ಹಾವೇರಿ

ನೀರಾವರಿ, ಕೈಗಾರಿಕೆಗೆ ಆದ್ಯತೆ

Published On :

ಹಾನಗಲ್ಲ: ಹಣ ಬಲದ ರಾಜಕಾರಣ ನಡೆಯದು, ಹಾನಗಲ್ಲ ತಾಲೂಕಿನಲ್ಲಿ ರಾಜಕೀಯ ಪಕ್ಷಗಳು ಕಾರ್ಯಕರ್ತರನ್ನು ಉಸಿರುಗಟ್ಟುವ ವಾತಾವರಣದಲ್ಲಿ ಸಿಲುಕಿಸಿವೆ. ಪ್ರಸಕ್ತ ಹೊಸ ಮುಖ ಬೇಕಾಗಿದೆ. ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ಇದ್ದು, ಹಾನಗಲ್ಲ ತಾಲೂಕಿನವನಾದ ನನ್ನ ಗೆಲವು ನೀರಾವರಿ ಅಭಿವೃದ್ಧಿ ಹಾಗೂ ಕೈಗಾರಿಕೆ ಸ್ಥಾಪನೆಗಾಗಿ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಕೆ. ಮೋಹನಕುಮಾರ ತಿಳಿಸಿದರು.
ಶನಿವಾರ ಹಾನಗಲ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ಜೆಡಿಎಸ್ ಮೂಲಕವೇ ಸ್ಪರ್ಧಿಸುವ ಆಶಯ ಹೊಂದಿದ್ದೆ. ಹಾನಗಲ್ಲ ತಾಲೂಕಿನಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಮಾಜ ಸಂಘಟನೆ ಮಾಡಲಿಲ್ಲ. ನನ್ನ ಸಂಘಟನೆ ಗಮನಿಸಿ ಚುನಾವಣಗೆ ಸ್ಪರ್ಧಿಸಲು ತಾಲೂಕಿನ ಮತದಾರರು ಪ್ರೋತ್ಸಾಹಿಸಿರುವರು. ಹಾನಗಲ್ಲ ತಾಲೂಕಿನ ಮತದಾರರಿಗೆ ಈಗ ಹೊಸ ಮುಖ, ಯುವ ನಾಯಕ ಬೇಕಾಗಿದ್ದು, ಅಂದಾಗ ಪ್ರಜಾಪ್ರಭುತ್ವದ ಆಶಯ ಈಡೇರುತ್ತದೆ. ಈ ದಿಸೆಯಲ್ಲಿ ಗೆಲವಿನ ಮೂಲಕ ಸಾಬೀತಾಗಲಿದೆ ಎಂದು ಮೋಹನಕುಮಾರ ತಿಳಿಸಿದರು.
ಕಾಂಗ್ರೆಸ್ ಹಾಗೂ ಕೆಜೆಪಿ ಪಕ್ಷಗಳೆರಡೂ ಜೆಡಿಎಸ್‌ಗೆ ಪ್ರತಿಸ್ಪರ್ಧಿ. ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಹಾನಗಲ್ಲ ತಾಲೂಕಿನಲ್ಲಿ ಶಾಸಕರಾಗಿ ಕೈಗಾರಿಕೆ ಸ್ಥಾಪನೆ, ನೀರಾವರಿಗೆ ಅದ್ಯತೆ ನೀಡಿಲ್ಲ. ಹಾನಗಲ್ಲ ನಗರದ ಅಭಿವೃದ್ಧಿ ಕಂಡಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ. ಚುನಾವಣೆಯಲ್ಲಿ ಗೆಲವು ಸಾಧಿಸಿದರೆ ನೀರಾವರಿ ಹಾಗೂ ಕೈಗಾರಿಕೆಗಳಿಗೆ ಆದ್ಯತೆ ಮತ್ತು ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಗುಡಿ ಕೈಗಾರಿಕೆ ಸ್ಥಾಪಿಸಲಾಗುವುದು ಎಂದರು. ಹಾನಗಲ್ಲ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಮಾಜಿ ಪ್ರಧಾನಿ ದೇವೆಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಜಮೀರ ಅಹಮ್ಮದ್, ಇಕ್ಬಾಲ್ ಅನ್ಸಾರಿ ಆಗಮಿಸಲಿದ್ದಾರೆ ಎಂದು ಮೋಹನಕುಮಾರ ತಿಳಿಸಿದರು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಖ್ವಾಜಾಮೊಹಿದ್ದೀನ ಅಣ್ಣೀಗೇರಿ, ಮುಖಂಡರಾದ ಎಸ್. ಎಲ್. ಬಣಕಾರ, ಪುರಸಭೆ ಮಾಜಿ ಉಪಾಧ್ಯಕ್ಷೆ ಸರೋಜಾ ಹುಳ್ಳಿಕಾಸಿ, ವಾಸಣ್ಣ ಮೂಡಿ ಮತ್ತಿತರರು ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.