ಹಾಸನ

ಬೀದಿಗೆ ಬಿದ್ದಿದ್ದ ವೃದ್ಧೆಗೆ ಸಾರ್ವಜನಿಕರ ನೆರವು

Published On :

ಸಕಲೇಶಪುರ : ಅನಾರೋಗ್ಯದಿಂದ ಬೀದಿಗೆ ಬಿದ್ದಿದ್ದ ನತದೃಷ್ಟ ಮಹಿಳೆಯನ್ನು ಸಾರ್ವಜನಿಕರ ಸಹಯೋಗದಿಂದ ತಾಲೂಕು ಆಡಳಿತ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಗುರುವಾರ ಕರೆದೊಯ್ಯಲಾಯಿತು.
ಪಟ್ಟಣದ ಕುಶಾಲನಗರ ಬಡಾವಣೆಯ ನಿವಾಸಿ ವೃದ್ದೆ ಫಾತಿಮಾ, ಅನಾರೋಗ್ಯದಿಂದಾಗಿ ಮಳೆ-ಗಾಳಿ-ಬಿಸಿಲಿನಲ್ಲಿ ಬಳಲುತ್ತ ತೆವಳುತ್ತ ಸ್ಥಳದಲ್ಲೆ ಮಲ-ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದನ್ನು ಕಂಡು ಸಾರ್ವಜನಿಕರು ತಾಲೂಕು ತಹಸೀಲ್ದಾರ್ ಗಮನಕ್ಕೆ ತಂದರು. ನಂತರ ತಾಲೂಕು ಆಡಳಿತ, ಹಾಸನದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಡುವ ಅನೂಕೂಲ ಮಾಡಿಕೊಟ್ಟಿತು.
ಪಟ್ಟಣದ ಕುಶಾಲನಗರ ಬಡಾವಣೆಯ ಹೌಸಿಂಗ್ ಬೋರ್ಡ್ ನಿವಾಸಿಯಾಗಿದ್ದ  ಫಾತಿಮ ಮನೆಕೆಲಸ ಕೂಲಿ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಆರೋಗ್ಯ ಹದಗೆಟ್ಟನಂತರ ಮಸೀದಿ ಎದುರು ತನ್ನ ಬುದ್ದಿಮಾಂದ್ಯ ಸಾಕು ಮಗಳು ಆಯಿಷಾಳೂಂದಿಗೆ ಭಿಕ್ಷೆ ಬೇಡುತ್ತಿದ್ದರು. ಈಕೆ ವಾಸವಿದ್ದ ಮನೆ ಮಳೆ-ಗಾಳಿಗೆ ಬಿದ್ದುಹೋಯಿತು.
ಈಕೆಯನ್ನು ನೊಡಿಕೊಳ್ಳುತ್ತಿದ್ದ ಬುದ್ದಿಮಾಂಧ್ಯ ಮಗಳು ಆಯಿಷಾ ಕಾಮುಕರಿಗೆ ಬಲಿಯಾಗಿ ಗಂಡು ಮಗುವಿಗೆ  ಜನ್ಮನೀಡಿ ಈಗ ಹಾಸನದ ಸಾಂತ್ವನ ಕೇಂದ್ರದಲ್ಲಿದ್ದಾಳೆ. ಈಕೆಯ ಮಗು ಶಿಶು ಕೇಂದ್ರದಲ್ಲಿದೆ. ಸೊಂಟದ ಸ್ವಾಧೀನ ಕಳೆದುಕೊಂಡ ಫಾತಿಮಾ ಪಟ್ಟಣದ ಬೀದಿಯಲ್ಲಿ  ಭಿಕ್ಷೆ ಬೇಡುತ್ತ ದಿನ ಕಳೆಯುತ್ತಿದ್ದರು.
ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸುಪ್ರದೀಪ್ ಹಾಸನಕ್ಕೆ ತರಳಲು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟರು. ನಾಗರಿಕ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಮಲ್ನಾಡ್ ಮೆಹಬೂಬ್, ಕೇರಳ ಸಮಾಜ, ಪ್ರಸನ್ ಕುಮಾರ್,  ಹಾಗೂ ಇತರರ ನರೆವಿನಿಂದ ಫಾತಿಮಾಗೆ ಚಿಕೆತ್ಸೆ ಕೊಡಿಸಲು ಸಾಧ್ಯವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.