ವಿದ್ಯಾರ್ಥಿನಿಯರೇ ಮೇಲುಗೈ
ಕನ್ನಡಪ್ರಭ ವಾರ್ತೆ, ಅರಸೀಕೆರೆ, ಮೇ 9
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪಟ್ಟಣದ ಕೋಡಿಮಠ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ವಿಜ್ಞಾನ ವಿಭಾಗದಲ್ಲಿ 585 ಅಂಕ ಗಳಿಸಿ ಶೇ. 97.50 ಫಲಿತಾಂಶ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಶುಕ್ರವಾರ ಪ್ರಕಟಗೊಂಡ ದ್ವಿತೀಯ ಪಿ.ಯು.ಸಿ.ಪರೀಕ್ಷೆ ಫಲಿತಾಂಶದಲ್ಲಿ ಕೋಡಿಮಠ ಕಾಲೇಜಿಗೆ ಶೇ.74 ಫಲಿತಾಂಶ ಲಭ್ಯವಾಗಿದೆ. ಕಲಾವಿಭಾಗದಲ್ಲಿ 120 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 88 ಮಂದಿ ತೇರ್ಗಡೆಗೊಂಡಿದ್ದರೆ, ವಿಜ್ಞಾನ ವಿಭಾಗದಲ್ಲಿ 202 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು 132 ಮಂದಿ ಉತ್ತೀರ್ಣರಾಗಿದ್ದಾರೆ ಹಾಗೆಯೇ ವಾಣಿಜ್ಯ ವಿಭಾಗದಲ್ಲಿ 75 ಮಂದಿ ಪರೀಕ್ಷೆಗೆ ಕುಳಿತಿದ್ದು 71 ಮಂದಿ ಪಾಸಾಗಿದ್ದಾರೆ.
ಒಟ್ಟು ಕಲಾ ವಿಭಾಗದಲ್ಲಿ ಶೇ. 73.34ರಷ್ಟು ಫಲಿತಾಂಶ ಲಭ್ಯವಾಗಿದ್ದು, ಆ ಪೈಕಿ, 43 ಪ್ರಥಮ 28 ಮಂದಿ ದ್ವಿತೀಯ ಸ್ಥಾನಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ 65.35 ಫಲಿತಾಂಶ ಬಂದಿದ್ದು 29 ಮಂದಿ ಉನ್ನತ ಶ್ರೇಣಿಯಲ್ಲಿ 87 ಮಂದಿ ಪ್ರಥಮ ಸ್ಥಾನದಲ್ಲಿ, 16 ಮಂದಿ ದ್ವಿತೀಯ ಸ್ಥಾನದಲ್ಲಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 85.16ರಷ್ಟು 7 ಮಂದಿ ಉನ್ನತ ಶ್ರೇಣಿ 48 ಮಂದಿ ಪ್ರಥಮ 10 ಮಂದಿ ದ್ವಿತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.
36 ಮಂದಿ ಡಿಸ್ಟಿಂಕ್ಷನ್: ವಿಜ್ಞಾನ ವಿಭಾಗದಲ್ಲಿ ಐಶ್ವರ್ಯ 585 ಅಂಕ, ದರ್ಶನ್ ಎಚ್.ಕೆ. 580 ಅಂಕ, ಕಾವ್ಯ ಕೆ 567, ದಿವ್ಯಶ್ರೀ ಆರ್ 560, ಮೋನಿಕಾ ಜಿ.ಎಂ 560, ಪಯೋನಿಧಿ ಕೆ.ವಿ. 559. ಪೂಜಾ ಎ.ಎಸ್. 556, ಅರ್ಚನಾ 552, ಲತಾಶ್ರೀ 549 ಅಂಕ ಹಾಗೂ ವಾಣಿಜ್ಯ ವಿಭಾಗದಲ್ಲಿ ಮನುನಾಯಕ್ 537 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದಾರೆ. ಕಾಲೇಜಿನಲ್ಲಿ 36 ವಿದ್ಯಾರ್ಥಿಗಳು ಅತ್ಯುನ್ನತ (ಡಿಸ್ಟಿಂಕ್ಷನ್) ಪಡೆದಿದ್ದಾರೆ.
ಪ್ರತಿಭಾ ಕಾಲೇಜಿನಲ್ಲಿ ಒಟ್ಟು 268 ಮಂದಿ ಪರೀಕ್ಷೆ ತೆಗೆದುಕೊಂಡಿದ್ದ ಆ ಪೈಕಿ 152 ಮಂದಿ ತೇರ್ಗಡೆ ಹೊಂದಿದ್ದು ಶೇ. 57ರಷ್ಟು ಫಲಿತಾಂಶ ಲಭ್ಯವಾಗಿದೆ. ಕಲಾ ವಿಭಾಗದಲ್ಲಿ 158 ಮಂದಿ ಪರೀಕ್ಷೆ ಬರೆದಿದ್ದು ಆ ಪೈಕಿ 94 ಮಂದಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 51 ಮಂದಿ ಪರೀಕ್ಷೆಗೆ ಕುಳಿತಿದ್ದು 21 ಮಂದಿ ಉತ್ತೀರ್ಣರಾಗಿದ್ದು ಶೇ. 41 ಹಾಗೂ ವಾಣಿಜ್ಯ ವಿಭಾಗದಲ್ಲಿ 59 ಮಂದಿ ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 37 ಮಂದಿ ಪಾಸಾಗಿದ್ದು ಶೇ. 52.71ರಷ್ಟು ಫಲಿತಾಂಶ ಲಭ್ಯವಾಗಿದೆ.
ಚಂದನ 570, ಯಾಸೀನ್ ಬಾನು 565, ಅಂಜನಾ 560, ಸಂದೀಪ್ 549, ಭವ್ಯ 529, ಮಿಥುನ್ 527, ಹರ್ಷ 519, ಮನೋಜ್ ನಾಯಕ್ 519 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ 189 ಮಂದಿ ಪರೀಕ್ಷೆಗೆ ಕುಳಿತಿದ್ದು ಆ ಪೈಕಿ 132 ಮಂದಿ ತೇರ್ಗಡೆಯಾಗಿದ್ದು ಶೇ. 69.84 ಫಲಿತಾಂಶ ಲಭ್ಯವಾಗಿದೆ. ಕಲಾ ವಿಭಾಗದಲ್ಲಿ 100 ಮಂದಿ ಪರೀಕ್ಷೆಗೆ ಕುಲಿತಿದ್ದು 64 ಮಂದಿ ಉತ್ತೀರ್ಣರಾಗಿ ಶೇ. 64, ವಾಣಿಜ್ಯ ವಿಭಾಗದಲ್ಲಿ 73 ಮಂದಿ ಪರೀಕ್ಷೆಗೆ ಕುಳಿತಿದ್ದು 60 ಮಂದಿ ಪಾಸಾಗಿದ್ದು ಶೇ. 82ರಷ್ಟು, ವಿಜ್ಞಾನ ವಿಭಾಗದಲ್ಲಿ 16 ಮಂದಿ ಪರೀಕ್ಷೆ ಬರೆದಿದ್ದು ಆ ಪೈಕಿ 8 ಮಂದಿ ಪಾಸಾಗಿದ್ದು ಶೇ. 50ರಷ್ಟು ಫಲಿತಾಂಶ ಲಭ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

