ಹಾವೇರಿ

ಯೋಗ ಉಚಿತ ಶಿಬಿರ

Published On :

ರಾಣಿಬೆನ್ನೂರು: ಭಾರತ ಸ್ವಾಭಿಮಾನ ಟ್ರಸ್ಟ್ ಪತಂಜಲಿ ಯೋಗ ಸಮಿತಿ ಜಿಲ್ಲಾ ಮತ್ತು ತಾಲೂಕಾ ಘಟಕ, ವಕೀಲರ ಸಂಘ ರಾಣಿಬೆನ್ನೂರು ಇವರ ಆಶ್ರಯದಲ್ಲಿ ಏ. 19ರಿಂದ 26ರ ವರೆಗೆ 8 ದಿನಗಳವರೆಗೆ ಪ್ರತಿ ದಿನ ಬೆಳಗ್ಗೆ 5.30ರಿಂದ 7 ಗಂಟೆಯವರೆಗೆ ಪಿ.ಬಿ. ರಸ್ತೆ ಪಕ್ಕದಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಪ್ರಾಣಾಯಾಮ ಹಾಗೂ ಯೋಗ ಉಚಿತ ಶಿಬಿರವನ್ನು ಏರ್ಪಡಿಸಲಾಗಿದೆ.  19ರಂದು ಬೆಳಗ್ಗೆ 5.30ರ ಸಮಯದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ರಾಮಕೃಷ್ಣ ಆಶ್ರಮದ ಪ್ರಕಾಶಾನಂದಜಿ ಮಹಾರಾಜ ವಹಿಸುವರು. ತ್ವರಿತ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ. ಅಸೂದೆ ಕಾರ್ಯಕ್ರಮ ಉದ್ಘಾಟಿಸುವರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ.ಪಿ. ನಾಡಿಗೇರ ಅಧ್ಯಕ್ಷತೆ ವಹಿಸುವರು. ಸಿವಿಲ್ ನ್ಯಾಯಾಧೀಶ ಎನ್.ಪಿ. ಕೋಪರ್ಡೆ, ಹೆಚ್ಚುವರಿ ನ್ಯಾಯಾಧೀಶರಾದ ಬಿ.ಎಸ್. ಹೊನ್ನಸ್ವಾಮಿ, ಆರ್. ಉಷಾರಾಣಿ, ಎಲ್.ಜಿ. ಮಿಸ್ಕಿನ್, ರಾಜ್ಯ ವಕೀಲರ ಪರಿಷತ್ ಸದಸ್ಯ ಕೆ. ಶಿವಲಿಂಗಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಎಚ್.ಎಸ್. ಕೂಂಡಜ್ಜಿ, ಕಾರ್ಯದರ್ಶಿ ಎಸ್.ಡಿ. ಬಣಕಾರ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.
ಸಾಹಿತ್ಯ ವೇದಿಕೆ ಪ್ರಶಸ್ತಿ
ರಾಣಿಬೆನ್ನೂರು: ಸಾಹಿತಿ ಎಂ.ಐ. ಹುಬ್ಬಳ್ಳಿಯವರು ರಚಿಸಿರುವ ಹಣೆ ಚಿಕ್ಕ ಹೂ ಬಾಲ ಕೋಣಗಳಿರಬೇಕು ಎಂಬ ಸ್ವ-ರಚಿತ ಕವನಕ್ಕೆ, ಮಂಡ್ಯ ಜಿಲ್ಲೆಯ ಡಾ. ಜಿ.ಶಂಪ ಜಿಲ್ಲಾ ಸಾಹಿತ್ಯ ವೇದಿಕೆ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಏ. 20ರಂದು ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ ಕಲಾಮಂದಿರದಲ್ಲಿ ನಡೆಯುವ 15ನೇ ರಾಜ್ಯ ಮಟ್ಟದ ಕವಿಕಾವ್ಯ ಮೇಳದಲ್ಲಿ ಎಂ.ಐ. ಹುಬ್ಬಳ್ಳಿಯವರಿಗೆ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.