ಹಾಸನ

'ಯಶಸ್ಸಿಗೆ ದೇವರ ಅನುಗ್ರಹ ಬೇಕು'

Published On :

ಆಲೂರು: ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಮಾನವ ಪ್ರಯತ್ನ ದೊಂದಿಗೆ ಭಗವಂತನ ಅನುಗ್ರಹ ಇರಬೇಕು ಎಂದು ಚಿಕ್ಕಮಗಳೂರು ಜಿಲ್ಲೆ ಹರಿಹರಪುರ ಆದಿ ಶಂಕರಾಚಾರ್ಯ ಶಾರದ ಲಕ್ಷ್ಮೀ ನರಸಿಂಹ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಪ್ರಕಾಶ ಸಚ್ಚಿದಾನಂದ ಮಹಾಸ್ವಾಮಿ ತಿಳಿಸಿದರು.
ಪಟ್ಟಣದ ಐತಿಹಾಸಿಕ ಶ್ರೀ ವಿಜಯದುರ್ಗ ಕ್ಷೇತ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮೂರನೇ ವಾರ್ಷಿಕ ಮಹೋತ್ಸವ ಸಂದರ್ಭದಲ್ಲಿ ಕ್ಷೇತ್ರಪಾಲರನ್ನು ಪ್ರತಿಷ್ಠಾಪಿಸಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬ ಮಾನವರಲ್ಲೂ ದೈವತ್ವ ಇದೆ. ಮಾನವತೆ ಸಂಪಾದನೆ ಮಾಡಿಕೊಂಡು ದುರ್ಗುಣಗಳಿಂದ ದೂರವಿರಬೇಕು. ಒಳ್ಳೆಯತನದ ಮೂರ್ತ ಸ್ವರೂಪವೇ ದೈವತ್ವ. ಶುದ್ಧ ಮನಸ್ಸಿದ್ದರೆ ದೈವತ್ವ ಪ್ರಾಪ್ತವಾಗುತ್ತದೆ. ಶುದ್ಧ ಮನಸ್ಸಿನಲ್ಲಿದ್ದರೆ ಕೆಟ್ಟ ಆಲೋಚನೆಗಳಾಗಲಿ, ಚಿಂತನೆಗಳಾಗಲಿ ಬರುವುದಿಲ್ಲ. ದೈವತ್ವ ಮರೆಯಾದರೆ ಮಾನವ ಕ್ರೂರಿಯಾಗುತ್ತಾನೆ. ದುರ್ಮಾರ್ಗದ ಸಂಪಾದನೆ ಬಯಸುತ್ತಾನೆ. ಮನಸ್ಸು ಕೆಟ್ಟರೆ ದೇಹದ ಆರೋಗ್ಯವೂ ಕೆಡುವುದರೊಂದಿಗೆ ಮಾನವ ವಿಕೃತನಾಗುತ್ತಾನೆ. ವಾಮ ಮಾರ್ಗ ಹೊರತುಪಡಿಸಿ ಕಷ್ಟಪಟ್ಟು ಸಂಪಾದಿಸಿ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದರು.
ಶ್ರೀಗಳು ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ನಾದಸ್ವರದೊಂದಿಗೆ ವೇದಘೋಷ ಮೊಳಗಿಸಲಾಯಿತು. ಚಂಡಿ ಹೋಮ, ಪೂರ್ಣಾಹುತಿ ಸಮರ್ಪಿಸಲಾಯಿತು.
ಹಳೇಬೀಡು ಪುಷ್ಪಗಿರಿ ಮಠಾಧೀಶರಾದ ಶ್ರೀ ಸೋಮಶೇಖರ ಸ್ವಾಮೀಜಿ ಭಾಗವಹಿ ಸಿದ್ದರು. ಕ್ಷೇತ್ರದ ವ್ಯವಸ್ಥಾಪಕ ನಿರ್ದೇಶಕ ಶ್ರೀಧರರಾಜ್ ಅರಸು, ವರ್ಷರಾಜ್ ಅರಸು, ಜಿಲ್ಲಾ ಸ್ಥಳೀಯ ಲೆಕ್ಕ ತನಿಖಾ ವೃತ್ತ ಸಹಾಯಕ ನಿಯಂತ್ರಕ ಮಾದೇಗೌಡ, ಲೆಕ್ಕ ಪರಿಶೋಧನಾ ಧಿಕಾರಿ ಕೆ.ಪಿ. ಶಂಕರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವಿ. ವಾಸು ದೇವ್, ಇಂಜಿನಿಯರ್ ಶ್ಯಾಮ್, ಕೃಷ್ಣಮೂರ್ತಿ, ವೆಂಕಟೇಗೌಡ ಇದ್ದರು. ಸಾವಿರಾರು ಭಕ್ತರು ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.