ಹಾಸನ

ಸಂಪನ್ಮೂಲ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಳ

Published On :

ಆಲೂರು: ಸಾವಯವ ಕೃಷಿಯು ಒಂದು ಸಮಗ್ರ ಕೃಷಿ. ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಬರುವುದು ಅತ್ಯವಶ್ಯಕ ಎಂದು ಆರೋಗ್ಯ ಮಣ್ಣು ಕೇಂದ್ರದ ವಿಜ್ಞಾನಿ, ಸಹಾಯಕ ನಿರ್ದೇಶಕ ಟಿ.ಅಣ್ಣಯ್ಯ ಕಿವಿಮಾತು ಹೇಳಿದರು. ತಾಲೂಕಿನ ಸಮದಾಲೆ ಗ್ರಾಮದಲ್ಲಿ ಕೃಷಿ ಇಲಾಖೆ ರೈತರಿಗಾಗಿಏರ್ಪಡಿಸಿದ್ದ ಮಣ್ಣು ಪರೀಕ್ಷೆ ಮಾದರಿ ತೆಗೆಯುವ ವಿಧಾನ ಮತ್ತು ಪ್ರಯೋಜನಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರದ ಬಳಕೆಯನ್ನು ಅಳವಡಿಸಿಕೊಂಡಲಲ್ಲಿ ಕೀಟಗಳಿಗೆ ತಗಲುವ ಕೀಟಗಳ ಹಾವಳಿಯನ್ನು ನಿಯಂತ್ರಿಸಬಹುದು ಎಂದು  ಹೇಳಿದರು. ತಾಲೂಕು ಕೃಷಿ ಅಧಿಕಾರಿ ಕೆ.ಬಿ.ಸುಬ್ರಹ್ಮಣ್ಯ ಮಾತನಾಡಿ, ರಾಜ್ಯ ಅತ್ಯುತ್ತಮ ಹವಾಮಾನ ಮಾಹಿತಿ ವ್ಯವಸ್ಥೆ ಹೊಂದಿದ್ದು, ಮತ್ತಷ್ಟು ಸುಧಾರಣೆಯಾಗಬೇಕಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.