ಹಾವೇರಿ

ಅರುಣೋದಯ ಸಂಸ್ಥೆ ಕಾರ್ಯ ಶ್ಲಾಘನೀಯ

Published On :

ರಾಣಿಬೆನ್ನೂರು: ಮಳೆಗಾಲ ಮುಗಿದು ಬೇಸಿಗೆ ಕಾಲ ಪ್ರಾರಂಭಗೊಳ್ಳುವ ಸಮಯದಲ್ಲಿ ತಮ್ಮ ಉಪ ಜೀವನಕ್ಕಾಗಿ ಮಂಗಳೂರು ಇನ್ನಿತರೆಡೆ ಕಾಫಿ ತೋಟಗಳಲ್ಲಿ ದುಡಿಯುವುದಕ್ಕಾಗಿ ತೆರಳುವ ತಾಲೂಕಿನ ಲಂಬಾಣಿ ತಾಂಡಾಗಳ ಬಡವರ ಮಕ್ಕಳಿಗೆ 6 ತಿಂಗಳುಗಳ ಕಾಲ ಶಿಕ್ಷಣ ನೀಡುವ ಜವ್ಹಾಬ್ದಾರಿ ಹೊತ್ತಿರುವ ಅರುಣೋದಯ ಶಿಕ್ಷಣ, ಆರೋಗ್ಯ ಮತ್ತು ಕೃಷಿ ಅಭಿವೃದ್ಧಿ ಸ್ವಯಂಸೇವಾ ಸಂಸ್ಥೆಯ ಸೇವೆ ಶ್ಲಾಘನಿಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಬಿ. ಜಕ್ಕರಡ್ಡೇರ ಹೇಳಿದರು.
ತಾಲೂಕಿನ ಗಂಗಾಜಲ ತಾಂಡಾದಲ್ಲಿ ಕಳೆದ 2012ರಲ್ಲಿ ಪ್ರಾರಂಭಿಸಲಾಗಿದ್ದ ಋತುಮಾನ ಶಾಲೆಯ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಳೆದ 4 ವರ್ಷಗಳಿಂದ ತೀವ್ರ ಬರಗಾಲವನ್ನೆದುರಿಸುತ್ತಿರುವ ತಾಲೂಕಿನ ಲಂಬಾಣಿ ತಾಂಡಾಗಳ ಬಡವರು, ತಮ್ಮ ಉಪ ಜೀವನಕ್ಕಾಗಿ ಮಂಗಳೂರು, ಕೊಡಗು, ಮಡಿಕೇರಿ ಇತರೆಡೆಗಳಲ್ಲಿನ ಕಾಫಿ ತೋಟಗಳಲ್ಲಿ ವರ್ಷದ 6 ತಿಂಗಳು ಕಾಲ ಕೆಲಸಕ್ಕೆಂದು ತೆರಳುವ ಸಮಯದಲ್ಲಿ ತಮ್ಮ ಜೊತೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಗಮನಿಸಿರುವ ಜಿಪಂ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಗಂಗಾಜಲ ತಾಂಡಾದಲ್ಲಿ 2012 ಅಕ್ಟೋಬರ್ 3ರಂದು ಆರಂಭಿಸಿರುವ ಋತುಮಾನ ಶಾಲೆಯ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಅರುಣೋದಯ ಶಿಕ್ಷಣ, ಆರೋಗ್ಯ ಮತ್ತು ಕೃಷಿ ಅಭಿವೃದ್ಧಿ ಸ್ವಯಂಸೇವಾ ಸಂಸ್ಧೆಗೆ ವಹಿಸಲಾಗಿತ್ತು. ಶಾಲೆಯ ಜವ್ಹಾಬ್ದಾರಿ ವಹಿಸಿಕೊಂಡಿದ್ದ ಅರುಣೋದಯ ಸಂಸ್ಧೆಯವರು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಉತ್ತಮ ಸೇವೆ ಮಾಡಿದ್ದರ ಫಲವಾಗಿ ಮಕಳ ಕಲಿಕೆಯ ಗುಣಮಟ್ಟ ಹೆಚ್ಚಾಗಿದ್ದು, ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ತೂರಿಸಿಕೂಟ್ಟಿರುವುದೆ ಸಾಕ್ಷಿಯಾಗಿದೆ ಎಂದು ಜಕ್ಕರಡ್ಡಿ ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಂ. ಮಾಗನೂರು ಮಾತನಾಡಿ, 6 ತಿಂಗಳುಗಳಲ್ಲಿ ಸ್ವಯಂಸೇವಾ ಸಂಸ್ಧೆಯವರು ಶಿಕ್ಷಣದಿಂದ ವಂಚಿತವಾಗುತ್ತಿದ್ದ 40 ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸಾಧಿಸಿದ ಪ್ರಗತಿ ಗುಣಗಾನ ಮಾಡಿದರು. ಅರುಣೋದಯ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷೆ ಹೊನ್ನಮ್ಮ ಚಂದಾಪುರ ಮಾತನಾಡಿದರು. ಎಸ್.ಟಿ. ಕೋಟಿಹಾಳ ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.