ಹಾವೇರಿ

ಸೂಕ್ಷ್ಮ ಪರೀಕ್ಷಾ ಕೇಂದ್ರದಲ್ಲಿ ವಿಡಿಯೋ ಚಿತ್ರೀಕರಣ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ. 1
ತಾಲೂಕಿನ ಗುಡಗೂರಿನ ಕಮಲಮ್ಮ ಪ್ರೌಢಶಾಲೆ, ತುಮ್ಮಿನಕಟ್ಟಿಯ ಸಂಗನಬಸವೇಶ್ವರ ಹೈಸ್ಕೂಲ್ ಹಾಗೂ ರಾಣಿಬೆನ್ನೂರು ನಗರಸಭಾ ಬಾಲಕರ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ತಾಲೂಕಿನ ಎಲ್ಲ 17 ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಪರೀಕ್ಷಾ ಸಮಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದು ಡಯಟ್ ಪ್ರಾಚಾರ್ಯ ಎಂ.ಡಿ. ಬಳ್ಳಾರಿ ತಿಳಿಸಿದರು.
ಏ. 1ರಿಂದ ಆರಂಭಗೊಂಡಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಜಿಲ್ಲಾ ವಿಕ್ಷಕರಾಗಿರುವ ಅವರು, ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿನ ಇಟಗಿ ಸರ್ಕಾರಿ ಪ್ರೌಢಶಾಲೆ, ಚಳಗೇರಿ ಸಿಇಎಸ್ ಪ್ರೌಢಶಾಲೆ, ಕವಲೆತ್ತು ದುರ್ಗಾಮಾತಾ ಪ್ರೌಢಶಾಲೆ, ಹಾಗೂ ಮೆಡ್ಲೇರಿ ರಸ್ತೆಯ ಆಂಗ್ಲೋ ಉರ್ದು ಪ್ರೌಢಶಾಲೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಣಿಬೆನ್ನೂರು ತಾಲೂಕಿನ 69 ಪ್ರೌಢಶಾಲೆಗಳಲ್ಲಿ 2012ಟ 13ನೇ ಸಾಲಿನಲ್ಲಿ ಕನ್ನಡ ಮಾಧ್ಯಮ 1,984 ಗಂಡು, 1,752 ಹೆಣ್ಣು ಮಕ್ಕಳು ಸೇರಿದಂತೆ 3,732 ವಿದ್ಯಾರ್ಥಿಗಳು, ಇಂಗ್ಲಿಷ್ ಮಾಧ್ಯಮದಲ್ಲಿ 191 ಗಂಡು, 162 ಹೆಣ್ಣು ಸೇರಿ 353 ವಿದ್ಯಾರ್ಥಿಗಳು, ಉರ್ದು ಮಾಧ್ಯಮದಲ್ಲಿ 97 ಗಂಡು, 166 ಹೆಣ್ಣು ಸೇರಿ ಒಟ್ಟು 263 ವಿದ್ಯಾರ್ಥಿಗಳು ಹಾಗೂ 26 ಗಂಡು, 20 ಹೆಣ್ಣು ಮಕ್ಕಳು ಸೇರಿ ಒಟ್ಟು 46 ವಿದ್ಯಾರ್ಥಿಗಳು ಸಂಸ್ಕೃತ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದರು.
ಏ. 1ರಂದು ನಡೆದ ಪರೀಕ್ಷೆಯಲ್ಲಿ 4,394 ವಿದ್ಯಾರ್ಥಿಗಳಲ್ಲಿ, 2,223 ಗಂಡು, 2,061 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 4,284 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 71 ಗಂಡು, 39 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 110 ವಿದ್ಯಾರ್ಥಿಗಳು ಗೈರು ಉಳಿದಿದ್ದಾರೆ ಎಂದರು. ಡಯಟ್ ಉಪನ್ಯಾಸಕ ಆರ್.ವಿ. ಚಿನ್ನಿಕಟ್ಟಿ, ಎಚ್. ಶಿವಪ್ಪ, ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಸ್.ಬಿ. ಜಕ್ಕರಡ್ಡೇರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.