ರೈತರಿಗೆ ಆಧಾರ್ ಮಾದರಿ ಸಂಖ್ಯೆ
ಮೈಸೂರು: ರೈತಪರ ಯೋಜನೆಗಳ ಯಶಸ್ಸಿಗೆ ಕೃಷಿಕರ ಕುರಿತು ಪ್ರಾಥಮಿಕ ಮಾಹಿತಿ ಅತ್ಯಂತ ಅವಶ್ಯಕವೆಂದು ಪರಿಗಣಿಸಿರುವ ಸರ್ಕಾರವು, ಕೆ- ಕಿಸಾನ್ ಯೋಜನೆಯಡಿ ರೈತರು ಮತ್ತು ಕೃಷಿ ಭೂಮಿ ಬಗ್ಗೆ ಸಂಪೂರ್ಣವಾಗಿ ಸಂಗ್ರಹಿಸಿದ ವಿವರಗಳ ಆಧಾರದ ಮೇಲೆ ಆಧಾರ್ ಮಾದರಿಯಲ್ಲಿ ರೈತರಿಗೂ ಒಂದು ಅಧಿಕೃತ ಸಂಖ್ಯೆ ನೀಡಲು ಯೋಜಿಸಿದೆ. ಕೃಷಿ ಇಲಾಖೆಯ ಕೆ-ಕಿಸಾನ್ ಕರ್ನಾಟಕ ಕೃಷಿ ಮಾಹಿತಿ ಸೇವೆಗಳು ಮತ್ತು ನೆಟ್ವರ್ಕಿಂಗ್ ಯೋಜನೆಯು ಸರ್ಕಾರದ ಯೋಜನೆಗಳನ್ನು ನೇರವಾಗಿ ರೈತರಿಗೆ ತಲುಪಿಸುವ ವಿನೂತನ ಯೋಜನೆಯಾಗಿದ್ದು, ಮೊದಲ ಹಂತದಲ್ಲಿ ಎಲ್ಲ ಕಸಬಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಲಾಗಿದ್ದು, ಮುಂದಿನ ಹಂತದಲ್ಲಿ ಉಳಿದ ಎಲ್ಲಾ ರೈತ ಸಂಪರ್ಕ ಕೇಂದ್ರಗಳನ್ನು ಸಹ ಕಂಪ್ಯೂಟರೀಕರಣಗೊಳಿಸಲಾಗುವುದು.
ಮೇ 5 ರಿಂದ ಮಾಹಿತಿ ಸಂಗ್ರಹಣೆ ಕಾರ್ಯ ಆರಂಭವಾಗಿದ್ದು, ರೈತ ಅನುವುಗಾರರ ಮುಖಾಂತರ ಕಸಬಾ ಹೋಬಳಿ ವ್ಯಾಪ್ತಿಯ ರೈತರ ಮಾಹಿತಿ ಸಂಗ್ರಹಿಸಿ ಕೃಷಿ ಪರಿಕರ ಪೂರೈಕೆ ವ್ಯವಸ್ಥೆ ಸಾಫ್ಟ್ವೇರ್ಗೆ ಅಳವಡಿಸುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಪರಿಕರಗಳಿಗೆ ಸಂಬಂಧಪಟ್ಟ ಎಲ್ಲ ವಹಿವಾಟುಗಳನ್ನು ಈ ಸಾಫ್ಟ್ವೇರ್ ಮೂಲಕ ಮಾಡಲು ಅನುವಾಗುವಂತೆ ಕಂಪ್ಯೂಟರೀಕರಣ ಮಾಡಲಾಗಿದ್ದು, ಈ ಕುರಿತು ಮುಖ್ಯ ತರಬೇತುದಾರರಿಗೆ ತರಬೇತಿ ನೀಡಿದೆ.
ಮನೆಯೊಳಕ್ಕೆ ನುಗ್ಗಿಯುವತಿ ಕಿಡ್ನಾಪ್
ಹೊಳೆನರಸೀಪುರ: ರಾತ್ರೋರಾತ್ರಿ ಮನೆಗೆ ನುಗ್ಗಿ ಮನೆಯವರ ಸಮ್ಮುಖದಲ್ಲಿಯೇ ಯುವತಿ ಅಪಹರಿಸಿಕೊಂಡು ಹೋಗಿರುವ ಘಟನೆ ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿದ ಗುಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಈ ಕುರಿತಂತೆ ಯುವತಿಯ ಮನೆಯವರು ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ತಡವಾಗಿ ದೂರು ದಾಖಲಿಸಿದ್ದಾರೆ.
ಗುಡ್ಡೇನಹಳ್ಳಿ ಗ್ರಾಮದಲ್ಲಿನ ಗೌರಮ್ಮ ಎಂಬುವವರು ತಮ್ಮ ಮನೆಯಲ್ಲಿ ಗಂಡ ವೆಂಕಟಯ್ಯ, ಅಳಿಯ ಕೃಷ್ಣಪ್ಪ ಹಾಗೂ ಮೊಮ್ಮಗಳಾದ ಉಷಾ ಎಂಬವರು ಮಲಗಿದ್ದ ಸಮಯದಲ್ಲಿ ಮೇ 1ರ ತಡರಾತ್ರಿ ಮನೆಯ ಬಾಗಿಲು ಬಡಿಯುವ ಶಬ್ದ ಕೇಳಿಸಿ, ಎಚ್ಚರೊಂಡು ಬಾಗಿಲು ತೆಗೆಯುವಷ್ಟರಲ್ಲಿ, ಬಾಗಿಲನ್ನು ಒದ್ದು ಒಳನುಗ್ಗಿದ್ದ ಮೂವರ ಗುಂಪೊಂದು ಮಲಗಿದ್ದ ಉಷಾ ಎಂಬ ಯುವತಿಯನ್ನು ಹೊತ್ತುಕೊಂಡು ಹೊರಗೆ ನಿಲ್ಲಿಸಿದ್ದ ಬಿಳಿ ಬಣ್ಣದ ಕಾರಿನಲ್ಲಿ ಪರಾರಿಯಾದರೆಂದು ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಅಕ್ರಮವಾಗಿ ರಾತ್ರೋರಾತ್ರಿ ಮನೆಗೆ ನುಗ್ಗಿದ ವ್ಯಕ್ತಿಯು ಮಂಡ್ಯ ನಗರದ ಎಸ್.ಡಿ. ಜಯರಾಮ್ ಬಡಾವಣೆಯ ವಾಸಿ ಚಿಕ್ಕಣ್ಣನವರ ಪುತ್ರ ನಾಗ ಎಂದು ಗೌರಮ್ಮ ಅವರ ಮನೆಯವರು ಗುರುತಿಸಿದ್ದು, ಈತನ ಜೊತೆಗೆ ಇನ್ನಿಬ್ಬರು ಯುವಕರಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಗೌರಮ್ಮ ಹಾಗೂ ಅವರ ಗಂಡ ವೆಂಕಟಯ್ಯ ಅವರು ತಮ್ಮ ಮೊಮ್ಮಗ ಮೋಹನ್ ಅವರಿಗೆ ವಿಷಯ ತಿಳಿಸಿ, ಮಂಡ್ಯಕ್ಕೆ ತೆರಳಿ ಯುವತಿಯನ್ನು ಹುಡುಕಿ, ನಂತರ ತಡವಾಗಿ ಬಂದು ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೈತರಿಗೆ ಆಧಾರ್ ಮಾದರಿ ಸಂಖ್ಯೆ
ಮೈಸೂರು: ರೈತಪರ ಯೋಜನೆಗಳ ಯಶಸ್ಸಿಗೆ ಕೃಷಿಕರ ಕುರಿತು ಪ್ರಾಥಮಿಕ ಮಾಹಿತಿ ಅತ್ಯಂತ ಅವಶ್ಯಕವೆಂದು ಪರಿಗಣಿಸಿರುವ ಸರ್ಕಾರವು, ಕೆ- ಕಿಸಾನ್ ಯೋಜನೆಯಡಿ ರೈತರು ಮತ್ತು ಕೃಷಿ ಭೂಮಿ ಬಗ್ಗೆ ಸಂಪೂರ್ಣವಾಗಿ ಸಂಗ್ರಹಿಸಿದ ವಿವರಗಳ ಆಧಾರದ ಮೇಲೆ ಆಧಾರ್ ಮಾದರಿಯಲ್ಲಿ ರೈತರಿಗೂ ಒಂದು ಅಧಿಕೃತ ಸಂಖ್ಯೆ ನೀಡಲು ಯೋಜಿಸಿದೆ. ಕೃಷಿ ಇಲಾಖೆಯ ಕೆ-ಕಿಸಾನ್ ಕರ್ನಾಟಕ ಕೃಷಿ ಮಾಹಿತಿ ಸೇವೆಗಳು ಮತ್ತು ನೆಟ್ವರ್ಕಿಂಗ್ ಯೋಜನೆಯು ಸರ್ಕಾರದ ಯೋಜನೆಗಳನ್ನು ನೇರವಾಗಿ ರೈತರಿಗೆ ತಲುಪಿಸುವ ವಿನೂತನ ಯೋಜನೆಯಾಗಿದ್ದು, ಮೊದಲ ಹಂತದಲ್ಲಿ ಎಲ್ಲ ಕಸಬಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಲಾಗಿದ್ದು, ಮುಂದಿನ ಹಂತದಲ್ಲಿ ಉಳಿದ ಎಲ್ಲಾ ರೈತ ಸಂಪರ್ಕ ಕೇಂದ್ರಗಳನ್ನು ಸಹ ಕಂಪ್ಯೂಟರೀಕರಣಗೊಳಿಸಲಾಗುವುದು.
ಮೇ 5 ರಿಂದ ಮಾಹಿತಿ ಸಂಗ್ರಹಣೆ ಕಾರ್ಯ ಆರಂಭವಾಗಿದ್ದು, ರೈತ ಅನುವುಗಾರರ ಮುಖಾಂತರ ಕಸಬಾ ಹೋಬಳಿ ವ್ಯಾಪ್ತಿಯ ರೈತರ ಮಾಹಿತಿ ಸಂಗ್ರಹಿಸಿ ಕೃಷಿ ಪರಿಕರ ಪೂರೈಕೆ ವ್ಯವಸ್ಥೆ ಸಾಫ್ಟ್ವೇರ್ಗೆ ಅಳವಡಿಸುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಪರಿಕರಗಳಿಗೆ ಸಂಬಂಧಪಟ್ಟ ಎಲ್ಲ ವಹಿವಾಟುಗಳನ್ನು ಈ ಸಾಫ್ಟ್ವೇರ್ ಮೂಲಕ ಮಾಡಲು ಅನುವಾಗುವಂತೆ ಕಂಪ್ಯೂಟರೀಕರಣ ಮಾಡಲಾಗಿದ್ದು, ಈ ಕುರಿತು ಮುಖ್ಯ ತರಬೇತುದಾರರಿಗೆ ತರಬೇತಿ ನೀಡಿದೆ.
ಯೋಗಾನರಸಿಂಹಸ್ವಾವು ರಥೋತ್ಸವ
ಭೇರ್ಯ: ತಾಲೂಕಿನ ಸಾಲಿಗ್ರಾಮ ಪಟ್ಟಣದಲ್ಲಿ ಶ್ರೀ ಯೋಗಾನರಸಿಂಹಸ್ವಾವು ರಥೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು. ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಶಾಸಕ ಸಾ.ರಾ. ಮಹೇಶ್ ರಥೋತ್ಸವಕ್ಕೆ ಚಾಲನೆ ನೀಡಿದರು.
ದೇವಾಲಯ ಸಮಿತಿಯಿಂದ ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು. ಪ್ರತಿವರ್ಷ ಮೇನಲ್ಲಿ ನಡೆಯುವ ರಥೋತ್ಸವ ಈ ಭಾಗದಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ. ಶಾಸಕ ಸಾ.ರಾ. ಮಹೇಶ್ ಪತ್ನಿ ಅನಿತಾ, ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಎಪಿಎಂಸಿ ನಿರ್ದೇಶಕ ಸೋಮು, ಕಾಂಗ್ರೆಸ್ ಮುಖಂಡರಾದ ಎಸ್.ಪಿ. ಆನಂದ್, ಲೋಕೇಶ್, ಜೆಡಿಎಸ್ನ ಕಾಗೋಡು ನರಸಿಂಹ, ನಾಗೇಂದ್ರ ಪಾಲ್ಗೊಂಡಿದ್ದರು.
ಹಲ್ಲೆಯಾದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು
ಮೈಸೂರು: ನೈಋತ್ಯ ರೇಲ್ವೆ ಮೈಸೂರು ವಿಭಾಗದ ಲಾರಿ ಚಾಲಕ ಕೆ.ವಿ.ಸಿಜು ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದರೂ ರೇಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮೈಸೂರಿನ ನಿವಾಸಿ ಮನೋಹರ ಎಂಬವರು ಆರೋಪಿಸಿದ್ದಾರೆ.
ಕೆ.ವಿ. ಸಿಜು ಅವರು ನೈಋತ್ಯ ರೇಲ್ವೆ ಮೈಸೂರು ವಿಭಾಗದ ಕೋಚಿಂಗ್ ಡಿಪೋದಲ್ಲಿ ಚಾಲಕರಾಗಿದ್ದಾರೆ. ಭಾನುವಾರ ರೇಲ್ವೆ ಇಲಾಖೆಗೆ ಸೇರಿದ ಲಾರಿಯಲ್ಲಿ ಅಪಘಾತ ಪರಿಹಾರ ಸಾಮಗ್ರಿಗಳನ್ನು ಮೈಸೂರಿನಿಂದ ಸಕಲೇಶಪುರಕ್ಕೆ ಸಾಗಿಸುತ್ತಿದ್ದರು.
ಈ ವೇಳೆ ಹಾಸನದ ದೇವರಾಯಪಟ್ಟಣ ಬಳಿ ಕಾರಿನಲ್ಲಿ ಬಂದವರು ಲಾರಿಯನ್ನು ತಡೆದು ಸಿಜು ಮೇಲೆ ಹಲ್ಲೆ ನಡೆಸಿದ್ದಾರೆ.
ಗಾಯಗೊಂಡಿದ್ದ ಸಿಜು ಅವರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.
ಸಿಜು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಈವರೆಗೂ ರೇಲ್ವೆ ಪೊಲೀಸರು ಆಸ್ಪತ್ರೆಗೆ ತೆರಳಿ ಸಹಾಯ ಮಾಡಿಲ್ಲ. ರೇಲ್ವೆ ಅಧಿಕಾರಿಗಳು ಸಹ ನಿರ್ಲಕ್ಷ್ಯವಹಿಸಿದ್ದು, ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಿಲ್ಲ ಎಂದು ದೂರಿದ್ದಾರೆ.
ಸಿಜು ಅವರನ್ನು ಸಕಲೇಶಪುರ ಬಳಿ ರೈಲು ಅಪಘಾತವಾದ ಸ್ಥಳಕ್ಕೆ ತುರ್ತು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸಹೋದ್ಯೋಗಿಗಳು ಸಿಜು ಅವರನ್ನು ಹಾಸನದಿಂದ ಮೈಸೂರಿಗೆ ಕರೆ ತಂದಿದ್ದಾರೆ.
ಇಲ್ಲಿಗೆ ಬಂದ ಮೇಲೂ ರೇಲ್ವೆ ಇಲಾಖೆ ಅಧಿಕಾರಿಗಳು ಸಿಜು ಅವರ ಯೋಗಕ್ಷೇವು ವಿಚಾರಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಮನೋಹರ ಆರೋಪಿಸಿದ್ದಾರೆ.
'ಬರಪೀಡಿತ ಎಂದು ಸಕಲೇಶಪುರವನ್ನು ಘೋಷಿಸಿ'
ಸಕಲೇಶಪುರ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಸರಕಾರವನ್ನು ಶಾಸಕ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಈ ಬಾರಿ ವಾತಾವರಣದಲ್ಲಿ ಅಧಿಕ ಉಷ್ಣಾಂಶ ಕಂಡು ಬಂದಿರುವುದರಿಂದ ಮಲೆನಾಡಿನಲ್ಲಿರುವ ಬಹುತೇಕ ನದಿ, ತೊರೆ, ಕೆರೆ, ಕಟ್ಟೆಗಳಲ್ಲಿ ನೀರಿನ ಸಂಗ್ರಹ ಕ್ಷೀಣಿಸಿದ್ದರೆ, ಅಧಿಕ ಉಷ್ಣಾಂಶದ ಕಾರಣ ಕಾಫಿ ಗಿಡಿಗಳು ಒಣಗುತ್ತಿರುವ ಪರಿಣಾಮ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಸಕಲೇಶಪುರ- ಆಲೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸ ಬೇಕು ಎಂದರು.
ನೀರು ಸರಬರಾಜಿನಲ್ಲಿ ವ್ಯತ್ಯಯ ಇಂದು
ಹಾಸನ: ನಗರಕ್ಕೆ ನೀರು ಸರಬರಾಜು ಮಾಡುವ ಗೊರೂರು ಹಾಗೂ ಯಗಚಿ ನೀರು ಸರಬರಾಜು ಕೇಂದ್ರಗಳಿಗೆ ವಿದ್ಯುತ್ ಸಂಪರ್ಕದಲ್ಲಿ ಏರುಪೇರು ಉಂಟಾಗುತ್ತಿರುವುದರಿಂದ ಗೊರೂರು ಹಾಗೂ ಯಗಚಿ ನೀರು ಸರಬರಾಜು ಕೇಂದ್ರ ಹಾಗೂ ಸ್ಥಳೀಯ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆ ಆಯುಕ್ತ ಕೃಷ್ಣಮೂರ್ತಿ ಕೋರಿದ್ದಾರೆ.
ನೀರುಗಂಟಿ ರಾಜಕೀಯ ಮಾಡಿದರೆ ಉಗ್ರ ಕ್ರಮ
ಸಕಲೇಶಪುರ: ತಾಲೂಕಿನಲ್ಲಿ ನೀರುಗಂಟಿಗಳ ರಾಜಕೀಯ ಹೆಚ್ಚಾಗಿದ್ದು, ನೀರು ಬೀಡುವುದರಲ್ಲೂ ರಾಜಕೀಯ ತಂತ್ರ ಅನುಸರಿಸುತ್ತಿರುವ ಇಂಥವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾ.ಪಂ ಹಾಗೂ ಪುರಸಭೆ ವ್ಯಾಪ್ತಿಯಲ್ಲಿರುವ ನೀರುಗಂಟಿಗಳು ರಾಜಕೀಯದಲ್ಲಿ ತೊಡಗಿಕೊಂಡಿರುವುದರಿಂದ ಬಹುತೇಕ ಜನತೆ ಕೃತಕವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ನೀರುಗಂಟಿಗಳ ಬಗ್ಗೆ ಇಂತಹ ದೂರುಗಳು ಬಂದರೆ ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ವಜಾ ಮಾಡುವಂತೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವ್ಯಕ್ತಿ ನಾಪತ್ತೆ
ಅರಸೀಕೆರೆ: ತಾಲೂಕಿನ ಜಾವಗಲ್ ಹೋಬಳಿ, ಬಂದೂರು ಗ್ರಾಮದ ವಾಸಿ ವಿ.ಬಿ. ಪ್ರಸನ್ನ ಎಂಬವರ ತಂದೆ ವೀರಭದ್ರಶೆಟ್ಟಿ (60) ಆರೋಗ್ಯ ಸರಿಯಿಲ್ಲದ ಕಾರಣ ಚಿಕ್ಕಮಗಳೂರು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.
5.6 ಅಡಿ ಎತ್ತರ, ಕೋಮುಮುಖ, ಎಣ್ಣೆಗೆಂಪುಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಬಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಪಂಚೆ ಮತ್ತು ನೀಲಿ ಬಣ್ಣದ ಶರ್ಟ್ ಧರಿಸಿದ್ದರು ಎಂದು ಅವರ ಪುತ್ರ ವಿ.ಬಿ. ಪ್ರಸನ್ನ ಜಾವಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

