ಹಾವೇರಿ

ಅಲ್ಪಸಂಖ್ಯಾತ, ದೀನದಲಿತರಿಗೆ ಶ್ರಮ

Published On :

ಶಿಗ್ಗಾಂವಿ:  ಅಲ್ಪಸಂಖ್ಯಾತ, ದೀನದಲಿತರು ಸೇರಿದಂತೆ ಪ್ರತಿಯೊಂದು ಸಮುದಾಯದ ಜನರು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಕಾರ್ಯನಿರ್ವಹಿಸುವ ಹೊಣೆ ತಮ್ಮದಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಹೆಚ್ಚಿನ ಸೌಲಭ್ಯ: ಪಟ್ಟಣದ ಜಯನಗರದಲ್ಲಿ ಶುಕ್ರವಾರ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಜಂತ್ರಿ ಸಮಾಜಕ್ಕೆ ಬಿಜೆಪಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡಿದೆ ಎಂದರು.
ಪಟ್ಟಣದಲ್ಲಿ ಮಂಜೂರಾಗಿರುವ ಆಶ್ರಯ ಮನೆಗಳ ಪೈಕಿ ಭಜಂತ್ರಿ ಜನಾಂಗಕ್ಕೆ ಶೇ. 26ರಷ್ಟು ಮನೆಗಳನ್ನು ವಿತರಿಸಲಾಗುವುದು. ಭಜಂತ್ರಿ ಸಮುದಾಯ ಜನರು ವಾಸವಾಗಿರುವ ಕಾಲನಿಗಳಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯ ಒದಗಿಸಿಕೊಡಲು ತಾವು ಶ್ರಮಿಸಿದ್ದೇವೆ ಎಂದರು.
ಗೆಲವು ನಿಶ್ಚಿತ: ಭಜಂತ್ರಿ ಸಮಾಜದ ಅಧ್ಯಕ್ಷ ಶೇಖಣ್ಣ ಭಜಂತ್ರಿ, ಸಚಿವ ಬೊಮ್ಮಾಯಿ ಅವರ ಶ್ರಮದಿಂದಾಗಿ ಬಿಜೆಪಿ ಸರ್ಕಾರ ಭಜಂತ್ರಿ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಪ್ರಸಕ್ತ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿಯವರ ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭೋವಿ ಸಮಾಜ ಅಧ್ಯಕ್ಷ ಅರ್ಜುನ ಹಂಚಿನಮನಿ, ಹಿಂದುಳಿದ ಕ್ಷೇತ್ರದ ಅಭಿವೃದ್ಧಿಗೆ ಸಚಿವ ಬೊಮ್ಮಾಯಿ ಪ್ರಾಮಾಣಿಕವಾಗಿ ಸ್ಪಂದಿಸಿದ ಪರಿಣಾಮವೇ ತಮ್ಮ ಕ್ಷೇತ್ರ ರಾಜ್ಯದ ಭೂಪುಟದಲ್ಲಿ ಕಾಣುವಂತಾಗಿದೆ. ಇಂತಹ ನಾಯಕನ ಗೆಲವಿಗೆ ಭೋವಿ ಸಮಾಜ ಟೊಂಕ ಕಟ್ಟಿ ನಿಂತಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಮುಖಂಡರನ್ನು ಸಚಿವ ಬೊಮ್ಮಾಯಿ ಸನ್ಮಾನಿಸಿದರು. ಭಜಂತ್ರಿ ಸಮಾಜದ ಮುಖಂಡ ಮಾರುತಿ ಭಜಂತ್ರಿ, ತಾಲೂಕು ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಪುರಸಭೆ ಸದಸ್ಯ ಶಿವಪ್ರಸಾದ ಸುರಗಿಮಠ, ಸುಭಾಸ ಚವ್ಹಾಣ, ಫಕ್ಕಿರೇಶ ಶಿಗ್ಗಾವಿ, ಪುರಸಭೆ ಮಾಜಿ ಅಧ್ಯಕ್ಷ ರಾಮು ಪೂಜಾರ, ವಿಜಯ ಬುಳಕ್ಕನವರ, ದಲಿತ ಮುಖಂಡ ಕರೆಪ್ಪ ಕಟ್ಟಿಮನಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.