ನೀರಿನ ಸೆಲೆ ಪೋಲು; ಉದಾಸೀನ ತರವಲ್ಲ
ಹಾಸನ: ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಭ್ಯವಿರುವ ಈ ನೀರಿನ ಸೆಲೆಯನ್ನು ಉದಾಸೀನದಿಂದ ಪೋಲು ಮಾಡುತ್ತಿದ್ದೇವೆ ಎಂದು ಭಾರತ ಜ್ಞಾನ-ವಿಜ್ಞಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಅಹಮದ್ ಹಗರೆ ತಿಳಿಸಿದರು.
ಅವರು ಸೋಮವಾರ ನಗರದ ಶಾಂತಿನಗರ ಭಾರತ ಜ್ಞಾನ-ವಿಜ್ಞಾನ ಸಮಿತಿಯು ಮಾಸಿಕವಾಗಿ ಹಮ್ಮಿಕೊಳ್ಳುವ ಅನಿಸಿಕೆ-ಅಭಿವ್ಯಕ್ತಿ 17ನೇ ತಿಂಗಳ ಕಾರ್ಯಕ್ರಮದಲ್ಲಿ 'ಜೀವಸೆಲೆಯ ಜಲಕ್ಕೆ ಅಂತರ್ಜಲ ಮರುಪೂರಣ'
ಉಪನ್ಯಾಸ ನೀಡಿದರು.
ನೀರು ನಿಸರ್ಗದಲ್ಲಿ ಸಿಗುವ ಅಮೂಲ್ಯ ಸಂಪನ್ಮೂಲ ಇದು 1,50,000,000 ಘನ ಕಿಮೀಗಳಷ್ಟು ವಿಸ್ತಾರ ಹೊಂದಿ ಭೂಮಿಯ 75 ಭಾಗ ಆವರಿಸಿಕೊಂಡಿದೆ ಆದರೆ ಇದರಲ್ಲಿ ಶೇ.97 ಉಪ್ಪು ನೀರಿನಿಂದ ಕೂಡಿದ್ದು, ಉಳಿದ ನೀರಿನಲ್ಲಿ ಶೇ.2 ಮಂಜಿನ ರೂಪದಲ್ಲೂ ಮಿಕ್ಕ ಶೇ.1ರಷ್ಟು ಮಾತ್ರ ಮಾನವನ ಉಪಯೋಗಕ್ಕೆ ಲಭ್ಯವಾಗಿದೆ. ನಮಗೆ ಲಭ್ಯವಾಗುತ್ತಿರುವ ಶೇ.1 ರಷ್ಟು ನೀರಿನಲ್ಲಿ ಶೇ.92 ಕೃಷಿಗಾಗಿ ಉಳಿದ ಶೇ.8 ರಷ್ಟು ಮಾತ್ರ ಗೃಹಪಯೋಗಿ ಬಳಕೆಗೆ ಲಭ್ಯವಿದೆ ಎಂದು ಹೇಳಿದರು.
ಕರ್ನಾಟಕವು ದೇಶದಲ್ಲೇ ಅತಿ ಕಡಿಮೆ ಮಳೆ ಬೀಳುವ ರಾಜ್ಯಗಳಲ್ಲಿ ರಾಜಸ್ತಾನದ ನಂತರದ ಸ್ಥಾನದಲ್ಲಿದೆ. ನಮ್ಮ ಕರ್ನಾಟಕ ನೈಸರ್ಗಿಕವಾಗಿ ಎತ್ತರ ಪ್ರದೇಶದಲ್ಲಿದೆ ಮತ್ತು 300 ಕಿಮೀ ಗರಿಷ್ಠ ದೂರದ ಸಾಗರದ ಹಾದಿ ಕಡಿದಾಗಿದೆ ಹಾಗೂ ರಾಜ್ಯದ ಒಡಲು ಗ್ರಾನೈಟುಗಳಿಂದ ತುಂಬಿರುವ ಕಾರಣ ಮಳೆ ನೀರಿನ 65 ಭಾಗ ಇಂಗದೆ ಸಾಗರ ಸೇರುತ್ತಿದೆ ಹಾಗಾಗಿ ಅಂತರ್ಜಲ ಈ ಪ್ರದೇಶದಲ್ಲಿ ಶ್ರೀಮಂತವಾಗಿಲ್ಲ. ಹಾಗಾಗಿ ರಾಜ್ಯದಲ್ಲಿ ಇರುವ ವಾರ್ಷಿಕವಾಗಿ ಒಟ್ಟು ಲಭ್ಯ ವಾಗುವ 3475.24 ಟಿಎಂಸಿ ನೀರಿನಲ್ಲಿ ಸುಮಾರು 2000ಕ್ಕೂ ಹೆಚ್ಚು ನೀರು ಸಾಗರ ಸೇರುತ್ತಿದೆ ಎಂದರು.
ನೀರಿಗಾಗಿ ದೇಶ ದೇಶಗಳ ನಡುವಿನ ಘರ್ಷಣೆ ಜಾಗತಿಕ ಯುದ್ಧಕ್ಕೆ ನಾಂದಿ ಹಾಡೀತು. ಮಾತ್ರವಲ್ಲ, ಜಿಲ್ಲೆ-ಜಿಲ್ಲೆಗಳ ನಡುವೆ ನಿರು ಹರಿಸುವಾಗ ರಾಜಕೀಯ ಯುದ್ಧ ಸೃಷ್ಟಿಸಿ ಈಗ ವಾರ್ಡ್-ವಾರ್ಡ್ಗಳ ನಡುವೆ ನಡುವಿನ ವೈಮನಸ್ಯಕ್ಕೆ ಕಾರಣವಾಗಿದೆ. ಹಾಗಾಗಿ, ನಗರದ ವಾರ್ಡ್ಗಳಲ್ಲಿ ನಾವು ನೀರಿನ ಬವಣೆ ನೀಗಿಸಲು ಪರದಾಡುವಂತಾಗಿದೆ ಏಕೆಂದರೆ ನಗರ ಪ್ರದೇಶದಲ್ಲಿ ಜನ ಜೀವನಕ್ಕೆ ಅಂತರ್ಜಲವೇ ಸಂಪೋಷಣೆಯಾಗಿದೆ ಹಾಗೂ ಭಾರತದ ಕೃಷಿಗೆ ಸಾಂಪ್ರದಾಯಿಕ ಮಳೆ ಮುನಿಸಿಕೊಳ್ಳುತ್ತಿದೆ. ಆದುದರಿಂದ ಅಲ್ಲಿಯೂ ಸಹ ಅಂತರ್ಜಲವನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದರು. ಆದರೆ, ಪರಿಸರ ಪೂರಕವಲ್ಲದ ಅಭಿವೃದ್ಧಿ ಕಾರ್ಯಗಳಿಂದ ಹಾಸನದ ಅಂತರ್ಜಲ ಬತ್ತಿಹೋಗಿ ಕುಡಿಯುವ ನೀರಿಗೆ ಹಪಹಪಿಸುವಂತಾಗಿದೆ. ಮಾನವ ಕುಲ ಉಳಿದು ಬೆಳೆಯಲು ನೀರು ಅತ್ಯಮೂಲ್ಯ ಆ ನೀರಿನ ಶುದ್ಧತೆ ಹೆಚ್ಚಿಸಿ ಜಲ ಸಂಪನ್ಮೂಲವನ್ನು ಕಾಪಾಡುವಲ್ಲಿ ಬಳಸಿ ಉಳಿದ ಹಾಗೂ ಮಳೆಗಾಲದಲ್ಲಿ ಸುಮ್ಮನೇ ಸುರಿದು ಹೋಗುವ ನೀರನ್ನು ಭೂಗರ್ಭ ಸೇರಿಸಿ ಮರುಪೂರಣ ಮಾಡಿದರೆ ಜಲಕ್ಷಾಮ ತಪ್ಪಿಸಬಹುದು ಎಂದರು.
ಚೂಡಾಮಣಿ, ಸತ್ಯನಾರಾಯಣಶರ್ಮ ಹಾಗು ಪದ್ಮಾಮಂಜುನಾಥ್, ಕವನ ವಾಚಿಸಿದರು. ಕೃಷ್ಣಮೂರ್ತಿ, ಪದ್ಮಾ ಹಾಗೂ ಸುಮಾಭಟ್ ಮತ್ತಿತರರು ಭಾವಗೀತೆಗಳನ್ನು ಹಾಡಿದರು. ಸುಮಾ ಕುಮಾರ್ ತಮ್ಮ ಕಲಾ ಕುಸರಿ ಪ್ರದರ್ಶಿಸಿದರು ಕವಿತ, ವೇದಶ್ರೀ, ಜಯಪ್ರಕಾಶ್ ಮತ್ತಿತರರು ಇದ್ದರು. ಸುಮ ಸ್ವಾಗತಿಸಿದರು. ಶಿಕ್ಷಕ ಕೆ.ಆರ್.ಕೃಷ್ಣಮೂರ್ತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

