ಹಾಸನ

'ಏಲಕ್ಕಿಗೆ ಬಂಪರ್ ಬೆಲೆ'

Published On :

ಹಾಸನ: ಶ್ರೀಲಂಕಾ ಹಾಗೂ ಗ್ವಾಟೆಮಾಲ ರಾಷ್ಟ್ರಗಳಲ್ಲಿ ಏಲಕ್ಕಿ ಬೆಳೆಗೆ ಥ್ರಿಫ್ಸ್ (ನುಸಿ) ಕೀಟ ಬಾಧೆ ಹೆಚ್ಚಾಗಿರುವುದರಿಂದ ಮುಂದಿನ ವರ್ಷಗಳಲ್ಲಿಭಾರತದ ಏಲಕ್ಕಿಗೆ ಬೆಲೆ ಹೆಚ್ಚಾಗಲಿದೆ ಎಂದು ಸಾಂಬಾರ್ ಮಂಡಳಿ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಎಂ.ಆರ್. ಸುದರ್ಶನ್ ತಿಳಿಸಿದರು.
ತಾಲೂಕಿನ ದೋಣಿಗಾಲ್ ಏಲಕ್ಕಿ ಸಂಶೋಧನಾ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಕಾಳುಮೆಣಸು ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದರು. ದೋಣಿಗಾಲ್ ಏಲಕ್ಕಿ ಸಂಶೋಧನಾ ಕೇಂದ್ರದ ಸಲಹೆ ಹಾಗೂ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಹೆಚ್ಚಿನ ಪ್ರದೇಶದಲ್ಲಿ ಏಲಕ್ಕಿ ಬೆಳೆಯುವಂತೆ ಬೆಳೆಗಾರರಿಗೆ ಕಿವಿ ಮಾತು ಹೇಳಿದರು.
ನಮ್ಮಲ್ಲಿ ಹೆಚ್ಚು ಉತ್ಪಾದನೆ: ಭಾರತದಲ್ಲಿ ಏಲಕ್ಕಿ ಬೆಳೆಯುವ ಪ್ರದೇಶ ಕಡಿಮೆ ಇದ್ದರೂ, ಉತ್ಪಾದನೆ ಹೆಚ್ಚಾಗಿದೆ. ಇದಕ್ಕೆ ಬೆಳೆಗಾರರ ಶ್ರಮ ಹಾಗೂ ಆಧುನಿಕ ಕೃಷಿ ಪದ್ಧತಿ ಕಾರಣ ಎಂದರು. ಕಾಳು ಮೆಣಸು ಬೆಳೆಗೆ ಫೆಬ್ರವರಿ ಮತ್ತು  ಮಾರ್ಚ್‌ನಲ್ಲಿ ಕಡ್ಡಾಯವಾಗಿ ಹೆಚ್ಚು ನೀರು ಪೂರೈಕೆ ಮಾಡಬೇಕು. ಇದರಿಂದ ಗಂಡು ಹೂವಿನ ಸಂಖ್ಯೆ ಹೆಚ್ಚಾಗಿ ಉತ್ತಮ ಇಳುವರಿ ಸಾಧ್ಯ ಎಂದರು.
ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಪ್ರಗತಿಪರ  ಬೆಳೆಗಾರರಲ್ಲಿ ಕೆ.ಆರ್. ಕೇಶವ ಅವರಿಗೆ ಇಂಡೋನೇಶಿಯಾ ರಾಷ್ಟ್ರದ ಜತಾರ್ಥ ಇಂಟರ್ ನ್ಯಾಷನಲ್ ಪೆಪ್ಪರ್ ಕಮ್ಯೂನಿಟಿ ವತಿಯಿಂದ ಅಂತಾರಾಷ್ಟ್ರೀಯ ಕಾಳುಮೆಣಸು ಬೆಳೆಗಾರರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಂಬರ್ ಮಂಡಳಿ ಅಭಿವೃದ್ಧಿ ನಿರ್ದೇಶಕ ಎಸ್. ಸಿದ್ದರಾಮಪ್ಪ ಮಂಡಳಿಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಾಂಬಾರ್ ಮಂಡಳಿ ಉಪ ನಿರ್ದೇಶಕ ಸಿ.ಆರ್. ಪುರುಷೋತ್ತಮ್, ದೋಣಿಗಾಲ್ ಏಲಕ್ಕಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ. ಕೃಷ್ಣಭಟ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.