ಹಾಸನ

ಬಾಸ್ಕೆಟ್ ಬಾಲ್ಗೆ ಆಯ್ಕೆ ಪರೀಕ್ಷೆ

Published On :

ಹಾಸನ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಸುತ್ತಿರುವ ಕ್ರೀಡಾ ವಸತಿ ಶಾಲೆಯಲ್ಲಿ ಬಾಸ್ಕೆಟ್ ಬಾಲ್ ಕ್ರೀಡೆಯನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿದ್ದು, ಬಾಸ್ಕೆಟ್ ಬಾಲ್ ಕ್ರೀಡೆಗೆ ಬಾಲಕಿಯರನ್ನು ಆಯ್ಕೆ ಮಾಡಲು ಮೇ 8ರಂದು ಬೆಳಗ್ಗೆ 10 ಕ್ಕೆ  ಜಿಲ್ಲಾ ಕ್ರೀಡಾಂಗಣದಲ್ಲಿ ವಿಶೇಷ ಆಯ್ಕೆ ಪರೀಕ್ಷೆ ಏರ್ಪಡಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ ತಿಳಿಸಿದ್ದಾರೆ.
ಅರ್ಹತೆಗಳು: ಬಾಲಕಿಯರು 2013-14ನೇ ಸಾಲಿನಲ್ಲಿ 4ನೇ ವರ್ಗ ಪಾಸಾಗಿದ್ದು 2014-15ನೇ ಸಾಲಿನಲ್ಲಿ 5ನೇ ವರ್ಗ ಪ್ರವೇಶಾತಿ ಪಡೆಯಲು ಅರ್ಹರಿರಬೇಕು. 11 ವರ್ಷದೊಳಗಿರಬೇಕು. ಈ ಬಗ್ಗೆ ಜನ್ಮ ದಿನಾಂಕ ದೃಢೀಕರಣ ತರತಕ್ಕದ್ದು(1-6-2014ಕ್ಕೆ 11 ವರ್ಷದೊಳಗಿರಬೇಕು). ಕನಿಷ್ಠ 145 ಸೆಂ.ಮೀ.ಎತ್ತರ ಇರಬೇಕು.
ಹಾಸನ ಜಿಲ್ಲೆಯ ಬಾಲಕಿಯರು ಮಾತ್ರ ಆಯ್ಕೆಗೆ ಅರ್ಹರು. ಮಾಹಿತಿಗಾಗಿ ಸುಬ್ರಮಣ್ಯ, ಬಾಸ್ಕೆಟ್ ಬಾಲ್ ತರಬೇತುದಾರ, ಮೊ-9449755949 ಇವರನ್ನು ಸಂಪರ್ಕಿಸಲು ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.