ಕಾರಿನಲ್ಲಿದ್ದ ಚಿನ್ನಾಭರಣ ಕಳವು
ಆಲೂರು: ಪಟ್ಟಣದ ದೊಡ್ಡಿ ಬೀದಿಯಲ್ಲಿ ಶನಿವಾರ ರಾತ್ರಿ ಕಾರಿನ ಹಿಂಭಾಗದ ಗ್ಲಾಸ್ ಅನ್ನು ಹೊಡೆದು ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.
ವಾಟೇಹೊಳೆ ಗ್ರಾಮದ ಶ್ರೀನಿವಾಸ್ ಎಂಬವರು ತಮ್ಮ ಆಲ್ಟೋ ಕಾರಿನಲ್ಲಿ ಆಲೂರಿನ ದೊಡ್‌ಡಿ ಬೀದಿಯ ನಾಗಭೂಷಣ ಕಾಂಪ್ಲೆಕ್ಸ್‌ನಲ್ಲಿ ಇರುವ ನಾರಾಯಣ ಎಂಬ ಸಂಬಂಧಿಯ ಮನೆಗೆ ರಾತ್ರಿ 1 ಗಂಟೆಗೆ ಬಂದು ಆಭರಣವಿದ್ದ ವ್ಯಾನಿಟಿ ಬ್ಯಾಗನ್ನು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟು ಮನೆಯ ಮುಂಭಾಗ ಕಾರು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಕಾರಿನ ಹಿಂಭಾಗದ ಗ್ಲಾಸ್ ಹೊಡೆದು 16 ಗ್ರಾಂ ಚಿನ್ನ ದೋಚಲಾಗಿದೆ.
ಕಳೆದ 1 ತಿಂಗಳ ಅಂತರದಲ್ಲಿ ಮನೆಯ ಮನೆಯ ಮುಂಭಾಗ ನಿಲ್ಲಿಸಿದ್ದ 3 ಕಾರುಗಳ ಗ್ಲಾಸ್ ತೆಗೆದು ಕಳವು ಮಾಡಿದ್ದು, ಈವರೆಗೂ ಯಾವುದೇ ಕಳ್ಳನ ಬಂಧನವಾಗಿಲ್ಲ. ಇದರಿಂದ ಮನೆಯ ಮುಂಭಾಗ ವಾಹನ ನಿಲ್ಲಿಸುವವರು ಗಾಬರಿಗೊಂಡಿದ್ದು, ಶೀಘ್ರ ಪೊಲೀಸರು ರಾತ್ರಿ ಗಸ್ತನ್ನು ಹೆಚ್ಚಿಸಬೇಕು. ಕಳ್ಳರನ್ನು ಶೀಘ್ರ ಬಂಧಿಸಿ, ಸಾರ್ವಜನಿಕರಿಗೆ ಭದ್ರತೆ ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

