಡಲಾಗಿದೆ. ಹೀಗಾಗಿ, ರಾತ್ರಿಯ ವೇಳೆ ವಿದ್ಯುತ್ ನಿಲುಗಡೆಯಾಗಿರುವ ಸಂದರ್ಭದಲ್ಲಿ ಅನೇಕ ಪಾದಚಾರಿಗಳು ಈ ಚರಂಡಿಗೆ ಬಿದ್ದು ಪಾವನರಾಗಿದ್ದಾರೆ! ಎಷ್ಟೋ ಜನ ಇದರಲ್ಲಿ ಬಬಿದ್ದುಗಾಯಗೊಂಡು ಆಸ್ಪತ್ರೆಗೆ ಧಾವಿಸಿರುವ ಸಾಕಷ್ಟು ಉದಾಹರಣೆಗಳಿದ್ದರೂ ಪುರಸಭೆಗೆ ಇದನ್ನು ಸರಿಪಡಿಸಬೇಕೆನಿಸಿಲ್ಲ.
ಸಾಂಕ್ರಾಮಿಕ ರೋಗಗಳ ಭೀತಿ: ಚರಂಡಿಯಿಂದ ಹೊರಹೊಮ್ಮುತ್ತಿರುವ ದುರ್ನಾತದಿಂದಾಗಿ ಇಡೀ ಪ್ರದೇಶವೇ ಕಲುಷಿತಗೊಳಿಸಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹರಡುವ ಭೀತಿಯಲ್ಲಿ ನಾಗರಿಕರಿದ್ದಾರೆ.
ಸ್ಥಳೀಯರ ಆಗ್ರಹ: ಅಲ್ಲದೇ ಅಕ್ಕಪಕ್ಕದ ಅಂಗಡಿ ಮಾಲೀಕರು, ಆಟೋ ಚಾಲಕರು ತಮ್ಮ ದೈನಂದಿನ ವ್ಯವಹಾರವನ್ನೇ ಸ್ಥಗಿತಗೊಳಿಸುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಹೀಗಿದ್ದರೂ ಪುರಸಭಾ ಸಿಬ್ಬಂದಿ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
  ವಾಸ್ತವ ಅಂಶ ಅರಿಯದ ಅಧಿಕಾರಿಗಳು ನಿರ್ಲಕ್ಷ್ಯ ತೋರತೊಡಗಿದ್ದಾರೆ. ಕೂಡಲೇ ಅವ್ಯವಸ್ಥೆ ಸರಿಪಡಿಸಬೇಕೆಂದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.