ಹಾವೇರಿ

ಮುಖಂಡರು ಕಾಂಗ್ರೆಸ್ ಸೇರ್ಪಡೆ

Published On :

ಹಿರೇಕೆರೂರು:  ತಾಲೂಕಿನ ಮಾಸೂರು ಗ್ರಾಮದ ಉಪ್ಪಾರ ಸಮಾಜದ ಮುಖಂಡರು ಶಾಸಕ ಬಿ.ಸಿ. ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಪಟ್ಟಣದ ಶಾಸಕರ ನಿವಾಸದಲ್ಲಿ ಮಾಸೂರು ಗ್ರಾಮದ ಉಪ್ಪಾರ ಸಮಾಜದ ಅಧ್ಯಕ್ಷ ಚನ್ನಪ್ಪ ಉಪ್ಪಾರ, ಬಾಳಪ್ಪ ಹೊರಟ್ಟಿ, ನಾಗರಾಜ ತೋಳನವರ, ಶಿದ್ದಪ್ಪ ಕರಿಗಾರ, ಕರಬಸಪ್ಪ ಹೊರಟ್ಟಿ, ಬಾಳಪ್ಪ ಕೋಲಪ್ಪನವರ, ರಾಮಪ್ಪ ಭಂಡಾರಿ, ನಿಂಗಪ್ಪ ಸಣ್ಣಲಗಮಣ್ಣನವರ, ನಾಗರಾಜ ಉಳ್ಳಾಗಡ್ಡಿ, ನಾಗೇಂದ್ರಪ್ಪ ಕೊಳವಿ, ಕರಬಸಪ್ಪ ತೋಳನವರ, ರಾಘವೇಂದ್ರ ಕಲಕುಟಿಗ ಮತ್ತಿತರರು ಕಾಂಗ್ರೆಸ್ ಸೇರಿದರು.
ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಶಾಸಕ ಬಿ.ಸಿ. ಪಾಟೀಲ, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ವ್ಯಾಪಕವಾಗಿದೆ. ಮಹಿಳೆಯರೂ ಮನೆಗೆ ಬಂದು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನಲ್ಲಿ ಅಪಾರ ಅಭಿವೃದ್ಧಿ ಕಂಡಿರುವ ಜನತೆ ಮೂರನೇ ಬಾರಿ ತಮ್ಮನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿರುವ ಮತದಾರರು ಈಗ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿದ್ದು, ಜಿಲ್ಲೆಯ ಎಲ್ಲ ಆರು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಭದ್ರಕೋಟೆ ಸ್ಥಾಪಿಸಲಿದೆ ಎಂದರು. ಕಾಂಗ್ರೆಸ್ ಮುಖಂಡರಾದ ಡಿ.ಸಿ. ಪಾಟೀಲ, ವನಜಾ ಪಾಟೀಲ, ಸೋಮಣ್ಣ ಸಿದ್ದಲಿಂಗಪ್ಪನವರ, ಜಿ. ಶಿವನಗೌಡ್ರ, ಚಂದ್ರಪ್ಪ ಪರಪ್ಪನವರ, ಬಸವರಾಜ ಬಣಕಾರ, ಪುಟ್ಟಪ್ಪ ನೆಗಳೂರ, ಸುರೇಶ ಕನ್ನಕ್ಕನವರ, ನಾಗರಾಜ ಹಿರೇಮಠ, ಸಂತೋಷ ಹಳ್ಳಪ್ಪಗೌಡ್ರ, ಬಸವರಾಜ ಕಾಲ್ವೀಹಳ್ಳಿ, ಪ್ರಕಾಶ ಹಿತ್ಲಳ್ಳಿ, ಸೋಮಣ್ಣ ಪೂಜಾರ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.