ಕ್ಷಣಾರ್ಧದಲ್ಲಿ ತಪ್ಪಿದ ಅನಾಹುತ
ಹಾಸನ: ಕುಡುಕ ಚಾಲಕನ ಅವಾಂತರಕ್ಕೆ ಫುಟ್ಪಾತ್ ಬಳಿ ನಿಂತಿದ್ದವರಿಗೆ ಆಗುತ್ತಿದ್ದ ಅನಾಹುತ ಕ್ಷಣಾರ್ಧದಲ್ಲಿ ತಪ್ಪಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ತಾಲೂಕಿನ ಕಟ್ಟಾಯ ನಿವಾಸಿ ಕೃಷ್ಣೇಗೌಡ ಎಂಬುವನೆ ತನ್ನ ಕರ್ತವ್ಯದ ವೇಳೆ ಕುಡುದು ಟೆಂಪೂ ಚಾಲನೆ ಮಾಡುತ್ತಿದ್ದ ವ್ಯಕ್ತಿ. ನಗರದ ಸಂತೇಪೇಟೆ ವೃತ್ತದಲ್ಲಿ ಬೈಕ್ ಸ್ಸವಾರರು ಫುಟ್ಪಾತ್ ಬಳಿ ನಿಂತು ಅಂಗಡಿಯಲ್ಲಿ ದಿನಸಿ ಕೊಳ್ಳಲು ಒಬ್ಬರು ಹೋಗಿ ಮತ್ತೊಬ್ಬರೂ ವಾಹನದಲ್ಲೆ ಕುಳಿತಿರುವಾಗ ಇದ್ದಕ್ಕಿದ್ದಂತೆ ಹಿಂದಿನಿಂದ ಬಂದ ಟೆಂಪೊವೊಂದು ಚಾಲಕನ ಅಜಾಗರೂಕತೆ ಹಾಗೂ ಕಂಠಪೂರ್ತಿ ಕುಡಿದು ಅತಿ ವೇಗದಲ್ಲಿ ಬಂದು ಬೈಕ್ಗೆ ಚಕ್ರ ಹತ್ತಿಸಲು ಮುಂದಾಯಿತು. ಸ್ಥಳದಲ್ಲಿದ್ದ ಸಾರ್ವಜನಿಕರು ಕೂಗಿ ಆತನಿಗೆ ಎಚ್ಚರಿಸಿದರು. ಅಷ್ಟರೊಳಗೆ ಆತ ಬೈಕ್ ಮೇಲೆ ಹತ್ತಿಸಲು ಮುಂದಾದಾಗ ಬೈಕ್ ಸವಾರ ರಸ್ತೆ ಬದಿಗೆ ನೆಗೆದು ತನ್ನ ಜೀವ ಉಳಿಸಿಕೊಂಡರು.
ನಂತರ ಟೆಂಪೂ ಚಾಲಕನನ್ನು ಸಾರ್ವಜನಿಕರು ಎಳೆದೊಯ್ದು ಧರ್ಮದ ಏಟು ನೀಡಿದರು. ಬಳಿಯಲ್ಲಿಯೇ ಇದ್ದ ಪೊಲೀಸರು ಆತನನ್ನು ಹಾಗೂ ಟೆಂಪೂವನ್ನು ನಗರದ ಹೊಸಲೈನ್ ರಸ್ತೆ ಸಂಚಾರಿ ಪೊಲೀಸ್ ಠಾಣೆಗೆ ಎಳೆದೊಯ್ಯಲಾಯಿತು. ಆತನ ಮೇಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೃಷ್ಣೇಗೌಡ ಮಧ್ಯಾಹ್ನವೇ ಕುಡಿದು ಆಗಲೇ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು ಪೊಲೀಸರಿಗೆ ಕಾಣಿಸದ ಆಗೇ ಚಳ್ಳೆ ಹಣ್ಣು ತಿನಿಸಿ ಕಣ್ಮರೆಯಾಗಿದ್ದನು ಎಂದು ಪೊಲೀಸರಿಂದಲೇ ಮಾಹಿತಿ ತಿಳಿದು ಬಂದಿದೆ.
ಇಂತಹ ಚಾಲಕರ ವಿರುದ್ಧ ಪೊಲೀಸರು ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

