ಎತ್ತಿನಹೊಳೆ ಯೋಜನೆಗೆ ವಿರೋಧ
ಸಕಲೇಶಪುರ: ಜಗತ್ತಿನ ನಿಸರ್ಗ ಸಮತೋಲನವನ್ನು ಕಾಪಾಡುತ್ತಿರುವ ಪಶ್ಚಿಮಘಟ್ಟಗಳ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ದಾಳಿಗಳು ನಡೆಯುತ್ತಿದ್ದು, ಇದರ ವಿರುದ್ಧ ಪ್ರೊ.ಮಾಧವ ಗಾಡ್ಗಿಳ್ ನೀಡಿರುವ ವೈಜ್ಞಾನಿಕ ವರದಿಯನ್ನೇ ಅಸ್ತ್ರವಾಗಿ ಬಳಸಿಕೊಳ್ಳಬೇಕು ಎಂದು ರಾಜ್ಯದ ಪರಿವಾದಿಗಳ ಸಭೆ ಅಭಿಪ್ರಾಯಪಟ್ಟಿದೆ.
ಎತ್ತಿನಹೊಳೆ ತಿರುವು ಯೋಜನೆಯಿಂದ ತೀವ್ರ ಭಾದಕವಾಗಲಿದೆ ಎಂದು ಹೇಳಲಾದ ಹಿರದನಹಳ್ಳಿ ಗ್ರಾಮದಲ್ಲಿ ಸೋಮವಾರ ಪ್ರೊ.ಮಾಧವ ಗಾಡ್ಗಿಳ್ ವರದಿಯ ಬಗ್ಗೆ ಸಂವಾದ ಮತ್ತು ಎತ್ತಿನಹೊಳೆ ತಿರುವು ಯೋಜನೆಯ ವಿರುದ್ಧದ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಪರಿಸರವಾದಿಗಳು ಮಾತನಾಡಿದರು.
ಸಭೆಯಲ್ಲಿ ವಿಷಯ ವಿಚಾರ ಮಂಡಿಸಿದ ಹಿರಿಯ ಲೇಖಕ ಸಿ.ಯತೀರಾಜ್, ಅಭಿವೃದ್ಧಿಯ ಹೆಸರಿನ ಪರಿಸರ ವಿನಾಶದಿಂದ ಮಾನವರು ಸೇರಿದಂತೆ ಇಡೀ ಜೀವ ಸಂಕುಲವೇ ವಿನಾಶಕ್ಕೆ ಗುರಿಯಾಗುತ್ತದೆ. ಆದರೆ ಪರಿಸರವಾದಗಳ ಹೋರಾಟ ಎಂದರೆ ಸೀಮಿತ ಗುಂಪಿನ ಹೋರಾಟ ಎಂದು ಕಲ್ಪನೆ ಇದೆ. ಆದ್ದರಿಂದ ಎಲ್ಲ ವರ್ಗ ಜನರನ್ನು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಮಲೆನಾಡು ಹೋರಾಟ ಸಮಿತಿ ಅಧ್ಯಕ್ಷ ಎಚ್.ಎ.ಕಿಶೋರ್ ಕುಮಾರ್ ಮಾತನಾಡಿ, ರಾಜ್ಯದ ಜನತೆಯನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿ ಇಟ್ಟು, ಸರ್ಕಾರ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದು ಅವೈಜ್ಞಾನಿಕವಾಗಿದ್ದು, ಸಾವಿರಾರು ಕೋಟಿ ರು. ಅನ್ನು ಯೋಜನೆಯ ಹೆಸರಿನಲ್ಲಿ ವ್ಯರ್ಥ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ, ಕೋಲಾರ ಮುಂತಾದ ಬರಪೀಡಿತ ಪ್ರದೇಶಗಳಿಗೆ ನೀರವಾರಿ ಕಲ್ಪಿಸಬೇಕೆಂಬುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶಕ್ಕೆ ಹೊರಟಿದೆ. ಈ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಲೆನಾಡು ಜನರ ಜನಜೀವನದ ಮೇಲೆ ಆಗುವ ಪರಿಣಾಮದ ಬಗ್ಗೆ ಅಧ್ಯಯನ ನಡೆಸಿಲ್ಲ. ಜೀವ ವೈವಿಧ್ಯತೆಯ ವಿನಾಶ ಬಗ್ಗೆಯೂ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ ಎಂದು ಅವರು ದೂರಿದರು.
ಸಾಹಿತಿ ರೂಪ ಹಾಸನ, ಹೋರಾಟಗಾರ ದಿನೇಶ್ ಹೊಳ್ಳ ಮಾತನಾಡಿದರು. ಪರಿಸರ ತಜ್ಞ ಅನಂತ ಹೆಗಡೆ, ಅಶಿಸರ, ಸೇರಿದಂತೆ ಸೋಮಶೇಖರ್, ಕೆ.ಸತೀಶ್ಕುಮಾರ್, ಎಂ.ಪಿ.ಡೋಗ್ರೆ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

