ಹಾವೇರಿ

ಸೂಕ್ತ ರಕ್ಷಣೆ, ಪರಿಹಾರ ಒದಗಿಸಿ

Published On :

ಹಿರೇಕೆರೂರು: ಏ. 3ರ ಮಧ್ಯಾಹ್ನ ಕ್ಷುಲ್ಲಕ ಕಾರಣಕ್ಕೆ ನಡೆದ ಘಟನೆ ಸಂದರ್ಭ ಹಡಪದ ಸಮಾಜದವರ ಕೆಲ ಅಂಗಡಿಗಳು ಜಖಂಗೊಂಡ ಹಿನ್ನೆಲೆಯಲ್ಲಿ ಹಡಪದ ಸಮಾಜದವರು ತಮಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಪರಿಹಾರ ಒದಗಿಸುವಂತೆ ಆಗ್ರಹಿಸಿ ಸ್ಥಳೀಯ ಠಾಣೆ ಪಿಎಸ್‌ಐ ಶಿಲ್ಪಾ ವಿ.ವೈ, ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಹಡಪದ ಅಪ್ಪಣ್ಣ ಸೇವಾಟ್ರಸ್ಟ್ ಅಧ್ಯಕ್ಷ ವೀರಪ್ಪ ಕಟ್ಟಿಮನಿ ಮಾತನಾಡಿ, ಗ್ರಾಮದಲ್ಲಿ ಹಡಪದ ಸಮಾಜದವರು ಅಲ್ಪಸಂಖ್ಯಾತರಿದ್ದು, ನಾವು ದಿನನಿತ್ಯ ಸಮಾಜದಲ್ಲಿರುವ ಜನರ ಕ್ಷೌರ ಮಾಡುವ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದೇವೆ. ಏ. 3ರಂದು ಸಂಜೆ ಜರುಗಿದ ಘಟನೆಯಲ್ಲಿ ಅಶೋಕ ಕಾಯಕದ ಎಂಬುವರ ಕ್ಷೌರದ ಅಂಗಡಿಯ ಮೇಲೆ ಒಂದು ಕೋಮಿನವರು ದಾಳಿ ಮಾಡಿ ಅಂಗಡಿಯನ್ನು ಧ್ವಂಸಗೊಳಿಸಿ, ಅಂಗಡಿಯಲ್ಲಿರುವ ಗಾಜುಗಳನ್ನು ಒಡೆದು ಜಖಂಗೊಳಿಸಿದ್ದಾರೆ. ದಿನನಿತ್ಯ ಕ್ಷೌರ ಮಾಡಿ ಜೀವನ ಮಾಡುವ ನಮ್ಮ ಬದುಕು ಕಿತ್ತುಕೊಂಡಿರುವವರನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಿ, ರಕ್ಷಣೆ ನೀಡುವ ಮೂಲಕ ಹಡಪದ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಕುಮಾರ ಕಾಯಕದ, ಗೌರವಾಧ್ಯಕ್ಷ ಶಿದ್ದಪ್ಪ ಕಾಯಕದ, ಪ್ರಧಾನ ಕಾರ್ಯದರ್ಶಿ ಹಾಲಸಿದ್ದಪ್ಪ ಕಾಯಕದ ಸಿ.ಎಂ. ಹಡಪದ, ಹರೀಶ ಕಾಯಕದ, ನಿಂಗರಾಜ ಹಡಪದ, ಎನ್.ಜಿ. ಕಾಯಕದ, ಪ್ರಶಾಂತ ಹಡಪದ, ಅಶೋಕ ಕಾಯಕದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.