ಪಡಿತರ ವಿತರಣೆ
ಹಾಸನ: ಚನ್ನರಾಯಪಟ್ಟಣ ತಾಲೂಕಿನ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದ ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಮೇ 2014ರ ತಿಂಗಳ ಈ ಕೆಳಕಂಡಂತೆ ಆಹಾರ ಪಡಿತರ ಮತ್ತು ಸೀಮೆಎಣ್ಣೆ ಹಂಚಿಕೆ ಮಾಡಲಾಗುತ್ತದೆ.
ಒಂದು ಯುನಿಟಟ್ದಾರರಿಗೆ 9 ಕೆ.ಜಿ ಅಕ್ಕಿ, 1 ಕೆ.ಜಿ ರಾಗಿ, ಎರಡು ಯುನಿಟ್ದಾರರಿಗೆ 19 ಕೆ.ಜಿ ಅಕ್ಕಿ, 1 ಕೆ.ಜಿ ರಾಗಿ, ಮೂರು, ನಾಲ್ಕು, ಐದು ಮತ್ತು ಹೆಚ್ಚಿನ ಯುನಿಟ್ದಾರರಿಗೆ 28 ಕೆ.ಜಿ ಅಕ್ಕಿ, 2 ಕೆ.ಜಿ ರಾಗಿ, ಅಂತ್ಯೋದಯ ಪಡಿತರ ಚೀಟಿದಾರರಿಗೆ 29 ಕೆ.ಜಿ ಅಕ್ಕಿ, 06 ಕೆ.ಜಿ ಗೋಧಿ ನೀಡಲಾಗುತ್ತದೆ. ಗ್ರಾಮಾಂತರ ಪಟ್ಟಣ ಎಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಹಂಚಿಕೆ ಇರುವುದಿಲ್ಲ. ಮೇ 2014ರ ಮಾಹೆಗೆ ಸಕ್ಕರೆ ದಾಸ್ತಾನು ಬಂದಿರುವುದಿಲ್ಲ. ಆದ್ದರಿಂದ ಹಂಚಿಕೆ ಇರುವುದಿಲ್ಲ.
ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಅನಿಲ ರಹಿತ (ಎಎವೈಬಿಪಿಎಲ್ ಗ್ಯಾಸ್ ಹೊಂದಿಲ್ಲದ) ಪಡಿತರ ಚೀಟಿದಾರರಿಗೆ 01 ಮತ್ತು 02 ಯುನಿಟ್ದಾರರಿಗೆ 03 ಲೀಟರ್ ಸೀಮೆಎಣ್ಣೆಯಂತೆ ಹಾಗೂ 3,4,5 ಮತ್ತು ಹೆಚ್ಚಿನ ಯುನಿಟ್ದಾರರಿಗೆ 05 ಲೀಟರ್ ಸೀಮೆಎಣ್ಣೆಯಂತೆ, ಗ್ಯಾಸ್ ಹೊಂದಿರುವ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಹಂಚಿಕೆ ಇರುವುದಿಲ್ಲ.
ಪಡಿತರ ಚೀಟಿದಾರರು ಆಹಾರ ಪಡಿತರ ಮತ್ತು ಸೀಮೆಎಣ್ಣೆಯನ್ನು ಪ್ರಮಾಣ ಮತ್ತು ದರದಲ್ಲಿ ಪಡೆದುಕೊಳ್ಳತಕ್ಕದ್ದು. ಯಾವುದೇ ಕಾರಣಕ್ಕೂ ಹೆಚ್ಚಿಗೆ ಹಣ ನೀಡಬಾರದು ಹೆಚ್ಚಿಗೆ ಹಣ ನ್ಯಾಯ ಬೆಲೆ ಅಂಗಡಿ ಮಾಲೀಕರು, ಸಹಕಾರಿ ಸಂಘದ ವ್ಯಕ್ತಿಗಳು ಕೇಳಿದಲ್ಲಿ, ಆಹಾರ ಶಿರಸ್ತೇದಾರ್ ಹಾಗೂ ಆಹಾರ ನಿರೀಕ್ಷಕರ ಮೊಬೈಲ್ ಸಂಖ್ಯೆ 9591575783,9448526736ಗೆ ಅಥವಾ ಖುದ್ದು ದೂರು ಸಲ್ಲಿಸಬಹುದು ಎಂದು ಚನ್ನರಾಯಪಟ್ಟಣ ತಾಲ್ಲೂಕು ತಹಸೀಲ್ದಾರ್ ತಿಳಿಸಿದ್ದಾರೆ.
ಅವಧಿ ವಿಸ್ತರಣೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು-06, ರ ವತಿಯಿಂದ 2012-13ನೇ ಶೈಕ್ಷಣಿಕ ಸಾಲಿನ ಬಿ.ಎ, ಬಿ.ಕಾಂ ಹಾಗೂ ಎಂ.ಎ, ಎಂ.ಕಾಂ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಮುಕ್ತ ಸಂಜೀವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಏ. 30ರಂದು ಕೊನೆಯ ದಿನಾಂಕವಾಗಿತ್ತು. ಇದೀಗ, ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ಸದರಿ ದಿನಾಂಕವನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ.
ವಾರ್ಷಿಕ ಪರೀಕ್ಷೆಯಲ್ಲಿ ಶೇ. 50 ಅಥವಾ ಅದಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದು, ಜು. 1ಕ್ಕೆ ಅನ್ವಯಿಸುವಂತೆ 30 ವರ್ಷ ವಯೋವುತಿ ಮೀರದವರು, ಎಲ್ಲಾ ವಾರ್ಷಿಕ ಪರೀಕ್ಷೆಗಳಲ್ಲಿ ಮೊದಲನೇ ಪ್ರಯತ್ನದಲ್ಲಿ ಶೇ. 50 ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ತಂದೆ, ತಾಯಿ, ಪೋಷಕ, ಗಂಡನ ಒಟ್ಟು ಕುಟುಂಬದ ವಾರ್ಷಿಕ ವರಮಾನ ( 1,00,000/-) ಒಂದು ಲಕ್ಷಕ್ಕಿಂತ ಹೆಚ್ಚಿಗೆ ಇರದ, ಬೇರೆ ಕಡೆ ಎಲ್ಲೂ ವಿದ್ಯಾರ್ಥಿ ವೇತನಕ್ಕೆ ಶುಲ್ಕ ಮರು ಪಾವತಿಗೆ (ಸಮಾಜ ಕಲ್ಯಾಣ ಇಲಾಖೆ) ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ಮುಕ್ತ ಸಂಜೀವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ತಮ್ಮ ಅಂಕಪಟ್ಟಿ, ಅಂಗವಿಕಲ, ಆದಾಯ ಪ್ರಮಾಣ ಪತ್ರಗಳನ್ನು ದೃಢೀಕರಿಸಿ ತಪ್ಪದೇ ಲಗತ್ತಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂಸಂಖ್ಯೆಗೆ 08172-269244 ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

