ಕುಡಿಯುವ ನೀರಿನ ಬರ
ಬೇಲೂರು: ಯಗಚಿ ಜಲಾಶಯದ ಹಿನ್ನೀರಿನ ಅಸು ಪಾಸಿನ ನಾರಾಯಣಪುರ ಗ್ರಾಮದಲ್ಲಿ ಕುಡಿಯುವ ನೀರು ಇಲ್ಲದೆ ಜನ-ಜಾನುವಾರುಗಳ ಸ್ಥಿತಿ ಹೇಳತೀರದಾಗಿದೆ.
ತಾಲೂಕು ಕೇಂದ್ರದಿಂದ 22 ಕೀಮೀ ದೂರದಲ್ಲಿ ಇರುವ ಯಗಚಿ ಜಲಾಶಯ ಹಿನ್ನೀರಿನ ಅಸುಪಾಸಿನಲ್ಲಿ ಇರುವ ಗ್ರಾಮವೇ ನಾರಾಯಣಪುರ, ಈ ಗ್ರಾಮ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬರುತ್ತದೆ, ಈ ಹಳ್ಳಿಯಲ್ಲಿ ಗ್ರಾಪಂ ಇದೆ.
ತಾಲೂಕಿನ 37 ಗ್ರಾಪಂಗಳ ಪೈಕಿ ಬಹು ದೊಡ್ಡ ಗ್ರಾಪಂ ಎಂದೇ ಕರೆಯುವ ಗ್ರಾಮ ಮೂಲ ಸೌಕರ್ಯಗಳಿಂದ ಹಿಂದುಳಿದಿದ್ದು, ಅಭಿವೃದ್ಧಿ ಮಾರೀಚಿಕೆಯಾಗಿದೆ.
ನಾರಾಯಣಪುರದಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಜನರು ನಿತ್ಯ ಒಂದು ಕೀಮೀ ದೂರದಿಂದ ತರುತ್ತಾರೆ, ಅದರೆ ಈ ನೀರು ಕುಡಿಯಲು ಮತ್ತು ಅಡುಗೆಗೆ ಬಳಕೆ ಮಾಡಲು ಯೋಗ್ಯವಿಲ್ಲ ಎಂದು ಗ್ರಾಪಂ ಸದಸ್ಯ ಪರಮೇಶ್ ಹೇಳುತ್ತಾರೆ.
ಗ್ರಾಮದಲ್ಲಿ ಕಳೆದ ತಿಂಗಳಿಂದ ನೀರಿನ ಸಮಸ್ಯೆಗೆ ವಿದ್ಯುತ್ ಇಲಾಖೆ ನೇರ ಕಾರಣ, ಅಧಿಕಾರಿಗಳನ್ನು ಕೇಳಿದರೆ ಇಲ್ಲದ ಸಬೂಬು ಹೇಳುತ್ತಾರೆ, ಗ್ರಾಮದಲ್ಲಿ ರಾಜಕಾರಣಿಗಳ ಒತ್ತಡ ಇದ್ದು ಗ್ರಾಪಂ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ನಾರಾಯಣಪುರ ಗ್ರಾಮಕ್ಕೆ ಕಳೆದ ವರ್ಷ ಸುವರ್ಣ ಗ್ರಾಮ ಯೋಜನೆ ಮೂಲಕ 33 ಲಕ್ಷ ಮಂಜೂರು ಮಾಡಿದ್ದು, ಗುತ್ತಿಗೆದಾರ ನೆಪ ಮಾತ್ರಕ್ಕೆ ಮೂರು ರಸ್ತೆ ಸಿಮೆಂಟಿನಿಂದ ಮಾಡಿ ಚರಂಡಿ, ಸಮುದಾಯಭವನ, ಅಂಗನವಾಡಿ ಇನ್ನು ಆನೇಕ ಸೌಲಭ್ಯ ನೀಡದೆ ಬಿಲ್ಲು ಮಾಡಿಕೊಂಡಿದ್ದಾರೆ.
ಸಿಮೆಂಟ್ ರಸ್ತೆ ಒಂದೇ ವರ್ಷಕ್ಕೆ ಅಸಲಿ ಬಣ್ಣ ತೋರಿಸಿದೆ ಎಂದ ಅವರು ಸುವರ್ಣ ಗ್ರಾಮ ಯೋಜನೆ ನಾರಾಯಣಪುರ ಗ್ರಾಮಕ್ಕೆ ಸಂಪರ್ಕವಾಗಿಲ್ಲ, ಈ ದಿಸೆಯಲ್ಲಿ ಕಾಮಾಗಾರಿ ಕೆಲಸ ಕಳಪೆಯಿಂದ ಕೂಡಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಗ್ರಾಪಂನಿಂದ ಮೂಲ ಸೌಲಭ್ಯಗಳಾದ ಶೌಚಾಲಯ ಗ್ರಾಮಕ್ಕೆ ನೀಡಿಲ್ಲ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಿಬೇಕು ಇಲ್ಲವಾದರೆ ತಾಪಂ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತದೆ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

