ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ
ಹಾಸನ: ಜಿಲ್ಲೆಯಲ್ಲಿನ ಎಲ್ಲ ಕಾರ್ಯನಿರತ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಯನ್ನು ಆಗಸ್ಟ್ 31ರ ಒಳಗಾಗಿ ಪೂರೈಸಿಕೊಳ್ಳುವುದು ಕಡ್ಡಾಯವಾಗಿದೆ.
ಆದ್ದರಿಂದ ಎಲ್ಲ ಕಾರ್ಯನಿರತ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರಿಗಳು ಇಲಾಖೆಯು ನಿರ್ವಹಿಸಿ ಪ್ರಚುರಪಡಿಸಿರುವ ಇಲಾಖಾ ವೆಬ್ಸೈಟ್ ಢಿಢಿಢಿ.ಡಝಛ್ಞಛ್ಠಛಜಛ್ಠಠಛಟಿಛ.್ಞಛ್ಠ.ಟ್ಝ್ಛಿ.್ಝಟ್ಜಿ ರಲ್ಲಿನ ಅರ್ಹ ಲೆಕ್ಕ ಪರಿಶೋಧಕರ ಪಟ್ಟಿಯಿಂದ ಅವುಗಳ ದುಡಿಯುವ ಬಂಡವಾಳ, ವ್ಯಾಪಾರ ವಹಿವಾಟಿಗೆ ಅನುಗುಣವಾಗಿ ಪಟ್ಟಿ ಮಾಡಿರುವ ಲೆಕ್ಕ ಪರಿಶೋಧಕರನ್ನು ಸರ್ವ ಸದಸ್ಯರ ಸಭೆಯಲ್ಲಿ ನೇಮಕ ಮಾಡಿಕೊಂಡು ಲೆಕ್ಕ ಪರಿಶೋಧಕರನ್ನು ನೇಮಿಸಿಕೊಂಡ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಆಯ್ಕೆಯಾದ ಲೆಕ್ಕ ಪರಿಶೋಧಕರುಗಳಿಗೆ ಸಲ್ಲಿಸಬೇಕಾಗಿದೆ.
ಇಲ್ಲಿಯವರೆಗೂ ಈ ಮಾಹಿತಿ ಸಲ್ಲಿಸದೇ ಇರುವ ಸಂಘಗಳು ಕೂಡಲೇ ಸಲ್ಲಿಸಬೇಕು. ಎಲ್ಲ ಕಾರ್ಯನಿರತ ಸಹಕಾರ ಸಂಘಗಳು ಕಡ್ಡಾಯವಾಗಿ ಆಗಸ್ಟ್ 31ರೊಳಗೆ ಲೆಕ್ಕಪರಿಶೋಧನೆಯನ್ನು ಪೂರೈಸಿಕೊಳ್ಳಲು ಹಾಸನ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರು ತಿಳಿಸಿದ್ದಾರೆ.
ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಹೊಳೆನರಸೀಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ತಾಲೂಕಿನಲ್ಲಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ನಿಯಮನುಸಾರ ಪ್ರವರ್ಗವಾರು ನಿಗದಿಪಡಿಸುವ ಮೀಸಲು ಅನ್ವಯ ಭರ್ತಿ ಮಾಡಿಕೊಳ್ಳಲು ವರ್ಗ-1, 2ಎ, 2ಬಿ, 3ಎ, 3ಬಿ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ಸಂಬಂಧಪಟ್ಟ ವಿದ್ಯಾರ್ಥಿನಿಲಯಗಳಲ್ಲಿ ಉಚಿತವಾಗಿ ಪಡೆದು, ಜೂನ್ 10 ರೊಳಗೆ ಸಂಬಂಧಪಟ್ಟ ವಿದ್ಯಾರ್ಥಿನಿಲಯಗಳ ನಿಲಯ ಮೇಲ್ವಿಚಾರಕರಿಗೆ ಸಲ್ಲಿಸುವಂತೆ ತಿಳಿಸಲಾಗಿದೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ, ನೋಟ್ ಪುಸ್ತಕ, ಸೋಪು, ಸಮವಸ್ತ್ರ, ಮುಂತಾದವುಗಳನ್ನು ನಿಲಯಗಳಲ್ಲಿ ನೀಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಹೊಳೆನರಸೀಪುರ ಇವರು ತಿಳಿಸಿದ್ದಾರೆ.
ನಿಲಯಗಳ ವಿವರ: ಮೆಟ್ರಿಕ್ಪೂರ್ವ ಬಾಲಕರ ವಿ.ನಿಲಯ ಮತ್ತು ಮೆಟ್ರಿಕ್ಪೂರ್ವಬಾಲಕಿಯರ ವಿ.ನಿಲಯ, ಹೊಳೆನರಸೀಪುರ, ಮೆಟ್ರಿಕ್ಪೂರ್ವ ಬಾಲಕಿಯರ ವಿ.ನಿಲಯ ದೇವರಮುದ್ದನಹಳ್ಳಿ, ಮೆಟ್ರಿಕ್ಪೂರ್ವ ಬಾಲಕರ ವಿ.ನಿಲಯ, ಹರದನಹಳ್ಳಿ, ಹರಿಹರಪುರ, ಮಳಲಿ, ಮಾವನೂರು, ಅತ್ತಿಚೌಡೇನಹಳ್ಳಿ, ದೊಡ್ಡಹಳ್ಳಿ, ಸೋಮನಹಳ್ಳಿ, ಕೆರಗೋಡು, ಹಂಗರಹಳ್ಳಿ, ಪಡುವಲಹಿಪ್ಪೆ, ಮೂಡಲಹಿಪ್ಪೆ, ಸಿಂಗಾಪುರ.
ನಿಬಂಧನೆಗಳು: ಸರ್ಕಾರದಿಂದ ಅಂಗೀಕೃತವಾದ ಶಿಕ್ಷಣ ಸಂಸ್ಥೆಗಳಲ್ಲಿ 5 ರಿಂದ 10ನೇ ತರಗತಿವರೆಗೆ ವ್ಯಾಸಂಗ, ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ತೇರ್ಗಡೆಯಾಗಿರುವ ಹಿಂದಿನ ವರ್ಷದ ಅಂಕ ಪಟ್ಟಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಪ್ರವರ್ಗ-2ಎ, 2ಬಿ, 3ಎ, 3ಬಿಗೆ ಸೇರಿದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ 44,500 ಮಿತಿ ಇದೆ. ಮತ್ತು ಪ್ರವರ್ಗ-1 ಇವರಿಗೆ ಕುಟುಂಬದ ವಾರ್ಷಿಕ ವರಮಾನ 1,00,000 ಹಾಗೂ ಪರಿಶಿಷ್ಟಜಾತಿ, ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಕುಟುಂಬದ ಆದಾಯ ಮಿತಿ ರು. 2,00,000 ಮಿತಿಯಿದ್ದು, ಅಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಸಲ್ಲಿಸಬೇಕಾದ ದಾಖಲಾತಿಗಳು: ಸಂಬಂಧಪಟ್ಟ ತಹಸೀಲ್ದಾರ್ರಿಂದ ಪಡೆದಿರುವ ಜಾತಿ ಮತ್ತು ಆದಾಯ ದೃಢೀಕರಣದ ಪ್ರತಿ, ವ್ಯಾಸಂಗ ಮಾಡುತ್ತಿರುವ ಬಗ್ಗೆ ದೃಡೀಕರಣ ಪತ್ರ. ವಿದ್ಯಾರ್ಥಿಯು ಕಳೆದ ಸಾಲಿನಲ್ಲಿ ವ್ಯಾಸಂಗ ಮಾಡಿರುವ ಅಂಕಪಟ್ಟಿಯ ಪ್ರತಿ. ಇದರ ಜೊತೆಗೆ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

