ತಂಬಾಕು ವೈಜ್ಞಾನಿಕ ಕೃಷಿ ಪದ್ಧತಿಗೆ ಸಲಹೆ
ರಾಮನಾಥಪುರ: ರಾಜ್ಯದ ಮಾದರಿಯಲ್ಲೇ ತಂಬಾಕು ಬೆಳೆಯುವ ರಾಷ್ಟ್ರವಾದ ಆಫ್ರಿಕಾ ಖಂಡದ ತಾಂಜೇನಿಯಾದಲ್ಲಿ ಈ ಬಾರಿ ಅಧಿಕ ಬೆಳೆ ಉತ್ಪಾದನೆಯಾಗಿದೆ. ಇದುಕರ್ನಾಟಕದ ಮಾರುಕಟ್ಟೆಯ ಮೇಲೆ ಹೆಚ್ಚಿನ ಪ್ರಭಾವ ಬೀರಲಿರುವುದರಿಂದ ರಾಜ್ಯದ ತಂಬಾಕು ಬೆಳೆಗಾರರು ಸುಧಾರಿತ ವೈಜ್ಞಾನಿಕ ಕೃಷಿ ಪದ್ಧತಿಯ ಅಳವಡಿಕೆ ಮೂಲಕ ಉತ್ತಮ ದರ್ಜೆಯ ತಂಬಾಕನ್ನು ಬೆಳೆಯಬೇಕಾಗಿದೆ. ಅದಕ್ಕಾಗಿ ಕೆಲ ಶಿಫಾರಸ್ಸುಗಳನ್ನು ಅನುಸರಿಸಬೇಕಾಗಿದೆ ಎಂದು ರಾಮನಾಥಪುರ ಮತ್ತು ಪಿರಿಯಾ ಪಟ್ಟಣ ತಂಬಾಕು ಮಂಡಳಿ ವಲಯ ವ್ಯವಸ್ಥಾಪಕ ಶಿವರುದ್ರಯ್ಯ ಆರ್.ಎಂ. ತಿಳಿಸಿದ್ದಾರೆ. ರಾಮನಾಥಪುರದಲ್ಲಿ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಂಪನಿಯವರು ತಂಬಾಕು ರೈತರಿಗೆ ಮಾಹಿತಿ ನೀಡುವುದು, ಅವರಿಂದ ಪ್ರಾಯೋಜಿತ ಬೆಳೆ ಸೇರಿದಂತೆ ಹಳ್ಳಿಗಳಲ್ಲಿ ಪ್ರಚಾರವನ್ನು ನಿರ್ಬಂಧಿಸಲಾಗಿದೆ. ಪ್ರಚಾರ ಕೈಗೊಳ್ಳ ಬೇಕಾದರೆ ಮಂಡಳಿ ಗಮನಕ್ಕೆ ಕಡ್ಡಾಯವಾಗಿ ತರಬೇಕು ಎಂದು ಸೂಚಿಸಿದರು.
ನಾಟಿ ಮಾಡಿದ ಸಸಿಗಳನ್ನು ಬಿಸಿಲಿನಿಂದ ಹಾಗೂ ಮಳೆಯಿಂದ ರಕ್ಷಿಸಲು ಕಾಗದದ ಹಾಳೆ ಅಥವಾ ಒಣಹುಲ್ಲು ಮುಂತಾ ದವು ಗಳಿಂದ ಮರೆ ಮಾಡಿ 4-5 ದಿವಸಗಳ ನಂತರ ತೆಗೆದುಹಾಕಬೇಕು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

