ಹಾವೇರಿ

ಮಾನವೀಯ ಮೌಲ್ಯ ಕಾಪಾಡಿ

Published On :

ಹಿರೇಕೆರೂರು:  ಇಂದಿನ ಯುವಕರು ತಾಪತ್ರಯಗಳನ್ನು ದೂರ ಮಾಡಲು ಶಿವನಾಮ ಸ್ಮರಣೆ ಅಗತ್ಯ. ಭಗವಂತನ ಸ್ಮರಣೆ ಮಾಡುವುದು ಧರ್ಮಮಾರ್ಗವಾಗಿದೆ. ಸಮಾಜದಲ್ಲಿ ಎಲ್ಲರೂ ಮಾನವೀಯತೆ ಕಾಪಾಡಿಕೊಳ್ಳಬೇಂದು ಯಲ್ಲಪ್ಪ ಮಧೂರಕರ್ ಹೇಳಿದರು. ಪಟ್ಟಣದ ವಿಠ್ಠಲ ನಗರದ ಶ್ರೀ ಸಾಯಿ ಮಂದಿರದಲ್ಲಿ ಶುಕ್ರವಾರ ಶಿರಡಿ ಸಾಯಿಬಾಬಾ ಸೇವಾ ಅಭಿವೃದ್ಧಿ ಟ್ರಸ್ಟ ಆಶ್ರಯದಲ್ಲಿ ಏರ್ಪಡಿಸಿದ್ದ 5ನೇ ವರ್ಷದ ಶ್ರೀ ರಾಮನವಮಿ ಉತ್ಸವ ಹಾಗೂ ತೊಟ್ಟಿಲಿಗೆ ಹಾಕುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂಡಿ ಶ್ರೀ ಶಿವಲಿಂಗೇಶ್ವರ ಮಠದ ಪೀಠಾಧಿಪತಿ ಸದಾಶಿವ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಉತ್ಸವ ಆಚರಿಸುವ ಮೂಲಕ ಶ್ರೀ ರಾಮನ ಮೂರ್ತಿಯನ್ನು ತೊಟ್ಟಿಲಿಗೆ ಹಾಕುವ ಕಾರ್ಯ ಧರ್ಮ ಮಾರ್ಗವಾಗಿದೆ ಎಂದರು. ಪಾರ್ವತಿಬಾಯಿ ಮಧೂರಕರ್, ತಾಲೂಕು ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಎಲ್.ಬಿ. ತೆಂಬದ, ಡಾ೤ ಬಿ.ಎಸ್. ಜ್ಞಾನೇಂದ್ರಕುಮಾರ, ಕಿರುತೆರೆ ಕಲಾವಿದ ಗುರುಶಾಂತ ಯತ್ತಿನಹಳ್ಳಿ, ಶಿವಲಿಂಗಪ್ಪ ಸೈನಿಕ, ರುದ್ರಪ್ಪ ಶೆಟ್ಟರ, ಮಾರುತಿ ಮಧೂರಕರ್, ನಾಗರಾಜ ಕಲಾಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.