'ದೇವರ ಮೇಲೆ ನಂಬಿಕೆ ಅಗತ್ಯ'
ಅರಸೀಕೆರೆ: ವೈಜ್ಞಾನಿಕತೆ ಹೆಚ್ಚಾದಂತೆ ದೇವರು ಮತ್ತು ಧರ್ಮದ ಮೇಲೆ ಜನರು ನಂಬಿಕೆ ಕಳೆದುಕೊಳ್ಳದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಬಸವರಾಜಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಚೌಡೇಶ್ವರಿ, ಶ್ರೀ ಸೋಮಬೀರಲಿಂಗೇಶ್ವರ ಸ್ವಾಮಿ, ಶ್ರೀ ನಾಗದೇವತೆ ನೂತನ ದೇವಾಲಯಗಳ ಪ್ರಾರಂಭೋತ್ಸವ, ವಿಗ್ರಹಗಳ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೊತ್ಸವದಲ್ಲಿ ಮಾತನಡಿದ ಅವರು, ಆಧುನಿಕ ಯುಗದಲ್ಲಿ ಜನರು ದೇವರ ಮೇಲೆ ನಂಬಿಕೆ ಕಳೆದುಕೊಳ್ಳುತಿದ್ದಾರೆ ಎಂಬುದು ನಂಬಲಾಗದ ಸಂಗತಿ. ಇಂದಿಗೂ ಜನರು ಮಠ ಮಾನ್ಯಗಳಿಗೆ ದೇವಾಲಯಗಳಿಗೆ ಮೊರೆಹೋಗುತ್ತಿರುವುದು ಕಾಣಬಹುದು ಎಂದರು.
ಸಮಾರಂಭದ ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿದ ಕೆ.ಆರ್. ಪೇಟೆ ಕಾಗಿನೆಲೆ ಕನಕಗುರು ಪೀಠಾಧ್ಯಕ್ಷ ಶಿವಾನಂದಪುರಿ ಸ್ವಾಮೀಜಿ ದೇವಾಲಯಗಳ ನಿರ್ಮಾಣದಿಂದ, ಭಗವಂತನ ಆರಾಧನೆಯಿಂದ ಮನುಷ್ಯರಲ್ಲಿರುವ ದ್ವೇಷ, ಅಸೂಯೆ, ಮಾತ್ಸರ್ಯ, ಅವಿವೇಕತನವನ್ನು ಹೋಗಲಾಡಿಸಿ ಮನಪರಿವರ್ತನೆ ಮಾಡುವ ಧಾರ್ಮಿಕ ಕೇಂದ್ರಗಳಾಗಬೇಕೆಂದು ತಿಳಿಸಿದರು.
ಪಾಶ್ಚಾತ್ಯ ಕುರುಡು ಸಂಸ್ಕೃತಿಯ ಪ್ರಭಾವದಿಂದಾಗಿ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿರುವುದು ವಿಷಾದಕರ. ಜಗತ್ತಿನ ಎಲ್ಲಾ ದೇಶಗಳಿಗೂ ಭಾರತೀಯ ಸಂಸ್ಕೃತಿಯೇ ಆದರ್ಶವಾಗಿದೆ. ರಾಮಾಯಣ ಮಹಾಭಾರತದಲ್ಲಿ ಬರುವ ಉತ್ತಮ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಗುರು ಹಿರಿಯರು ತಂದೆ ತಾಯಿಗಳ ಬಗ್ಗೆ ಸದ್ಭಾವನೆ ಬೆಳೆಸಿಕೊಳ್ಳುವ ಮೂಲಕ ಪಾಶ್ಚಾತ್ಯ ಸಂಸ್ಕತಿಯ ಮೋಹದಿಂದ ಹೊರಬರಬೇಕೆಂದು ಕರೆ ನೀಡಿದರು.
ಮಾಜಿಶಾಸಕ ಜಿ.ಎಸ್. ಪರಮೇಶ್ವರಪ್ಪ, ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಜಿಪಂ ಮಾಜಿ ಉಪಾಧ್ಯಕ್ಷೆ ಪ್ರೇಮಮ್ಮ ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಎಸ್. ಸಿದ್ದರಾಮಶೆಟ್ಟಿ ಜಿಪಂ ಉಪಾದ್ಯಕ್ಷ ಬಂಡೀಗೌಡರ ರಾಜಣ್ಣ ಇತರರು ಮಾತನಾಡಿದರು. ಜಿಪಂ ಸದಸ್ಯ ಹುಚ್ಚೇಗೌಡ, ಪಾರ್ವತಮ್ಮ, ರತ್ನಮ್ಮ, ಡಾ.ಚಂದ್ರಶೇಖರ್, ತಾಪಂ ಸದಸ್ಯ ಬಿ.ಆರ್. ಜಯಣ್ಣ, ಹನುಮೇಗೌಡ, ಲಕ್ಷ್ಮಣ, ಮುರುಂಡಿ ಶಿವಯ್ಯ, ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

