ಕಳಪೆ ಕಾಮಗಾರಿ: ಲೋಕಾ ಪರಿಶೀಲನೆ
ಅರಕಲಗೂಡು: ಹೊಳೆನರಸೀಪುರ-ಅರಕಲಗೂಡು ನಡುವೆ ಅಭಿವೃದ್ಧಿಗೊಂಡಿರುವ ರಸ್ತೆಯ ಕಾಮಗಾರಿ ಪರಿಶೀಲನೆಯನ್ನು ಕರ್ನಾಟಕ ಲೋಕಾಯುಕ್ತ ಎಂಜಿನಿಯರ್ ತಂಡ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿತು.
2011ರ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಜೆ.ಕೆ.ಕೃಷ್ಣ ಎಂಬುವರು ಅಂದಾಜು ಐದು ಕಿಮೀ ರಸ್ತೆ ಅಭಿವೃದ್ಧಿ ಕೆಲಸವನ್ನು ಪೂರ್ಣಗೊಳಿಸಿದ್ದರು. ಇದಾದ ಕೆಲವೇ ತಿಂಗಳಲ್ಲಿ ರಸ್ತೆ ದುರಸ್ತಿಗೆ ಒಳಗಾಗಿದ್ದು, ಗುಂಡಿ ಬಿದ್ದಿರುವ ರಸ್ತೆಗೆ ಮತ್ತೆ ಡಾಂಬರ್ ಹಾಕಲಾಗಿದೆ. ಈ ಸಂಬಂಧ ಕಳಪೆ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರ ಹಾಗೂ ಕರ್ತವ್ಯ ನಿರ್ಲಕ್ಷ್ಯ ವಹಿಸಿರುವ ಎಂಜಿನಿಯರ್ ವಿರುದ್ಧ ತನಿಖೆ ನಡೆಸಬೇಕೆಂದು ಮಾಜಿ ಪಪಂ ಸದಸ್ಯ ಎನ್. ರವಿಕುಮಾರ್ ಲೋಕಾಯುಕ್ತಕ್ಕೆ ಮನವಿ ಮಾಡಿ ಒತ್ತಾಯಿಸಿದ್ದರು.
ಲೋಕಾಯುಕ್ತರ ನಿರ್ದೇಶನದಂತೆ ಮುಖ್ಯ ಎಂಜಿನಿಯರ್ ಶಿವರಾಂ, ಕಾರ್ಯಪಾಲಕ ಎಂಜಿನಿಯರ್ ದೇವಿಪ್ರಸಾದ್, ರಸ್ತೆ ಅಭಿವೃದ್ಧಿ ನಿಗಮದ ಎಂಜಿನಿಯರ್ಗಳಾದ ರುದ್ರಪ್ಪ, ವೀರಭದ್ರಪ್ಪ ತಂಡ ಕಳಪೆ ಕಾಮಗಾರಿಯಿಂದ ದುರಸ್ತಿಗೆ ಒಳಗಾಗಿರುವ ತಾಲೂಕಿನ ದೇವರಹಳ್ಳಿ ಹಾಗು ಕಳ್ಳಿಮುದ್ದನಹಳ್ಳಿ ಗ್ರಾಮದ ಬಳಿ ಈಗಾಗಲೇ ದುರಸ್ತಿಗೆ ಒಳಗಾಗಿರುವ ರಸ್ತೆಯ ವೀಕ್ಷಣೆ ಹಾಗೂ ಕೆಲಸ ನಿರ್ವಹಿಸಿರುವ ಗುಣಮಟ್ಟ ತಪಾಸಣೆ ಮಾಡಿದರು.
ರಸ್ತೆ ಹಾಳಾಗಿರುವ ಮತ್ತು ಸಾರ್ವಜನಿಕ ಹಣ ದುರಪಯೋಗ ಆಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಲೋಕಾಯುಕ್ತರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳ ತಂಡ ಅರ್ಜಿದಾರರಿಗೆ ಭರವಸೆ ನೀಡಿತು.
ಈ ಸಂದರ್ಭದಲ್ಲಿ ಭಾಜಪ ಮುಖಂಡ ಜಗದೀಶ್, ಕರವೇ ತಾಲೂಕು ಅಧ್ಯಕ್ಷ ಭಾಸ್ಕರ್ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

