ಹಾವೇರಿ

ನಿಂದನೆ: ನೆಹರುವಿರುದ್ಧ ದೂರು

Published On :

ಹಾವೇರಿ: ಪಟ್ಟಣದ ನಾಗೇಂದ್ರಮಟ್ಟಿಯಲ್ಲಿ ಮತದಾರರಿಗೆ ಹಣದ ಆಮಿಷವೊಡ್ಡುತ್ತಿದ್ದ ಕೆಜೆಪಿ ಕಾರ್ಯಕರ್ತೆಯನ್ನು ತಡೆದ ಕಾಂಗ್ರೆಸ್ ಮುಖಂಡನೊಬ್ಬನನ್ನು ನಿಂದಿಸಿದ ಆರೋಪದ ಮೇರೆಗೆ ಕೆಜೆಪಿ ಅಭ್ಯರ್ಥಿ ನೆಹರು ಓಲೆಕಾರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಾವೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ, ತಮ್ಮ ಪಕ್ಷದ ಪರವಾಗಿ ಮತ ಚಲಾಯಿಸಿದರೆ ರು.  1 ಲಕ್ಷದ ವರೆಗೆ ಸಾಲ ಕೊಡಿಸಲಾಗುವುದು. ಇದಕ್ಕೆ ರು.  25 ಸಾವಿರ ಸಬ್ಸಿಡಿ ದೊರಕುತ್ತದೆ ಎಂದು ಹೇಳುತ್ತ ಕೆಜೆಪಿ ಪರವಾಗಿ ಮಹಿಳಾ ಕಾರ್ಯಕರ್ತರೊಬ್ಬರು ಪ್ರಚಾರ ನಡೆಸುತ್ತಿದ್ದರು ಎಂದರು. ಈ ಸುದ್ದಿಯ ಜಾಡು ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ತೆರಳಿದಾಗ, ಕೆಜೆಪಿ ಕಾರ್ಯಕರ್ತೆ ಮತದಾರರಿಂದ ಮತದಾನದ ಗುರುತಿನ ಚೀಟಿ ಹಾಗೂ ರೇಶನ್ ಕಾರ್ಡ್ ಪಡೆದುಕೊಂಡಿರುವುದು ತಿಳಿದು ಬಂದಿತು. ಇದನ್ನು ಆಕ್ಷೇಪಿಸಿದ್ದಕ್ಕೆ ಕೆಜೆಪಿ ಅಭ್ಯರ್ಥಿ ಓಲೇಕಾರ ಸ್ಥಳಕ್ಕೆ ಆಗಮಿಸಿ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹಿರೇಮಠ ಅವರನ್ನು ನಿಂದಿಸಿದ್ದರು ಎಂದು ಲಮಾಣಿ ದೂರಿದರು. ಕೆಜೆಪಿ ಪಕ್ಷದ ಕಾರ್ಯಕರ್ತೆ ಹಾಗೂ ಅಭ್ಯರ್ಥಿ ವಿರುದ್ಧ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ ಎಂದರು. ಎಂ.ಎಂ. ಹಿರೇಮಠ, ಗಾಜೇಗೌಡ್ರು, ಕೋಟೇಶಪ್ಪ ಬಸಗಣಿ, ಜಗದೀಶ ಬೆಂಡಿಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.