ಹಾಸನ

ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ ಶಿಸ್ತು ಕ್ರಮ: ಶಾಸಕರ ಎಚ್ಚರಿಕೆ

Published On :

ಆಲೂರು: ತಾಲೂಕಿನ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಸ್ಪಂದಿಸದೆ ಕಾಲಹರಣ ಮಾಡುತ್ತಿರುವ ಗ್ರಾಪಂ ಕಾರ್ಯದರ್ಶಿ ಹಾಗೂ ಪಿಡಿಒಗಳ  ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಶಾಸಕ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕನ್ನು ಬರಪೀಡಿತವೆಂದು ಘೋಷಿಸಿರುವುದು ಸ್ವಾಗತಾರ್ಹ ವಿಷಯ. ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಕ್ಷೇತ್ರಕ್ಕೆ ನೀಡಿರುವ 40 ಲಕ್ಷ ಸಾಕಾಗುವುದಿಲ್ಲ. ಇದಕ್ಕೆ 1 ಕೋಟಿ ನೀಡಬೇಕು. ಇನ್ನೆರಡು ತಿಂಗಳು ಎಂತಹ ಕೆಟ್ಟ ಪರಿಸ್ಥಿತಿ ಬಂದರೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು.
ಪಿಡಿಒಗಳು ಪ್ರತಿದಿನ ಕ್ಷೇತ್ರದಲ್ಲೇ ಇದ್ದು ಬೋರ್‌ವೆಲ್ ದುರಸ್ತಿ, ಹೊಸ ಬೋರ್‌ವೆಲ್ ಕೊರೆಸುವುದು ಹಾಗೂ ಕಿರಿ ನೀರು ಸರಬರಾಜು ವ್ಯವಸ್ಥೆ ಕೈಗೊಂಡು ವಾಟರ್ ವ್ಯಾನ್‌ಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು. ಸರಿಯಾಗಿ ಕೆಲಸ ಮಾಡದ ವಾಟರ್ ವ್ಯಾನ್‌ಗಳನ್ನು ತೆಗೆದು ಹಾಕಿ ಹೊಸಬರನ್ನು ನೇಮಿಸಿಬೇಕು. ಪೈಪ್‌ಲೈನ್ ಕೆಲಸ, ಬೋರ್‌ವೆಲ್ ದುರಸ್ತಿ ಹಾಗೂ ಹೊಸ ಬೋರ್‌ವೆಲ್ ಕೊರೆಸಲು ಹಣವಿರಲಿ, ಬಿಡಲಿ ಕೆಲಸ ಮಾಡಬೇಕು ಎಂದರು.
ಹಣದ ಕೊರತೆ ಎದುರಾದರೆ ತಮ್ಮ ಅನುದಾನದಿಂದ ತಕ್ಷಣ ನೀಡುವೆ. ಸೆಸ್ಕ್, ಜಿಪಂ ನವರು ಇದಕ್ಕೆ ಸಹಕರಿಸಬೇಕು.
ಸರ್ಕಾರಿ ಸ್ಥಳದಲ್ಲಿ ನೀರು ಬಾರದಿದ್ದರೆ ಖಾಸಗಿಯವರ ಸಹಕಾರದಿಂದ ನೀರಿನ ವ್ಯವಸ್ಥೆ ಮಾಡಬೇಕು. ಜನರಿಗಷ್ಟೇ ಅಲ್ಲದೆ ಜಾನುವಾರುಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದರು. ಜಿಪಂ ಸದಸ್ಯ ಪುರುಷೋತ್ತಮ್, ತಾಪಂ ಅಧ್ಯಕ್ಷೆ ಯಶೋಧಾ, ಉಪಾಧ್ಯಕ್ಷೆ ನಾಗಮ್ಮ, ತಹಸೀಲ್ದಾರ್ ಮಹದೇವಯ್ಯ, ಇಒ ಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.