ಹಾಸನ

ಸಾಧಕನಿಗೆ ನಿಬಂಧನೆಗಳೂ ಮುಖ್ಯ: ಪ್ರೊ.ಕೃಷ್ಣೇಗೌಡ

Published On :

ಜಾವಗಲ್: ಯಾವುದೇ ವ್ಯಕ್ತಿ ಸಾಧಕರಾಗಬೇಕಾದಲ್ಲಿ ಆತ್ಮಸ್ಥೈರ್ಯ, ಆತ್ಮವಿಶ್ವಾಸ, ನಿರಂತರ ಪರಿಶ್ರಮದ ಜತೆಗೆ ತಾನೇ ಹಾಕಿಕೊಂಡ ನಿಬಂಧನೆಗಳು ಮುಖ್ಯವಾಗಿವೆ ಎಂದು ಹಾಸನದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಡಿ.ಜಿ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ,  ವಿದ್ಯಾರ್ಥಿಗಳ ಬೆಳವಣಿಗೆಗೆ ಸಾಧನೆ ಮಾಡುವ ಮನಸ್ಸು ಮುಖ್ಯವಾಗಿದ್ದು, ಅಧ್ಯಾಪಕರ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು. ಸಾಧನೆ ಸಾಧಕನ ಸ್ವತ್ತಾಗಿದ್ದು ವ್ಯಾಸಂಗ ಮಾಡುವಾಗ ನಿದ್ದೆ ಸುಖವನ್ನು ನಿಯಂತ್ರಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಕೆ. ಬಾಷಾ  ಮಾತನಾಡಿ, ಸಮಾರೋಪ ಸಮಾರಂಭವು ಕಾಲೇಜಿನ ಸಮಗ್ರ ಮೌಲ್ಯಮಾಪನಮಾಡಲು ಸಹಕಾರಿಯಾಗಿದೆ. ಕಲೆ ಮತ್ತು ಕ್ರೀಡಾ ಚಟುವಟಿಕೆಗಳು ಬಹುಮುಖ ಸಾಮರ್ಥ್ಯ ಬೆಳೆಸಿಕೊಳ್ಳುವ ಕೆಲಸ ಮಾಡುತ್ತವೆ. ನಾಯಕತ್ವ ಗುಣ, ಏಕಾಗ್ರತೆ, ಆತ್ಮ ವಿಶ್ವಾಸ,ಹೆಚ್ಚಿಸುವ ಸಾಮರ್ಥ್ಯ ಉಂಟುಮಾಡುತ್ತದೆ ಎಂದರು.
ಸಾಂಸ್ಕೃತಿಕ ಮತ್ತು ಕ್ರೀಡಾಚಟುವಟಿಕೆಗಳ ವಿಜೇತರಿಗೆ ಗ್ರಾಪಂ ಅಧ್ಯಕ್ಷೆ ಕವಿತ ಮಂಜುನಾಥ ಬಹುಮಾನ ವಿತರಿಸಿದರು. ಗ್ರಾಪಂ ಮಾಜಿ ಸದಸ್ಯ ಜಾ.ತಿ. ಸತ್ಯನಾರಾಯಣ, ಸಹ ಪ್ರಾಧ್ಯಾಪಕರಾದ ಸತೀಶ್, ಶಿವಕುಮಾರ್, ಶಿವಶಂಕರ ಮೂರ್ತಿ, ಶ್ರುತಿ, ವಿನುತ, ರವಿಶಂಕರ್ ಮಾತನಾಡಿದರು. ಉಪನ್ಯಾಸಕ ದಯಾನಂದ್, ಪ್ರದೀಪ್, ದಿಲೀಪ್, ಪ್ರಿಯಾಂಕ, ಸೌಮ್ಯ ಜೆ.ಎಸ್. ಪರ್ವಿನ್, ದೀಪಿತಾ, ಕಮಲಾಕ್ಷಮ್ಮ, ಸೌಮ್ಯ, ರಂಗಸ್ವಾಮಿ, ಲೋಕೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.