ಹಾಸನ

ಬಡವರ ಬಗ್ಗೆ ಕಾಳಜಿ ಇದ್ದರೆ ಖಾತ್ರಿ

Published On :

ಉದ್ಯೋಗ ಖಾತ್ರಿ ಕಾರ್ಯಾಗಾರದಲ್ಲಿ ಫಾದರ್ ಫೆಲಿಕ್ಸ್ ಅಭಿಮತ


ಕನ್ನಡಪ್ರಭ ವಾರ್ತೆ    ಹಾಸನ    ಮೇ 12
ರಾಜಕಾರಣಿಗಳಿಗೆ, ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಸಹಕಾರ ನೀಡಿದರೆ ಅವರಿಗೆ ಬಡವರ ಬಗ್ಗೆ ಕನಿಕರ ಎಂಬುದು ಸಾಬೀತಾಗುತ್ತದೆ ಎಂದು ಸಿಎಂಎಸ್ಎಸ್ಎಸ್ ಸಂಸ್ಥೆಯ ನಿರ್ದೇಶಕ ಫಾದರ್ ಫೆಲಿಕ್ಸ್ ಥಾಮಸ್ ರೂಜಾರಿಯೊ ಅಭಿಪ್ರಾಯಪಟ್ಟರು.
ಹಾಸನ ನಗರದ ಬಿ. ಕಾಟೀಹಳ್ಳಿಯಲ್ಲಿ ಇರುವ ಸೇವಾ ಸಂಸ್ಥೆಯ ಸಭಾಂಗಣದಲ್ಲಿ ಚಿಕ್ಕಮಗಳೂರು ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ (ಸಿಎಂಎಸ್ಎಸ್ಎಸ್) ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಮಾಜ ಕಾರ್ಯಕರ್ತರಿಗೆ ಏರ್ಪಡಿಸಿದ ಪಂಚಾಯತ್ ರಾಜ್ ಮತ್ತು ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ವಿಷಾದ: ಗ್ರಾಮೀಣ ಜನರ ಸರ್ವತೋಮುಖ ಅಭಿವೃದ್ಧಿ ಮಾಡುವಲ್ಲಿ ಭಾರತ ಸರ್ಕಾರ ಮಾಡಿದ ನರೇಗ ಯೋಜನೆ, ಪ್ರಪಂಚದಲ್ಲಿಯೇ ಇರುವ ಅಪರೂಪದ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಆದರೆ, ಇಂದು ವಾಸ್ತವದಲ್ಲಿ ಜನಸಾಮಾನ್ಯರಿಗೆ ಸರಿಯಾದ ಮಾಹಿತಿ ಇಲ್ಲದೇ ಅಥವಾ ಕೊಡದೆ ಮತ್ತು ಕೆಲವು ಪಟ್ಟಬದ್ರ ಹಿತಾಸಕ್ತಿಗಳ ಸ್ವಾರ್ಥದಿಂದ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗದೇ, ಕೆಲವು ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಯೋಜನೆಯು ಚಿನ್ನದ ಮೊಟ್ಟೆ ಇಡುವಂತಹ ಕೋಳಿಯಂತಾಗಿರುವುದು ನಮ್ಮ ದುರಾದೃಷ್ಟ ಎಂದು ವಿಷಾದ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಸಾಮಾಜಿಕ ಕಾಳಜಿಯುಳ್ಳ ಪ್ರತಿಯೊಬ್ಬರೂ ಯೋಜನೆಯ ಬಗ್ಗೆ ಸಂಪೂರ್ಣ ಅರಿವನ್ನು ಪಡೆದು ಗ್ರಾಮೀಣ ಬಾಗದ ಜನಸಾಮಾನ್ಯರಿಗೆ ಮಾಹಿತಿಯನ್ನು ನೀಡಿ ಅವರ ಅಭಿವೃದ್ಧಿ ಮಾಡುವ ಜೊತೆಗೆ ದೇಶದ ಸರ್ವಾಂಗೀಣ ಸಮೃದ್ಧಿ ಸಾಧಿಸಲು ಕಾರಣಕರ್ತರಾಗಬೇಕು ಎಂದು ತಿಳಿಸಿದರು.
ಮೈಸೂರಿನ ಅಬ್ದುಲ್ ನಜೀರ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತರಬೇತಿದಾರ ದೇವೇಗೌಡ ಮಾತನಾಡಿ, ಪ್ರಸ್ತುತ ಕೂಲಿ ರು. 174 ಇದ್ದು ವರ್ಷದಲ್ಲಿ ಕನಿಷ್ಟ 100 ದಿನದ ಕಡ್ಡಾಯ ಉದ್ಯೋಗವನ್ನು ಗ್ರಾಮ ಪಂಚಾಯ್ತಿಯ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನೀಡಬೇಕಾಗಿದೆ. ಅದೂ ಕೆಲವು ಬರಗಾಲ ಪ್ರದೇಶದಲ್ಲಿ 125 ದಿನಕ್ಕೆ ವಿಸ್ತರಿಸಲಾಗಿದೆ ಎಂಬ ಮಾಹಿತಿ ಒದಗಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.